ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ದಕ್ಷಿಣ ಪಶ್ಚಿಮ ರೈಲ್ವೆಯ ಪಿಸಿಸಿಎಂ
South Western Railway PCCM visits Siddharoodha Matha and seeks blessings
ಹುಬ್ಬಳ್ಳಿ 13 : ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪಿಸಿಸಿಎಂ) ಬಾಲಾಜಿ ಅರುಣಕುಮಾರ್ ಅವರು ಶನಿವಾರ ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧವಾಗಿರುವ ಸಿದ್ಧಾರೂಢ ಸ್ವಾಮೀಜಿ ಮಹಾರಾಜರ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದು ವಿಶೇಷ ಪೂಜೆ, ಆರತಿ ನೆರವೇರಿಸಿದರು. ಇದೇ ವೇಳೆ ದೇಶ ಹಾಗೂ ರಾಜ್ಯದ ಜನರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಮಠದಲ್ಲಿ ಸಿದ್ಧಾರೂಢ ಸ್ವಾಮೀಜಿ ಮಠ ಟ್ರಸ್ಟ್ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ದಕ್ಷಿಣ ಪಶ್ಚಿಮ ರೈಲ್ವೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಜೆಡ್‌ಆರ್ಯುಸಿಸಿ) ಸದಸ್ಯರಾದ ಮಹೇಂದ್ರ ಸಿಂಘಿ ಅವರು ಬಾಲಾಜಿ ಅರುಣಕುಮಾರ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಸಿದ್ಧಾರೂಢ ಸ್ವಾಮೀಜಿಯವರ ಜೀವನದರ್ಶನ, ಅವರ ಆಧ್ಯಾತ್ಮಿಕ ಸಂದೇಶಗಳು ಹಾಗೂ ಮಠದಿಂದ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಮತ್ತು ಸೇವಾ ಚಟುವಟಿಕೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಹುಬ್ಬಳ್ಳಿ ವಲಯದಲ್ಲಿ ಪಿಸಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಬಾಲಾಜಿ ಅರುಣಕುಮಾರ್ ಅವರು, ಮಠದ ಸೇವಾ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ಧಾರೂಢ ಮಠವು ಆಧ್ಯಾತ್ಮಿಕ ಶಾಂತಿ ಮತ್ತು ಜೀವನಕ್ಕೆ ಪ್ರೇರಣೆ ನೀಡುವ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಆಗಮಿಸಿದಾಗ ಮನಸ್ಸಿಗೆ ಅಪಾರ ನೆಮ್ಮದಿ ಹಾಗೂ ಸಕಾರಾತ್ಮಕ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.
ಸಮಾಜಸೇವೆ, ಮಾನವ ಕಲ್ಯಾಣ ಹಾಗೂ ಆಧ್ಯಾತ್ಮಿಕ ಜಾಗೃತಿಯ ಕ್ಷೇತ್ರದಲ್ಲಿ ಮಠ ಸಲ್ಲಿಸುತ್ತಿರುವ ಸೇವೆಯನ್ನು ಅವರು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಯುವರಾಜ್, ಅಭಯ ಸೂಜಿ, ಪ್ರವಾಸಿ ಪ್ರಯಾಣಿಕರ ರಾಜ್ಯ ಕಾರ್ಯದರ್ಶಿ ಸುಭಾಷಚಂದ್ರ ಡಂಕ್, ಮಠದ ಆಡಳಿತ ಸಮಿತಿಯ ಸದಸ್ಯ ತುಕಾರಾಮ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ 