ಅಕ್ಕಮಹಾದೇವಿ ವಚನಗಳಲ್ಲಿ ಸಾಮಾಜಿಕ ಚಿಂತನೆ: ಶಿವಲಿಂಗಮ್ಮ
Social thought in the verses of Akkamahadevi: Shivalingamma
ತಾಳಿಕೋಟೆ 05: ಮಹಾದೇವಿಯಕ್ಕನವರು ಅಪ್ರತಿಮ ವಚನಕಾರ್ತಿಯಾಗಿದ್ದು ಅವರ ವಚನಗಳಲ್ಲಿ ಭಕ್ತಿ, ಜ್ಞಾನ, ಸಾಮಾಜಿಕ ಚಿಂತನೆಗಳಿವೆ ಎಂದು ಹಿರಿಯಶರಣೆ ಶಿವಲಿಂಗಮ್ಮ ಬಳಗಾನೂರ ಹೇಳಿದರು. ಅವರು ಪಟ್ಟಣದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ತಾಲ್ಲೂಕು ಕದಳಿ ವೇದಿಕೆ ಮತ್ತು ಅಕ್ಕನ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಶರಣೆ ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.ನಿವೃತ್ತ ಮುಖ್ಯಶಿಕ್ಷಕಿ ಉಮಾ ಸಾಲಂಕಿ ಮಾತನಾಡಿ, ಕನ್ನಡದ ಮೊದಲ ಕವಯತ್ರಿಯಾಗಿದ್ದು ಅವರ ವಚನಗಳು ಜೀವನ ಮಾರ್ಗದರ್ಶನ ಮಾಡುತ್ತವೆ ಎಂದರು. ಕದಳಿ ವೇದಿಕೆ ಅಧ್ಯಕ್ಷೆ ಉಮಾ ಘೀವಾರಿ ಮಾತನಾಡಿ, ಅಕ್ಕನವರು ಭಕ್ತಿ, ಜ್ಞಾನ, ವೈರಾಗ್ಯಗಳ ಮೂರ್ತಿಯಾಗಿದ್ದಾರೆ ಎಂದರು. ಅಕ್ಕಮಹಾದೇವಿವರ ವಚನಗಳನ್ನು ಹೇಳಲಾಯಿತು.ಕಾರ್ಯಕ್ರಮದಲ್ಲಿ ಕವಿತಾ ಕತ್ತಿ, ಸರ್ವಮಂಗಳಾ ಡೋಣೂರಮಠ, ಶಿವಲೀಲಾ ದೇವಶೆಟ್ಟಿ, ಗೀತಾ ಬಳಗಾನೂರ, ಸುರೇಖಾ ಸಾಲಂಕಿ, ಜಯಶ್ರೀ ಮಠ, ಸವಿತಾ ಕತ್ತಿ ಸೇರಿದಂತೆ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬೆಳಿಗ್ಗೆ ಅಕ್ಕನ ಮೂರ್ತಿಗೆ ಪೂಜೆ, ರುದ್ರಾಭಿಷೇಕ , ನಾಮಾವಳಿ, ಆರತಿ ಹಾಗೂ ವಚನ ಗಾಯನ, ಅಕ್ಕನ ತೊಟ್ಟಿಲು ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಉಡಿ ತುಂಬವ ಕಾರ್ಯಕ್ರಮ ನಂತರ ಮಹಾಪ್ರಸಾದ ನಡೆಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 