ಸಮಾಜ ಸೇವೆ, ಬಸವ ತತ್ವದ ಪ್ರಚಾರ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮ
Social service, promotion of Basava Tattva and social awareness program
ಹುಬ್ಬಳ್ಳಿ 26 : ಹಗಲಿರುಳು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ, ಬಸವ ತತ್ವ ನಿಷ್ಟರು, ವಿಶ್ವ ಗುರು ಬಸವಣ್ಣನವರನ್ನು ತಮ್ಮ ಉಸಿರಾಗಿಸಿಕೊಂಡಿರುವ, ಬಸವ ತತ್ವ ಪ್ರಸಾರಕರು, ಅನುಭವ ಮಂಟಪ ರೂವಾರಿಗಳು, ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪರಮ ಪೂಜ್ಯ ಮ. ಘ. ಚ. ಡಾ. ಬಸವ ಲಿಂಗ ಪಟ್ಟದೇವರು ಹಾಗೂ ಭಾಲ್ಕಿ - ಬೀದರ್ ಹಿರೇಮಠ ಸಂಸ್ಥಾನ ಪರಮ ಪೂಜ್ಯ ಮ. ಘ. ಚ. ಗುರುಬಸವ ಪಟ್ಟದೇವರು,
ಡಾ ಸಂತೋಷ್ ಸುಭಾಸ್ ಹಾನಗಲ್ ಅವರ ಪುಸ್ತಕ ಲೋಕಾರೆ್ಣ ಸುಸಂದರ್ಭದಲ್ಲಿ ಪೂಜ್ಯ ಸ್ವಾಮಿಜಿಯವರನ್ನು ಭೇಟಿ ಮಾಡಿದ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ, ಸದಸ್ಯರು ಶ್ರೀಗಳ ದರ್ಶನ ಆಶೀರ್ವಾದ ಪಡೆದು ಆತ್ಮೀಯವಾಗಿ ಗೌರವದಿಂದ ಶ್ರದ್ಧಾ ಭಕ್ತಿಯಿಂದ ಶರಣು. ಶರಣಾರ್ಥಿಗಳು, ನಮನಗಳನ್ನು ಸಲ್ಲಿಸಿದರು. ಶುಭಾಶಯಗಳನ್ನು ಕೋರಿದರು.
ಶ್ರೀಗಳ ಆಶೀರ್ವಾದ ಸದಾವಕಾಲ ಭಕ್ತರ ಮೇಲೆ ಇರಲಿ ಎಂದು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಪೂಜ್ಯ ಮ. ನಿ. ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಮ. ನಿ. ಪ್ರ. ಡಾ ಅಲ್ಲಮಪ್ರಭು ಮಹಾಸ್ವಾಮಿಗಳು, ಬೆಳಗಾವಿ ಶೇಗುಣಸಿಯ ವಿರಕ್ತಮಠದ ಪೂಜ್ಯ ಮ. ನಿ. ಪ್ರ. ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ಪೂಜ್ಯ ಶ್ರೀಗಳ ದರ್ಶನ ಆಶೀರ್ವಾದ ಪಡೆದು ಆತ್ಮೀಯವಾಗಿ ಗೌರವದಿಂದ ಶ್ರದ್ಧಾ ಭಕ್ತಿಯಿಂದ ಶರಣು. ಶರಣಾರ್ಥಿಗಳು, ನಮನಗಳನ್ನು ಸಲ್ಲಿಸಿದರು.
ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ ಸಂತೋಷ್ ಸುಭಾಸ್ ಹಾನಗಲ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎ. ಎಂ ಖಾನ, ಸಾಹಿತಿಗಳಾದ ಡಾ ವೀರಣ್ಣ ರಾಜೂರ , ಡಾ. ಬಿ. ವಿ ಶಿರೂರ, ಡಾ. ಮಹೇಶ್ ಡಿ ಹೊರಕೇರಿ, ಕೆ ಎಸ್ ಕೋರಿಶೆಟ್ಟರ್ , ಸವಿತಾ ನಡಕಟ್ಟಿ, ಸಿದ್ದರಾಮಣ್ಣ ನಡಕಟ್ಟಿ , ಬಸವಂತಪ್ಪ ತೋಟದ, ಡಾ.ಮನೋಜ, ಡಾ ವೈಜನಾಥ್ ಬುಟ್ಟೆ, ಡಾ.ಸಣ್ಣವೀರಣ್ಣ ದೊಡ್ಡಮನಿ , ಮುಂತಾದವರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 