ಬಾಗಲಕೋಟೆ 02: ನಾಡಿನ ಪ್ರತಿಯೊಬ್ಬರು ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಪ್ರಕೃತಿ ರಕ್ಷಣೆಯೊಂದಿಗೆ ಆರೋಗ್ಯ ರಕ್ಷಣೆಗಾಗಿ ಯೋಗ, ಆಹಾರ, ವಿಹಾರಗಳಲ್ಲಿ ಜಾಗೃತ ವಹಿಸಿದರೆ ಆರೋಗ್ಯ ಇಲಾಖೆಯ ಕಾರ್ಯದಲ್ಲಿ ಸಹಕಾರಿಯಾಗಲಿದ್ದು, ಇದಕ್ಕೆ ಅನುಗುಣವಾಗಿ ಜನರಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿ ಸ್ವಸ್ಥ ಸಮಾಜ ನಿಮರ್ಾಣವೇ ಆರೋಗ್ಯ ಇಲಾಖೆಯ ಕಾರ್ಯವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಕ್ರಸ್ನಾ ಡೈಗ್ನೋಸ್ಟಿಕ್ ಪ್ರೈವೆಟ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಿಟಿ ಸ್ಕ್ಯಾನ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನರ್ಾಟಕ ಸರಕಾರ ಆರೋಗ್ಯ ವಿಚಾರದಲ್ಲಿ ಅನೇಕ ಉಪಯುಕ್ತ ಯೋಜನೆಗಳನ್ನು ಹಾಕಿಕೊಂಡಿದ್ದು, ಅದರಲ್ಲಿ ಕಡುಬಡವರ ವಿಚಾರದಲ್ಲಿ ಬಂದಾಗ ದೇಶದಲ್ಲಿ ಮೊದಲನೇ ಬಾರಿಗೆ ಯಶಸ್ವಿನಿ ಯೋಜನೆ ಜಾರಿಗೆ ತಂದು 60 ಲಕ್ಷ ರೈತ ಕುಟುಂಬಗಳಿಗೆ ಆರೋಗ್ಯ ಕಲ್ಪಿಸುವ ಕಾರ್ಯ ಮಾಡಿದ್ದು, 1.10 ಕೋಟಿ ಕುಟುಂಬಗಳಿಗೆ ವಿನೂತನ ಯೋಜನೆಗಳಿಂದ ಸೇವೆ ನೀಡಲಾಗಿದ್ದು, ಅದರಲ್ಲಿ ಈ ಸೌಲಭ್ಯ ರಾಜ್ಯದ 4 ಕೋಟಿ ಜನರಿಗೆ ತಲುಪಿಸುವ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರು ಸರಕಾರಿ ವೈದ್ಯರು ಹಾಗೂ ಖಾಸಗಿ ವೈದ್ಯರು ಆರೋಗ್ಯದ ಗುಣಮಟ್ಟ ಕಾಯ್ದುಕೊಳ್ಳಲು ಪರಸ್ಪರ ಸಹಕರಿಸಿಕೊಂಡಾಗ ಮಾತ್ರ ಸರಕಾರದ ಯೋಜನೆಗಳಿಗೆ ಸಫಲವಾಗಬಹುದು. ಆರೋಗ್ಯ ಯೋಜನೆಯಲ್ಲಿ ಸರಕಾರದ ಹಾಗೂ ರೋಗಿಯ ಶೋಷನೆಯಾಗಬಾರದು. ಇದರಲ್ಲಿ ಖಾಸಗಿ ವೈದ್ಯರಲ್ಲಿ ವ್ಯಯಕ್ತಿಕವಾಗಿ ವಿನಂತಿ ಎಂದರೆ ಯಾವುದೇ ರೋಗಿಗೆ ನೀಡಿಸ ಚಿಕಿತ್ಸೆ ಹಾಗೂ ರೋಗಿಗೆ ತಗುಲಿದ ವೆಚ್ಚ ಎಷ್ಟು ಎಂಬುದನ್ನು ಸರಕಾರದ ಗನಮಕ್ಕೆ ತಂದಲ್ಲಿ ಅದಕ್ಕಾಗಿ ಒಂದು ಸಮಿಸಿ ನಿಮರ್ಿಸಲಾಗಿದ್ದು, ಖಾಸಗಿ ವೈದ್ಯರು ರೋಗಿಗೆ ನೀಡಿದ ಚಿಕಿತ್ಸೆಯ ಹಣವನ್ನು ಅವರಿಗೆ ಸಮರ್ಪಕವಾಗಿ ವಿತರಿಸುವ ಮಹತ್ವದ ನಿದರ್ಾರವು ಕೂಡ ಸರಕಾರ ಕೈಗೊಂಡಿದೆ ಎಂದರು.
ಔಷಧಿ ಕಂಪನಿಗಳು ರೋಗಿಗಳ ಜೊತೆ ಚಲ್ಲಾಟ ವಾಡುತ್ತಿರುವುದು ಕಂಡು ಬಂದಿದ್ದು, ವೈದ್ಯರೊಂದಿಗೆ ಸಹಕರಿಸಿಕೊಂಡು ಕೇವಲ ಒಂದು ಸಣ್ಣ ನೋವು ನಿವಾರಕ ಔಷಧಿಗೆ ದೊಡ್ಡ ಕಂಪನಿಯ ಹೆಸರು ಉಪಯೋಗಿಸಿಕೊಂಡು ರೋಗಿಯ ಸುಲಿಗೆ ಮಾಡುತ್ತಿರುವುದು ಕಂಡುಬಂದಿದೆ. ಪಿಸಿಡಿ ಡ್ರಗ್ಸ್ ವಿಚಿತ್ರ ಮಾರುಕಟ್ಟೆಯನ್ನು ರಾಜ್ಯದಲ್ಲಿ ತಂದು ಒಂದು ಭಾಗದಲ್ಲಿ ಸಿಕ್ಕ ಔಷಧಿ ಮತ್ತೊಂದು ಭಾಗದಲ್ಲಿ ಸಿಗದೇ ಹಾಗೆ ಹಗೂ ಒಂದು ದರದಲ್ಲಿ ಸಿಕ್ಕರೆ ಮತ್ತೊಂದು ದರದಲ್ಲಿ ಸಿಗದಂತೆ ವ್ಯವಸ್ಥಿತವಾದ ವಂಚನೆಯಲ್ಲಿ ತೊಡಗಿದ್ದು, ಇದರಿಂದ ವೈದ್ಯರಿಗೂ ಕೂಡ ಕೆಟ್ಟ ಹೆಸರು ಬರುತ್ತದೆ ಎಂದರು.
ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದು ಸಿಟಿ ಸ್ಕ್ಯಾನ್ ತರಲಾಗಿದ್ದು, ಈಗಾಗಲೇ ಸರಕಾರಿ ಆಸ್ಪತ್ರೆಗಳಲ್ಲಿರುವ ಸಿಟಿ ಸ್ಕ್ಯಾನ್ ಉದ್ದೇಶ ಪೂರ್ವಕವಾಗಿ ಬಂದ್ ಮಾಡಿ ಖಾಸಗಿ ಆಸ್ಪತ್ರೆಗೆ ಕೇವಲ 500 ರೂ.ಗಳಿಗೆ ಕಳುಹಿಸುತ್ತಿರುವುದು ರೋಗಿಗಳಿಗೆ ವಂಚನೆ ಮಾಡುವದಲ್ಲದೇ ಈ ಘಟನೆ ನೋವು ತರುವಂತಹದಾಗಿದೆ. ರಾಜ್ಯದಲ್ಲಿ 5 ಕಡೆ ಎಂ.ಆರ್.ಐ ಸೌಲಭ್ಯ ಕಲ್ಪಿಸಲಾಗಿದ್ದು, 2 ಕಡೆ ಕಾರ್ಯ ಪ್ರಾರಂಭಿಸಲಾಗಿದ್ದು, ಈ ಸೇವೆ ಶೇ.100 ಕ್ಕೆ 100 ರಷ್ಟು ಉಚಿತವಾಗಿದ್ದು, ಬಡವರು, ಕಡುಬಡವರು, ರೋಗಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಪ್ರತಿ ಜಿಲ್ಲೆಯಲ್ಲಿ ಆರೋಗ್ಯವಂತವಾಗಿರಬೇಕಾದರೆ ಅಲ್ಲಿಯ ಜಿಲ್ಲಾ ಆರೋಗ್ಯಾಧಿಕಾರಿ ದಕ್ಷ ಹಾಗೂ ಪ್ರಾಮಾಣಿಕವಾಗಿದ್ದಾಗ ಮಾತ್ರ ಜಿಲ್ಲೆ ಆರೋಗ್ಯದಿಂದಿರಲು ಸಾದ್ಯ. ಒಂದು ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಅಪ್ರಾಮಾಣಿಕವಾಗಿದ್ದರೆ ಈಡೀ ಜಿಲ್ಲೆಯೇ ಅನಾರೋಗ್ಯ ಪೀಡಿತವಾಗಿರುತ್ತದೆ ಎಂದರು.
ನಮ್ಮ ಜಿಲ್ಲಾ ಆಸ್ಪತ್ರೆ 300 ಹಾಸಿಗೆಗಳ ಸೌಲಭ್ಯ ಹೊಂದಿದ್ದು, ಪ್ರತಿನಿತ್ಯ 400-600 ರೋಗಿಗಳು ಈ ಆಸ್ಪತ್ರೆಗಳಲ್ಲಿ ಹೊರರೋಗಿಗಲಾಗಿ ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಲ್ಲಿ 150 ರಿಂದ 200 ರೋಗಿಗಳು ಒಳರೋಗಿಗಳಾಗಿ ದಾಖಲಾಗುತ್ತಾರೆ. ಇವರೆಲ್ಲರಿಗೂ ಡಯಾಲಿಸಿಸ್, ರಕ್ತನಿಧಿ ಹಾಗೂ ಎಆರ್ಟಿ ಸೇವೆ ಒದಗಿಸಲಾಗುತ್ತಿದೆ. ಅಲ್ಲದೇ ಪ್ರಯೋಗಾಲಯದ ವ್ಯವಸ್ಥೆ ಕೂಡಾ ಉತ್ತಮವಾಗಿದ್ದು, ಆದರೆ ನಮ್ಮಲ್ಲಿ ಇದುವರೆಗೆ ಸಿಟಿ ಸ್ಕ್ಯಾನ್ ಸೌಲಭ್ಯ ಇರಲಿಲ್ಲ. ಸಿಟಿ ಸ್ಕ್ಯಾನ್ ಸೌಲಭ್ಯ ನೀಡಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಜಾತಾ ಸಿಂಗಾಡೆ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸದಸ್ಯ ಮಹಾಂತೇಶ ಉದಪುಡಿ, ಬಸವರಾಜ ಕೋತ, ನಗರಸಭೆ ಸದಸ್ಯ ಶಂಕರಗೌಡ ಪಾಟೀಲ, ಗೋವಿಂದ ಬಳ್ಳಾರಿ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ವಿಕಾಸ ಸುರಳಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸ್ವಾಗತಿಸಿದರು. ಜಾಸ್ಮೀನ್ ಕಿಲ್ಲೆದಾರ ವಂದಿಸಿದರು.