ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ದಾಳಿಗೆ ಸೊಲೈಮಾನಿ ಸಂಚು: ಟ್ರಂಪ್

ವಾಷಿಂಗ್ಟನ್, ಜನವರಿ, 11,  ಅಮೆರಿಕದ 4 ರಾಯಭಾರ ಕಚೇರಿಗಳ ಮೇಲೆ ಇರಾನಿನ ಸೇನಾ ಕಮಾಂಡರ್ ಸೊಲೈಮಾನಿ ದಾಳಿ ನಡೆಸಲು ಯೋಜಿಸಿದ್ದರು  ಎಂದು ಅಮೆರಿಕದ ಅದ್ಯಕ್ಷ ಡೋನಾಲ್ಡ್  ಟ್ರಂಪ್ ಗುರತರ ಆರೋಪ ಮಾಡಿದ್ದಾರೆ.ಇದು ಬಹುಶಃ  ನಾಲ್ಕು ರಾಯಭಾರ ಕಚೇರಿಗಳಾಗಬಹುದೆಂದು ನಾನು ನಂಬುತ್ತೇನೆ ಎಂದು ಟ್ರಂಪ್ ಇತರ ರಾಯಭಾರ ಕಚೇರಿಗಳ ವಿರುದ್ಧ ದೊಡ್ಡ ಪ್ರಮಾಣದ ದಾಳಿಗಳನ್ನು ಯೋಜಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 

ಬಾಗ್ದಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ಒಂದು ಗುರಿಯಾಗಿತ್ತು  ಎಂದು ಟ್ರಂಪ್ ಹೇಳಿದ್ದಾರೆ.ಮಧ್ಯಪ್ರಾಚ್ಯದಲ್ಲಿ ಅಮೆರಿಕದ ರಾಜತಾಂತ್ರಿಕರು ಮತ್ತು ಸೈನಿಕರಿಗೆ ಆತಿಥ್ಯ ವಹಿಸುವ ಸೌಲಭ್ಯ ಮತ್ತು ನೆಲೆಗಳ ಮೇಲೆ  ದಾಳಿ ನಡೆಸುವ ಬಗ್ಗೆ  ಗುಪ್ತಚರ ಮಾಹಿತಿ ನೀಡಿದ್ದರಿಂದ ಅಮೆರಿಕ  ಸೊಲೈಮಾನಿಯನ್ನು ಕೊಲ್ಲುವ  ಕ್ರಮ ಕೈಗೊಂಡಿತು ಎಂದು ಟ್ರಂಪ್ ಆಡಳಿತ ಅಧಿಕಾರಿಗಳು ಹೇಳಿದ್ದಾರೆ.ಕಳೆದ ವಾರ ಇರಾನ್ ಕುಡ್ಸ್ ಫೋರ್ಸ್ ಕಮಾಂಡರ್ ಸೊಲೈಮಾನಿ ಅವರನ್ನು ಟ್ರಂಪ್ ಆದೇಶದ ನಂತರ   ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು.ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ  ಶುಕ್ರವಾರ ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ.