ಸಮಾಜಸೇವಕ ಅಬ್ದುಲಖಾದರ ಧಾರವಾಡರಿಗೆ ಆರ್ಟಿಒ ವತಿಯಿಂದ ಸನ್ಮಾನ
Social worker Abdulkhadar Dharwad honored by RTO
ಲೋಕದರ್ಶನ ವರದಿ
ಹಾವೇರಿ 28: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು,ಅನಾಥರನ್ನು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗೆ ಸೇರಿಸುವ ನಿಸ್ವಾರ್ಥ ಸೇವೆ ಮಾಡುತ್ತಿರುವ ನಗರದ ನಿವಾಸಿ,ಸಮಾಜ ಸೇವಕರಾದ ಅಬ್ದುಲಖಾದರ ಹಜರತಸಾಬ ಧಾರವಾಡ ಅವರಿಗೆ ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಅಭಿನಂದನಾ ಪತ್ರ ನೀಡಿ,ಗೌರವಿಸಿ ಸನ್ಮಾನಿಸಲಾಯಿತು. ಅಬ್ದುಲಖಾದರ ಧಾರವಾಡ ಅವರು ಸುಮಾರು 11 ವರ್ಷಗಳಿಂದ ಸೇವೆಯೇ ಪರಮ ಧರ್ಮ ಎಂಬ ಧ್ಯೇಯದೊಂದಿಗೆ ಈ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಮಾನವೀಯತೆಯ ಕೆಲಸಕ್ಕೆ ಪ್ರೋತ್ಸಾಹಕವಾಗಿ ಅವರ ಸೇವೆ ಇನ್ನೂ ಮುಂದುವರಿಯಲಿ ಹಾಗೂ ಇನ್ನೂ ಹೆಚ್ಚು ಪ್ರಶಸ್ತಿ ಗೌರವ ಸಿಗಲಿ ಎಂದು ಆರ್‌ಟಿಓ ಕಛೇರಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕು.ವಿನಯ ಕಾಟೋಕರ್ ಆರ್, ಸಿಬ್ಬಂದಿಗಳಾದ ಶ್ರೀಪಾದ ಬ್ಯಾಶಿಯವರ,ಮೆಹಬೂಬಲಿ ಹೊಟೆಗಾಶಿ, ಶಂಭುಲಿಂಗಯ್ಯ ಹೊಸಳ್ಳಿಮಠ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 