28 ರಂದು ಸೌಹಾರ್ದ ಸಹಕಾರಿ ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮ: ಜಿ. ನಂಜನಗೌಡ

28 ರಂದು   ಸೌಹಾರ್ದ ಸಹಕಾರಿ ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮ: ಜಿ. ನಂಜನಗೌಡ Souharda Sahakari Rajata Mahotsava closing program on 28th: ​​G. Nanjan Gowda

ಲೋಕದರ್ಶನ ವರದಿ 

ಬೆಳಗಾವಿ 26:  ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ,  ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಬೆಳಗಾವಿಯ ಕೆ.ಎಲ್‌.ಇ. ಜಿರಗೆ ಭವನದಲ್ಲಿ  ಭಾನುವಾರ 28 ರಂದು ಬೆಳಿಗ್ಗೆ 10.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು  ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ  ಜಿ. ನಂಜನಗೌಡ ಅವರು ಹೇಳಿದರು. 

ನಗರದಲ್ಲಿ  ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ  ರಜತ ಮಹೋತ್ಸವವನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ.  ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದೆ.  121 ವರ್ಷಗಳ ಭವ್ಯ ಇತಿಹಾಸವುಳ್ಳ ಭಾರತದ ಸಹಕಾರ ಚಳುವಳಿ ವ್ಯಾಪ್ತಿಯಲ್ಲಿ, ಗಾತ್ರದಲ್ಲಿ ವಿಶ್ವಮಾನ್ಯತೆಯನ್ನು ಪಡೆದಿದೆ. 

ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು   ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಧ್ವಜಾರೋಹಣವನ್ನು ಸಚಿವೆ ಲಕ್ಷ್ಮೀ ಆರ್‌.  ಹೆಬ್ಬಾಳ್ಳರ್ ಅವರು  ನೇರವೆರಿಸಲಿದ್ದಾರೆ.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ನಂಜನಗೌಡ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದರಾದ ಜಗದೀಶ ಶೆಟ್ಟರ್ ಆಗಮಿಸಲಿದ್ದಾರೆ.   ಕೆ.ಎಲ್‌.ಇ. ಸಂಸ್ಥೆ ಕಾರ್ಯಾಧ್ಯಕ್ಷರಾದ  ಪ್ರಭಾಕರ ಕೋರೆ, ಶಾಸಕರಾದ  ಲಕ್ಷ್ಮಣ ಸಂ. ಸವದಿ, ಮಾಜಿ ವಿಧಾನ ಪರಿಷತ್ ಸದಸ್ಯರು ಮಹಾಂತೇಶ ಕವಟಗಿಮಠ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ  ರಮೇಶ ವಿ. ಕತ್ತಿ,  ಎಸ್‌.ಎಸ್ ಪಾಟೀಲ , ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ್  ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ,   ಸಂಸದೆ ಪ್ರಿಯಾಂಕಾ ಜಾರಕಿಹೊಳಿ , ಶಾಸಕರಾದ ಅಭಯ್ ಪಾಟೀಲ, ಆಸಿಫ್ (ರಾಜು) ಸೇಠ   ಹಾಗೂ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು. 

1904ರಲ್ಲಿ ಆರಂಭವಾದ ಸಹಕಾರ ಚಳುವಳಿಯು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದೊರಕಿಸಿಕೊಡಬೇಕೆಂಬ ಮಹತ್ತರ ಆಶಯವನ್ನು ಇರಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾ ಭಾರತದೇಶದ ಆರ್ಥಿಕತೆಯ ಸುಭದ್ರತೆಗೆ ತನ್ನದೇ ಆದ ಚಾಪನ್ನು ಹೊಂದಿದೆ. ಬಡತನ ನಿವಾರಣೆ. ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯದಂತಹ ಕಾರ್ಯಕ್ರಮಗಳು ಚಳುವಳಿಯ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಯಶಸ್ವಿಯಾಗಿ ಕಾರ್ಯಗತವಾಗಿದೆ. ಕೃಷಿ ಕ್ರಾಂತಿ, ಕ್ಷೀರಕ್ರಾಂತಿ, ರಸಗೊಬ್ಬರ ಕ್ಷೇತ್ರದಲ್ಲಿ ಸಹಕಾರ ಚಳುವಳಿ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದು ತಿಳಿಸಿದರು. 

