ಹೊಸ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ: ಡಿಮಿಟ್ರಿ

ಮಾಸ್ಕೋ, ಜನವರಿ 22 , ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ತಮ್ಮ ಸಹೋದ್ಯೋಗಿಗಳ ಸಹಕಾರಕ್ಕಾಗಿ  ಧನ್ಯವಾದ  ಅರ್ಪಿಸಿದ್ದಾರೆ.ರಷ್ಯಾದ ಹೊಸ ಸಂಪುಟ, ಸರ್ಕಾರ ದೇಶದ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಿದೆ ಎಂಬ  ವಿಶ್ವಾಸವನ್ನು  ವ್ಯಕ್ತಪಡಿಸಿದ್ದಾರೆ .ರಷ್ಯಾದ ಹೊಸ ಸಂಪುಟ  ಮಂಗಳವಾರ ರಚನೆಯಾಗಿದೆ  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಂಪುಟದ ಭೇಟಿಯ ಸಂದರ್ಭದಲ್ಲಿ, ರಷ್ಯಾದ ಹೊಸ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ದೇಶದ  ಮಹತ್ವಾಕಾಂಕ್ಷೆಯ ಗುರಿ ಈಡೇರಿಸಲು ಎಲ್ಲ  ಸಚಿವರಿಂದ  ಎಂದು ಪ್ರತಿಜ್ಞೆ ಮಾಡಿಸಿದರು. ಕೆಲಸದ ಪ್ರಾರಂಭದಲ್ಲಿ ಹೊಸ ರಷ್ಯಾ ಸರ್ಕಾರವನ್ನು ಅಭಿನಂದಿಸುತ್ತೇನೆ! ನಮ್ಮ ದೇಶವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಪರಿಣಾಮಕಾರಿ ಪರಿಹಾರವನ್ನು ಸರ್ಕಾರದಿಂದ ಬಯಸುತ್ತೇನೆ. ನನ್ನೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳಿಗೆ ಮತ್ತೊಮ್ಮೆ  ಕೃತಜ್ಞತೆ ಹೇಳುತ್ತೇನೆ ಎಂದೂ  "ಮೆಡ್ವೆಡೆವ್ ತಮ್ಮ  ಸಾಮಾಜಿಕ ತಾಣದಲ್ಲಿ   ಬರೆದಿದುಕೊಂಡಿದ್ದಾರೆ.