10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ನಾಯ್ಡು
ನವದೆಹಲಿ 19: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಬುಧವಾರ ಆರಂಭಗೊಂಡ ಮುಂಗಾರು ಅಧಿವೇಶನದಲ್ಲಿ 10 ಭಾಷೆಗಳಲ್ಲಿ ಮಾತನಾಡಿ ಹೊಸ ದಾಖಲೆ ನಿಮರ್ಿಸಿದ್ದಾರೆ.
ಬುಧವಾರ ಆರಂಭವಾದ ರಾಜ್ಯಸಭೆ ಕಲಾಪದಲ್ಲಿ ವೆಂಕಯ್ಯ ನಾಯ್ಡು ಅವರು, ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದ ಘೋಷಣೆ ಮಾಡುವಾಗ ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಿದ್ದು, ಇದು ಹೊಸ ದಾಖಲೆಯಾಗಿ ಮಾರ್ಪಟ್ಟಿದೆ.
ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ರಾಜ್ಯಸಭೆ ಕಲಾಪದಲ್ಲಿ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ಪ್ರಕಟಿಸಿರು. ಆದರೆ ಸದಸ್ಯರು ಮಾತನಾಡುವಾಗ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದೂ ನಾಯ್ಡು ಮಾಹಿತಿ ನೀಡಿದರು.
ರಾಜ್ಯಸಭೆಯಲ್ಲಿ ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು , ತೆಲುಗು , ಉದರ್ು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡುವ ಅವಕಾಶ ಇತ್ತು. ಇದೀಗ ಹೆಚ್ಚುವರಿಯಾಗಿ ದೋಗ್ರಿ, ಕಾಶ್ಮೀರಿ, ಕೊಂಕಣಿ, ಸಾಂಥಾಲಿ ಮತ್ತು ಸಿಂಧಿ ಭಾಷೆಗಳ ಸೇರ್ಪಡೆಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 