ಕೀಟ ಪ್ರಪಂಚದ ವಿಸ್ಮಯಗಳ ಕುರಿತು ವಿಶೇಷ ಉಪನ್ಯಾಸ

ಕೀಟ ಪ್ರಪಂಚದ ವಿಸ್ಮಯಗಳ ಕುರಿತು ವಿಶೇಷ ಉಪನ್ಯಾಸ Special Lecture on the Wonders of the Insect World

ಧಾರವಾಡ, ಆ. ೧೯: ಪ್ರಕೃತಿಯ ಅಪರೂಪದ ಹಾಗೂ ನಮ್ಮ ಗಮನಕ್ಕೆ ಅಷ್ಟಾಗಿ ಬಾರದ ಕೀಟಗಳು ಮತ್ತು ಜೇಡಗಳ ಜೀವನ, ಉಳಿವು-ಅಳಿವು, ಪಾರಿಸಾರಿಕ ಕೊಡುಗೆ ಹಾಗೂ ಜನವಿಜ್ಞಾನಿಗಳ ಸಹಯೋಗದಲ್ಲಿ ನಡೆಯುತ್ತಿರುವ ಅಧ್ಯಯನ ಮತ್ತು ಕ್ಷೇತ್ರ ಸಂಶೋಧನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆ. ೨೧ರಂದು ಶುಕ್ರವಾರ ಸಂಜೆ ೬.೧೫ಕ್ಕೆ ಧಾರವಾಡದ ಸಾಧನಕೇರಿ ಕೊನೆ ಬಸ್ ನಿಲ್ದಾಣದ ಸಮೀಪದ ಭ್ರುವಮ್ ಗಾರ್ಡನ್ ಹಾಗೂ ನೇಚರ್ ಫಸ್ಟ್ ಗಾರ್ಡನ್ ಸ್ಟುಡಿಯೋ ಆವರಣದಲ್ಲಿರುವ ಮೈಂಡ್‌ವೇವ್ ಎಜ್ಯು ಹಬ್ ಸಭಾಂಗಣದಲ್ಲಿ ನಡೆಯಲಿದೆ.

ಪುಣೆಯ ಎಂಟಮಾನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ವರ್ಟಿಬ್ರೇಟ್ ಜೂಆಲಜಿ ಸಂಸ್ಥೆಯ ಸಹಯೋಗದಲ್ಲಿ, ಧಾರವಾಡದ ನೇಚರ್ ರಿಸರ್ಚ್ ಸೆಂಟರ್ ಹಾಗೂ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ ವತಿಯಿಂದ ಕೀರ್ತಿಶೇಷ ಮಾತೋಶ್ರೀ ಶ್ರೀಮತಿ ಸಿದ್ದಲಿಂಗವ್ವ ವಿರೂಪಾಕ್ಷಯ್ಯ ಹಿರೇಮಠ ಹಾಗೂ ಕೀರ್ತಿಶೇಷ ಸ್ವಾತಂತ್ರ್ಯ ಸೇನಾನಿ ಶ್ರೀ ವಿರೂಪಾಕ್ಷಯ್ಯ ಸಂಗಯ್ಯ ಹಿರೇಮಠ ಅವರ ಸಂಸ್ಮರಣಾರ್ಥ ಆಯೋಜಿಸಿರುವ ಸರಣಿ-೬ರ ಮೂಲತತ್ವ ವಿಚಾರೋಪನ್ಯಾಸದಲ್ಲಿ ‘ಕೀಟ ಪ್ರಪಂಚದ ವಿಸ್ಮಯಗಳು’ ವಿಷಯ ಮಂಡನೆಯಾಗಲಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಕೀಟಶಾಸ್ತ್ರಜ್ಞ ಪುಣೆಯ ಈಶಾನ್ ಪಹಾಡೆ ಹಾಗೂ ಜೇಡಗಳ ತಜ್ಞ ಅಥರ್ವ ಕುಲಕರ್ಣಿ ಅವರು ದೃಶ್ಯ-ಶ್ರಾವ್ಯ ಮಾಧ್ಯಮ ಹಾಗೂ ಭಿತ್ತಿಚಿತ್ರ ಪ್ರದರ್ಶನದ ಮೂಲಕ ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಪರಿಸರವಾದಿ ಪಂಚಾಕ್ಷರಿ ವಿ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ.

ಏಳನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಪರಿಸರಾಸಕ್ತರು, ಕ್ಷೇತ್ರ ತಜ್ಞರು, ಸಂಶೋಧಕರು ಹಾಗೂ ಜನವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಹಾರ್ದಿಕ ಸ್ವಾಗತವಿದೆ ಎಂದು ನೇಚರ್ ರಿಸರ್ಚ್ ಸೆಂಟರ್ (ರಿ.), ಧಾರವಾಡದ ವಿಶ್ವಸ್ಥ ಹರ್ಷವರ್ಧನ ವಿ. ಶೀಲವಂತ ತಿಳಿಸಿದ್ದಾರೆ.

ಸಂಪರ್ಕ: ೯೮೮೬೫ ೨೧೬೬೪