ನಾಟಕಗಳಿಂದ ಸಾಮಾಜಿಕ ಅರಿವು
Social awareness through plays
ನಾಟಕಗಳಿಂದ ಸಾಮಾಜಿಕ ಅರಿವು
ಲೋಕದರ್ಶನ ವರದಿ
ಹೂವಿನ ಹಡಗಲಿ 05 : ನಾಟಕಗಳು ಸಾಮಾಜಿಕ ಅರಿವು ಪ್ರಜ್ಞೆ ಮೂಡಿಸುತ್ತವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಡಾ ಕರಿಶೆಟ್ಟಿ ರುದ್ರ್ಪ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಮಹಾಮಹಿಮ ಶ್ರೀ ಗವಿಸಿದ್ದೇಶ್ವರ 31 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಸಂಜೆ ಆಯೋಜಿಸಿದ್ದ ಧರ್ಮಸಭೆ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಹಾಲಯ್ಯ ವಿ ಹುಡೇಜಾಲಿ ರಚಿಸಿದ "ರೌಡಿ ಸಾಮ್ರಾಜ್ಯದಲ್ಲಿ ರಕ್ತದೋಕುಳಿ"ರಂಗಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಮಲ್ಲಿಗೆ ನೆಲದಲ್ಲಿ ಅನೇಕ ಮಹನೀಯರು ರಂಗ ಪರಂಪರೆ ಬಿತ್ತಿ ಬೆಳೆಸಿದ್ದಾರೆ.ಹಣ್ಣಿ ವೀರಭದ್ರ್ಪ ಎಂ ಪಿ ಪ್ರಕಾಶ್ ಬಿ ವಿ ಈಶ ಮೊದಲಾದವರು ರಂಗಭೂಮಿಗೆ ಹೊಸ ದಿಕ್ಕು ತೋರಿದವರು ಎಂದು ಬಣ್ಣಿಸಿದರುತ್ರಿವಿಧ ದಾಸೋಹ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಗವಿಮಠದ ಶ್ರೀಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ನಿವೃತ್ತ ಉಪನ್ಯಾಸಕ ಎಂ ಪಿ ಎಂ ದಯಾನಂದ ಸ್ವಾಮಿ ರಂಗಭೂಮಿ ಕುರಿತು ಮಾಹಿತಿ ನೀಡಿದರು.ಅರಮನೆ ಜಪದಕಟ್ಟೆಮಠ ಮೈಸೂರು ಬನ್ನಿಕೊಪ್ಪದ ಷ ಬ್ರ ಡಾ ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರುಶಿವಬಸಪ್ಪ ಮುಂಡರಗಿಕೊಪ್ಪಳ ಜಿಲ್ಲೆ ಕಾಮನಕಟ್ಟೆ ಗೆಳೆಯರ ಬಳಗ, ಮುಖ್ಯ ಗುರುಗಳಾದ ಸುರೇಶ ಅಂಗಡಿ ರವರಿಗೆ ’ಗುರುರಕ್ಷೆ’ ನೀಡಿ ಸತ್ಕರಿಸಲಾಯಿತು.ವೇದಮೂರ್ತಿ ಬಸವಣ್ಣೆಯ್ಯ ಶಾಸ್ತ್ರಿಗಳು ಪ್ರವಚನ ನೀಡಿದರು.ಶಾಂತಕುಮಾರ ಗವಾಯಿ, ಬಸವರಾಜ ಸಂಗೀತ ಸೇವೆಗೈದರು.ಉಪನ್ಯಾಸಕ ಎಚ್ ಎಂ ಚನ್ನಬಸವಯ್ಯ ನಿರ್ದೇಶನದ "ದುಡಿದು ಸಂಪಾದಿಸಿದರೆ ಬಾಳು ಬಂಗಾರ" ನಾಟಕ ಜನಮನಸೂರೆಗೊಂಡಿತು.ಶಿಕ್ಷಕ ಎಂ ಸಿದ್ದೇಶ್ ಪತ್ರಕರ್ತ ಎಂ ದಯಾನಂದ ಟಿ ಎಂ ನಾಗರತ್ನ ,ಅಂಬಿಕಾ ವಿ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 