ಎಫ್.ಪಿ.ಎ.ಐ.ದಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಉದ್ಘಾಟನೆ : ವಿಶ್ವನಾಥ ಕೋಳಿವಾಡ
Solar power plant inaugurated at FPAI: Vishwanath Koliwada
ಲೋಕದರ್ಶನ ವರದಿ
ಧಾರವಾಡ 24 : ದಿನಾಂಕ 23 ಜೂನ್ 2026 ರಂದು ಟಾಟಾ ಹಿಟಾಚಿ, ಧಾರವಾಡ ಮತ್ತು ಎಫ್.ಪಿ.ಎ.ಐ. ಸಹಯೋಗದಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪನೆಯ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಹಿಟಾಚಿನ ಸಿ.ಎಸ್.ಆರ್ ಮುಖ್ಯಸ್ಥರಾದ ಪ್ರಶಾಂತ ದಿಕ್ಷಿತ ಮಾತನಾಡಿ ಟಾಟಾ ಹಿಟಾಚಿ ಕಂಪನಿಯು ಸಿ.ಎಸ್.ಆರ್. ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಎಫ್.ಪಿ.ಎ.ಐ ಸಂಸ್ಥೆಗೆ ನೀಡಿದ ಆರ್ಥಿಕ ನೇರವು ಯೋಗ್ಯ ಪಲಾನುಭವಿಗಳಿಗೆ ಉತ್ತಮ ರೀತಿಯಲ್ಲಿ ತಲುಪುತ್ತಿದೆ. ಮಹಿಳೆಯರ, ಮಕ್ಕಳ ಹಾಗೂ ಇತರರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅರಿವು ಮೂಡಿಸುವದು ಮತ್ತು ಸೇವೆ ನೀಡುವದರ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ. ಎಫ್.ಪಿ.ಎ.ಐ ದಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪನೆಯಿಂದಾಗಿ ಅರ್ಥಿಗಳಿಗೆ ಇನ್ನೂ ಹೆಚ್ಚಿನ ಮತ್ತು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 