ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಅಗತ್ಯ : ಡಾ.ಮರ್ಜಿ
Socially oriented thinking is necessary among students: Dr. Marji
ಲೋಕದರ್ಶನ ವರದಿ
ಹಾರೂಗೇರಿ 19 : ವಿಶ್ವದ ನಾನಾ ರಂಗಗಳನ್ನು ಪ್ರವೇಶಿಸಿದ ಭಾರತೀಯ ವಿದ್ಯಾರ್ಥಿಗಳು, ಸಶಕ್ತ ಸಮಾಜವನ್ನು ನಿರ್ಮಿಸಬೇಕಾದ ಅನಿವಾರ್ಯತೆಯಿದ್ದು, ಸಾಮಾಜಿಕ ಕಷ್ಟ ಸಂಹಿಷ್ಣುತೆಯನ್ನು ಅರಿತು ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಸದಾಶಿವ ಮರ್ಜಿ ಹೇಳಿದರು.
ಪಟ್ಟಣದ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸ್ಪರ್ಧಾತ್ಮಕ ಯುಗ. ಈ ಯುಗಕ್ಕೆ ಸ್ಪಂದಿಸಲು ವಿದ್ಯಾರ್ಥಿಗಳು ಸಂವೇದನ ಶೀಲರಾಗಬೇಕು. ಲಕ್ಷಲಕ್ಷ ಜನರ ಮನದೊಳಗೆ ಪ್ರವೇಶಿಸಲು ಸಿದ್ಧರಾಗಬೇಕು. ಆ ಕಾರಣಕ್ಕಾಗಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯ ಅರಿವಿರಬೇಕೆಂದು ಹೇಳಿದರು.
ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಅಧ್ಯಕ್ಷೀಯಪರ ನುಡಿಗಳನ್ನಾಡುತ್ತ ಮಹಾವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಸ್ವಾವಲಂಭಿತರನ್ನಾಗಿ ಮಾಡುವುದು ಹಾಗೂ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವುದೇ ಉನ್ನತ ಶಿಕ್ಷಣದ ಪರಿಕಲ್ಪನೆ. ಆ ದಿಸೆಯಲ್ಲಿ ಪದವಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಸುನಾಮಿಯನ್ನು ಎದುರಿಸಲು ಸನ್ನದ್ಧಗೊಳ್ಳಬೇಕಿದೆ ಎಂದರು.
ಈವೇಳೆ 2024-25ನೇ ಸಾಲಿನ ವಿಶ್ವವಿದ್ಯಾಲಯಕ್ಕೆ ರಾ್ಯಂಕ್ ಪಡೆದ ಸುಪ್ರೀಯಾ ಗುಡೋಡಗಿ, ಸೋನಾಲಿ ನಾಗನೂರ, ತನುಜಾ ಶಿರಗುಪ್ಪಿ ಮತ್ತು ವಿಶ್ವವಿದ್ಯಾಲಯದ ಹ್ಯಾಂಡ್ಬಾಲ್ ಬ್ಲ್ಯೂ ಗೌತಮ ಕಾಂಬಳೆ, ಜೀವನ ಖೇಮಲಾಪೂರೆ, ಆಕಾಶ ಚಿಕ್ಕರೆಡ್ಡಿ, ಆಕಾಶ ನಿಂಬಾಳಕರ, ಯಶೋಧಾ ನರಗಟ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು. ಪ್ರಾಚಾರ್ಯ ಡಾ.ವಿನೋದ ಕಾಂಬಳೆ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು. ಡಾ.ರಮೇಶ ಕಮತಗಿ ಸ್ವಾಗತಿಸಿದರು. ಪ್ರೊ.ತ್ರೀಶಲಾ ಮಂಗಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಅಂಕಿತಾ ಕಡಹಟ್ಟಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 