ಜವಾಬ್ದಾರಿಯುತ ಸದಸ್ಯ, ಸ್ವಯಂ ಆಡಳಿತ ನಿರ್ವಹಣೆ, ಪ್ರಗತಿಪರ ಕಾರ್ಯಕ್ರಮಗಳು ಸೌಹಾರ್ದ ಸಹಕಾರಿಗಳ ಯಶಸ್ಸಿನ ತಳಹದಿ. "ಸ್ವಾಯತ್ತತೆ, ಸ್ವಯಂ ಆಡಳಿತ ಹಾಗೂ ಸ್ವಯಂ ನಿಯಂತ್ರಣ” ಸೌಹಾರ್ದ ಸಹಕಾರಿಗಳ ಧೈಯವನ್ನಾಗಿಸಿಕೊಂಡು 01-01-2001ರಲ್ಲಿ ಸೌಹಾರ್ದ ಸಹಕಾರಿಕಾಯ್ದೆ ಜಾರಿಗೆ ಬಂದ ನಂತರ 2002ರಲ್ಲಿ ಸಂಯುಕ್ತ ಸಹಕಾರಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ.  01 ಜನವರಿ 2025ಕ್ಕೆ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು 25 ವರ್ಷಗಳಾಗಿದೆ. ಹೀಗಾಗಿ ರಜತ ಮಹೋತ್ಸವ ವರ್ಷವಾದರಿಂದ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಬೆಳಗಾವಿ ಜಿಲ್ಲೆಯಲ್ಲಿ 15 ತಾಲುಕುಗಳಿದ್ದು, ಸಹಕಾರ ಇಲಾಖೆಯ ಆಡಳಿತ ದೃಷ್ಟಿಯಿಂದ ಬೆಳಗಾವಿ, ಹುಕ್ಕೇರಿ, ಖಾನಾಪುರ ತಾಲೂಕುಗಳು ಸೇರೆ​‍್ಡಯಾಗಿವೆ.  

ಬೈಲಹೊಂಗಲ ಉಪವಿಭಾಗ :ಬೈಲಹೊಂಗಲ, ಗೋಕಾಕ, ಸವದತ್ತಿ, ರಾಮದುರ್ಗ ತಾಲೂಕುಗಳು ಸೇರೆ​‍್ಡಯಾಗಿವೆ. ಚಿಕ್ಕೋಡಿ ಉಪವಿಭಾಗ: ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕುಗಳು ಸೇರೆ​‍್ಡಯಾಗಿವೆ.  ಜಿಲ್ಲೆಯಲ್ಲಿ ಒಟ್ಟು 1200 ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದೆ ಎಂದರು. ರಾಜ್ಯದಲ್ಲಿ 6500ಕ್ಕೂ ಹೆಚ್ಚು ಸಹಕಾರಿಗಳು ಕಾರ್ಯನಿರ್ವಸುತ್ತಿವೆ. 1740 ಇ-ಸ್ಟಾಂಪಿಂಗ್ ಕೇಂದ್ರಗಳಿವೆ. ಸಹಕಾರಿ ಕ್ಷೇತ್ರದಲ್ಲಿ 75 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ.  ಒಂದು ಲಕ್ಷ ಜನರಿಗೆ ಉದ್ಯೋಗಳನ್ನು ಕಲ್ಪಿಸಲಾಗಿದೆ. ಬೆಂಗಳರೂ, ಬೆಳಗಾವಿ ದಾವಾ ಪಂಚಾಯ್ತಿ ನ್ಯಾಯಾಲಯ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. 

ಈ ವೇಳೆ  ಸುದ್ದಿಗೋಷ್ಠಿಯಲ್ಲಿ  ನಿರ್ದೇಶಕರಾದ ಜಗದೀಶ ಕವಟಗಿಮಠ, ಬಸವರಾಜ ಹೊಂಗಲ ಹಾಗೂ ಇತರರು ಇದ್ದರು.