ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ವಿಶೇಷ ಸೇವಾ ಶಿಬಿರ

ಲೋಕದರ್ಶನ ವರದಿ

ಬ್ಯಾಡಗಿ 13: ದೇಶ ಆಥರ್ಿಕ ಸಂಕಷ್ಟಕ್ಕೆ ಸಿಲುಕಿದೆ, ದೇಶದ ದಿಕ್ಕನ್ನು ಬದಲಿಸುವ ಶಕ್ತಿ ಯುವಕರ ಕೈಯಲ್ಲಿದ್ದರೂ ಸಕರ್ಾರ ನೀಡುವಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಯುವಕರು ಕೈಚಾಚುತ್ತಿರುವುದು ವಿಪರ್ಯಾಸ, ಆದರೆ ಇತ್ತೀಚೆಗೆ ದರಿದ್ರರಾಗುತ್ತಿರುವ ಯವಕರು ದುಶ್ಚಟಗಳ ದಾಸರಾಗುತ್ತಿದ್ದು ತಮ್ಮನ್ನು ನೆಚ್ಚಿದ ಸಮಾಜ, ಕುಟಂಬ ಹಾಗೂ ದೇಶಕ್ಕೆ ಹೊರೆಯಾಗುತ್ತಿದ್ದಾರೆ ಎಂದು ಉಪನ್ಯಾಸಕ ವಿರೇಶ ಹಿತ್ತಲಮನಿ ಖೇದ ವ್ಯಕ್ತಪಡಿಸಿದರು.

 ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಮೋಟೆಬೆನ್ನೂರಿನ ಬಿಆರ್ಇ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜು ವಿಭಾಗದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ವಯೋವೃದ್ಧರಿಗೆ ಆಯ್ಕೆಗಳಲ್ಲಿ ಎಂಬುದನ್ನು ಯುವಕರು ನೆನಪಿನಲ್ಲಿಡಬೇಕು.

   ತಮ್ಮ ಮೇಲೆ ಸಮಾಜ ಹಾಗೂ ದೇಶ ಬಹಳಷ್ಟು ನೀರಿಕ್ಷೆಗಳನ್ನಿಟ್ಟಿದೆ, ತಮಗೆ ಸಿಕ್ಕಂತಹ ಅಮೂಲ್ಯ ಸಮಯವನ್ನು ದುಶ್ಚಟಗಳಿಗೆ ಅಥವಾ ದೇಶಕ್ಕೆ ಮಾರಕವಾದ ಕೃತ್ಯಗಳಿಗೆ ಬಳಕೆ ಮಾಡದಂತೆ ಮನವಿ ಮಾಡಿದರು.

     ದಾರಿದ್ರ್ಯದಿಂದ ಬಡತನಕ್ಕೆ ಆಹ್ವಾನ: ತಮಲ್ಲೇ ಇನ್ನೊಬ್ಬರಿಗೆ ಉದ್ಯೋಗ ನೀಡುವಷ್ಟು ಶಕ್ತಿಯಿರುವಾಗ ಸಕರ್ಾರದ ಯೋಜನೆಗಳಿಗಾಗಿ ಯುವಕರು ಎದುರು ನೋಡುವ ಅವಶ್ಯಕತೆಯಿಲ್ಲ, ಸಕರ್ಾರದ ಪುಕ್ಕಟೆ ಯೋಜನೆಗಳಿಂದ ಆಥರ್ಿಕ ನಷ್ಟ ಅನುಭವಿಸಬೇಕಾಗುತ್ತದೆ, ತಮ್ಮಲ್ಲಿರುವ ದಾರಿದ್ರ್ಯದಿಂದ ಬಡತನವನ್ನು ಆಹ್ವಾನ ಮಾಡಿಕೊಂಡಂತಾಗಲಿದೆ ಇನ್ನಾದರೂ ಎಚ್ಚೆತ್ತುಕೊಂಡು ಸಾಮೂಹಿಕ ಹೊಣೆಗಾರಿಕೆ ತೋರುವ ಮೂಲಕ ತಮ್ಮಲ್ಲಿರುವ ಶಕ್ತಿಯನ್ನು ಬಳಸಿ ಸಂಕಷ್ಟದಲ್ಲಿರುವ ದೇಶಕ್ಕೆ ನೆರವಾಗುವಂತೆ ಸಲಹೆ ನೀಡಿದರು.

