ಸೋಮನಗೌಡ ಪಾಟೀಲಗೆ ಗವಿಶ್ರೀ ಪ್ರಶಸ್ತಿ ಪ್ರದಾನ’ವೀರಶೈವ ಮಠಗಳಿಂದ ಅನ್ನ,ಅಕ್ಷರ ಕ್ರಾಂತಿ

ಸೋಮನಗೌಡ ಪಾಟೀಲಗೆ ಗವಿಶ್ರೀ ಪ್ರಶಸ್ತಿ ಪ್ರದಾನ’ವೀರಶೈವ ಮಠಗಳಿಂದ ಅನ್ನ,ಅಕ್ಷರ  ಕ್ರಾಂತಿ Somanagouda Patil conferred with Gavisree Award, 'Food and letter revolution from Veerashaiva Maths'

ಹೂವಿನಹಡಗಲಿ:  08- ’ನಾಡಿನ ವೀರಶೈವ ಲಿಂಗಾಯಿತ ಮಠಗಳು ಜಾತ್ಯತೀತವಾಗಿ ಎಲ್ಲ ಸಮುದಾಯದವರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿವೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.ಪಟ್ಟಣದ ಗವಿಸಿದ್ದೇಶ್ವರ ಸ್ವಾಮಿಯ 31ನೇ ವರ್ಷದ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ಭಕ್ತ ಹಿತ ಚಿಂತನಾ ಸಭೆಯಲ್ಲಿ ’ಗವಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಕೊಪ್ಪಳ  ಮುಖಂಡ ಸಿ.ವಿ.ಚಂದ್ರಶೇಖರ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮಿ ನುಡಿದಂತೆ ನಡೆದು ಆದರ್ಶ ವಾಗಿದ್ದಾರೆ ಎಂದರು.

ಅನ್ನದಾನೀಶ್ವರಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂ.ಲಿಂಗೇಶ್ವರ ಸ್ವಾಮೀಜಿ ಸಾಖಾ ಮಠಕ್ಕೆ ಉತ್ತಮ ಬುನಾದಿ ಹಾಕಿದ್ದಾರೆ. ಅವರ ಆಶಯದಂತೆ ಮಠವನ್ನು ಜೀರ್ಣೋದ್ದಾರ ಮಾಡಿರುವ ಹಿರಿಶಾಂತವೀರ ಸ್ವಾಮಿ ಸಾಧನೆ ಸ್ಮರಿಸಿದರು.ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಹಿರಿಶಾಂತವೀರ ಸ್ವಾಮೀಜಿ, ಕೊಟ್ಟೂರು ಜಾನು ಕೋಟಿ ಮಠದ ಸಿದ್ಧಲಿಂಗ   ಶಿವಚಾರ್ಯ ಸ್ವಾಮೀಜಿ, ಹೆಬ್ಬಾಳ ಸಮ ನಾಗಭೂಷಣ ಸ್ವಾಮೀಜಿ, ಮಲ್ಲಿನಕೆರೆ ಮಠದ  ಅಭಿನವ ಚನ್ನಬಸವ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ,  ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ, ಭಕ್ತಿಸೇವೆ ಸಲ್ಲಿಸಿದ ಭತ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರು ’ಜೋಕುಮಾರಸ್ವಾಮಿ’ ಕಿರುನಾಟಕ ಪ್ರದರ್ಶನ ಗಮನ ಸೆಳೆಯಿತು.