ದಕ್ಷಿಣ ಭಾರತ ವಿಜ್ಞಾನ ಮೇಳ: ಶಿಕ್ಷಕ ಆನಂದ ಆಶ್ರಿತ್ ಇವರಿಗೆ ವಿಶೇಷ ಬಹುಮಾನ

ದಕ್ಷಿಣ ಭಾರತ ವಿಜ್ಞಾನ ಮೇಳ: ಶಿಕ್ಷಕ ಆನಂದ ಆಶ್ರಿತ್ ಇವರಿಗೆ ವಿಶೇಷ ಬಹುಮಾನ South India Science Fair: Teacher Anand Ashrith gets special award


ಕೊಪ್ಪಳ  27:  ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ (ಪ್ರೌಢವಿಭಾಗ) ಗಣಿತ ಶಿಕ್ಷಕ ಆನಂದ ಆಶ್ರಿತ್ ಇವರಿಗೆ ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ  ವಿಶೇಷ ಬಹುಮಾನ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.  

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಕೊಲ್ಲೂರ್‌ನಲ್ಲಿರುವ ಗಾಡಿಯಂ ಶಾಲೆಯಲ್ಲಿ ಜನವರಿ 19 ರಿಂದ 23ರ ವರೆಗೆ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಶಿಕ್ಷಕ ಆನಂದ್ ಆಶ್ರಿತ್ ಅವರು ಶಿಕ್ಷಕರ ವಿಭಾಗದಲ್ಲಿ ಭಾಗವಹಿಸಿ ಗಣಿತದ ಮಾದರಿಗಳನ್ನು ಪ್ರದರ್ಶಿಸುವುದರ ಮೂಲಕ ವಿಶೇಷ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಭಾರತದ ಆರು ರಾಜ್ಯಗಳಿಂದ ಸುಮಾರು 60 ಶಿಕ್ಷಕರು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು. ಗಣಿತ ಶಿಕ್ಷಕರಾದ ಆನಂದ ಆಶ್ರಿತ್ ಇವರು ವೃತ್ತಗಳು ಪರಿಕಲ್ಪನೆಗೆ ಸಂಬಂಧಪಟ್ಟಂತ ಪ್ರಮೇಯಗಳನ್ನು ಮಾದರಿ ರೂಪದಲ್ಲಿ ತಯಾರಿಸಿ ವಿಷಯವನ್ನು ಪ್ರಸ್ತುತಪಡಿಸಿದ್ದಾರೆ. 

ಶಿಕ್ಷಕರ ಸಾಧನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ್, ಡಯಟ್‌ನ ಪ್ರಾಚಾರ್ಯರು, ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ ಹಾಗೂ ಉಪಪ್ರಾಂಶುಪಾಲರಾದ ವೀರಯ್ಯ ಸೂಡಿಮಠ್, ಎಸ್‌ಡಿಎಂಸಿ ಅಧ್ಯಕ್ಷರಾದ ಸಂಜೀವಮೂರ್ತಿ ಚೆನ್ನದಾಸರ್, ಮತ್ತು ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.