     ಯುವಕರನ್ನು ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಬೇಡಿ: ಯುವಕರ ಪುನರ್ ಸಂಯೋಜನೆಯಿಂದ 20 ದಶಕಗಳ ಸುಧೀರ್ಘ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾಧ್ಯವಾಯಿತಲ್ಲದೇ, ಅಂತಹದ್ದೇ ಯುವಕರ ಆಥರ್ಿಕ ಸಂಯೋಜನೆಯಿಂದ ಸೈನಿಕ ದಳವನ್ನು ನಿಮರ್ಿಸಿ ಪಡೆದಂತಹ ಸ್ವಾತಂತ್ರ್ಯವನ್ನು ರಕ್ಷಣೆಗಾಗಿ ಇಡಲಾಗಿದೆ, ಹೀಗಾಗಿ ಎಲ್ಲ ಹಂತದಲ್ಲೂ ಯುವಕರ ಪಾತ್ರ ಅತೀ ಮುಖ್ಯವಾಗಿದ್ದು ಜಡತ್ವವನ್ನು ಬಿಟ್ಟು ಯುವಕರು ಕ್ರೀಯಾಶೀಲತೆಯತ್ತ ಮುಂದಡಿ ಇಡುವಂತೆ ಕರೆ ನೀಡಿದರು.

       ಕಾಯಕ ಧರ್ಮದ ಮುಂದೆ ಎಲ್ಲವೂ ಗೌಣ: ಪಂಚಾಯ್ ಅಭಿವೃದ್ಧಿ ಅಧಿಕಾರಿ ಪರುಶರಾಮ ಅಗಸನಹಳ್ಳೀ ಮಾತನಾಡಿ, ವಿಶ್ವದ ಯಾವುದೇ ಅರ್ಥ ಶಾಸ್ತ್ರಜ್ಞನ ಪ್ರಮೇಯಗಳು ಬಸವೇಶ್ವರರ 'ಕಾಯಕ ಧರ್ಮಕ್ಕೆ ಸಮನಾಗಲಾರದು, ಕಾಯಕವೆಂಬುದು ಎಲ್ಲ ಜಾತಿ ಧರ್ಮಗಳನ್ನು ಮೀರಿದ್ದು ಇದರಿಂದ ಮಾತ್ರ ಸಮಾಜ ಹಾಗೂ ದೇಶವನ್ನು ಅಥರ್ಿಕವಾಗಿ ಸಬಲಗೊಳಿಸಲು ಸಾಧ್ಯ, ಬಡತನವೆಂಬ ದಾರಿದ್ರ್ಯದಿಂದ ಹೊರಬರಲು 'ಕಾಯಕ ಧರ್ಮ ಒಂದೇ ಅಂತಿಮ ಸತ್ಯವೆಂಬುದನ್ನು ಅವರ ವಚನದ ಸಾಲುಗಳಲ್ಲಿ ಬಹಳಷ್ಟು ಮಾಮರ್ಿಕವಾಗಿ ತಿಳಿಸಿದ್ಧಾರೆ ನಿಟ್ಟಿನಲ್ಲಿ ಯುವಕರು ಉತ್ತಮ ಕಾಯಕಗಳಲ್ಲಿ ತೊಡಗುವಂತೆ ಕರೆ ನೀಡಿದರು.

     ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ರಂಗಾರಿ, ಮುಖಂಡರಾದ ಚನ್ನಬಸಪ್ಪ ಬೂದಿಹಾಳ, ಮುರಿಗೆಪ್ಪ ಹೆಡಿಯಾಲ, ನಾಗಪ್ಪ ಪೂಜಾರ, ಚನ್ನಬಸನಗೌಡ ಬುಡ್ಡನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದರು. ಜಯಶ್ರೀ ಶೆಲವಡಿಮಠ ಸ್ವಾಗತಿಸಿದರು, ಮಂಜಪ್ಪ ಬಾರಕೇರ ವಂದಿಸಿದರು..