ಮುಕ್ತ ಮನಸ್ಸಿನಿಂದಸಮಸ್ಯೆಗಳನ್ನುತಿಳಿಸಿರಿ : ಕೋಳೂರ
Solve problems with an open mind: Kolur
ಶಿಗ್ಗಾವಿ 27 : ಪ್ರತಿಯೊಂದು ಮನೆಯ ಸದಸ್ಯರೊಂದಿಗೆ ಬೆರತು ನಿರ್ಭಯ ವಾತಾವರಣ ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ ಉದ್ದೇಶ ಎಂದು ಎ.ಎಸ್.ಐ ಪಿ.ಆರ್.ಕೋಳೂರ ಹೇಳಿದರು.
ಪಟ್ಟಣದ 1 ನೇ ವಾರ್ಡಿನ ಮೈಲಾರಲಿಂಗೇಶ್ವರ ದೇವಸ್ಥಾನ ಹತ್ತಿರ ಮನೆಗಳಿಗೆ ಬೇಟಿ ನೀಡಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸರಕಾರದ ಆದೇಶದಂತೆ ಮನೆ ಮನೆಗೆ ಹೋಗಿ ಪ್ರತಿಯೊಂದು ಮನೆಯ ಸದಸ್ಯರ ಮಾಹಿತಿಯನ್ನು ಕಲೆಹಾಕಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನ ಪಡುತ್ತೇವೆ ಆದ್ದರಿಂದ ಮುಕ್ತ ಮನಸ್ಸಿನಿಂದ ನಿಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿರಿ ಎಂದರು.
ಹವಾಲ್ದಾರ ಎಮ್.ಎಸ್.ಸೂರಗೊಂಡ ಮಾತನಾಡಿ ಮಾಹಿತಿ ಕಲೆಹಾಕಿದ 40-50 ಮನೆಯ ಸದಸ್ಯರ ವಾಟ್ಸಫ್ ಗುಂಪು ಮಾಡಿ ಅದರ ಮುಖಾಂತರ ಮಾಹಿತಿಯನ್ನು ಕ್ರೋಡೀಕರಿಸಿ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಕಾನೂನು ರಿತ್ಯ ಪ್ರಯತ್ನ ಮಾಡುವ ಉದ್ದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಮನೆಯ ಮಾಲಕರಾದ ರಾಮಚಂದ್ರ ಶ್ರೀನಿವಾಸ ದೈವಜ್ಞ, ಬಾಡಿಗೆದಾರ ಗದಿಗೆಪ್ಪ ಹುಯಿಲಗೋಳ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 