ಬಸವನಹುಳ ಕೀಟ ಬಾಧೆ: ರೈತರೊಂದಿಗೆ ಸಂವಾದ

ಬೆಳಗಾವಿ ತಾಲೂಕಿನಲ್ಲಿ ಇತ್ತೀಚೆಗೆ ಹಿರೇಬಾಗೇವಾಡಿ, ಕೆ.ಕೆ.ಕೊಪ್ಪ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಯಾಬಿನ್ ಹಾಗೂ ಇತರೆ ಬೆಳೆಗಳಿಗೆ ಬಸವನಹುಳ ಕೀಟ ಕಂಡು ಬಂದಿದೆ.

    ಬಸವನಹುಳ ಹತೋಟಿ ಕ್ರಮ ಕುರಿತು ಬೆಳಗಾವಿ ಸಹಾಯಕ ಕೃಷಿ ನಿದರ್ೇಶಕ ಗಂಗಾಧರ ಕಲ್ಯಾಣಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ತಜ್ಞ ಡಾ. ಎಸ್.ಜಾಧವ, ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ತಜ್ಞ ಡಾ. ಜಿ.ಬಿ.ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ಕೊಟ್ಟರು ಹಾಗೂ ರೈತರೊಡನೆ ಹತೋಟಿ ಕುರಿತು ಸಂವಾದ ಕಾರ್ಯಕ್ರಮ ಕೂಡ ಜರುಗಿಸಲಾಯಿತು.  ಇದಲ್ಲದೆ ಕೆ.ಕೆ.ಕೊಪ್ಪ ಗ್ರಾಮದಲ್ಲಿಯೂ ಸಹ ಕೃಷಿ ಇಲಾಖೆ ಆತ್ಮಾ ತಂಡದೊಂದಿಗೆ ಈ ಕುರಿತು ಪ್ರತ್ಯೇಕ ತರಬೇತಿ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಯಿತು.

     ಬಸವನಹುಳ ಹತೋಟಿಗಾಗಿ ಬಸವನಹುಳವಿನಲ್ಲಿ ಶೇ.60ರಷ್ಟು ಸಾರಜನಕ(ಪ್ರೊಟೀನ್) ಅಂಶವಿರುವುದರಿಂದ ಕೈಯಿಂದ ಆರಿಸಿ ಕೋಳಿ, ಹಂದಿಗಳಿಗೆ ಆಹಾರವಾಗಿ ಬಳಸಬಹುದು. ಬದು, ಒಡ್ಡುಗಳು ಅಡುಗುತಾನವಾಗಿದ್ದು ಜಿಟಿ, ಜಿಟಿ ಮಳೆಗೆ ಅನುಕೂಲವಾಗಿದ್ದು ಹಗಲು ವೇಳೆ ಅಡಗಿ ರಾತ್ರಿ ತಿನ್ನುತ್ತವೆ.  ಆದ್ದರಿಂದ ಬದುಗಳನ್ನು ಸ್ವಚ್ಛವಾಗಿಡಬೇಕು. ಭತ್ತ, ಗೋಧಿ, ಮೆಕ್ಕೆಜೋಳ ಬೆಳೆದರೆ ಬಸವನಹುಳ ಕೀಟಬಾಧೆ ಕಡಿಮೆ ಇರುತ್ತದೆ. ಮೇಟಾಲ್ಡಿಹೈಡ್(ಸ್ನೇಲಕಿಲ್) ಶೇ.2.5ರ ವಿಷ ಪ್ರಾಷಣವನ್ನು ಪ್ರತಿ ಹೆಕ್ಟೇರಿಗೆ 12.5 ಕೆ.ಜಿಯಂತೆ ಹುಳುಗಳು ಅಡಗಿಕೊಳ್ಳುವ ಸ್ಧಳದ ಸುತ್ತಲೂ ಹಾಗೂ ಅವು ಓಡಾಡುವ ಜಾಗದಲ್ಲಿ ಹಾಕಬೇಕು. ಶೇ.5ರ ಉಪ್ಪಿನ ದ್ರಾವಣ ಹುಳುಗಳು ಓಡಾಡುವ ಹಾಗೂ ಅಡಗಿಕೊಳ್ಳುವ(ಬದುಗಳು) ಜಾಗದಲ್ಲಿ ಸಿಂಪರಣೆ ಮಾಡಬೇಕು ಹಾಗೂ ಉಪ್ಪಿನ ದ್ರಾವಣದಲ್ಲಿ ಎದ್ದಿದ ಗೋಣಿಚೀಲವನ್ನು ಅಡಗಿಕೊಳ್ಳುವ ಬದುಗಳ ಮೇಲೆ ಹಾಕಬೇಕು. ಬದುವಿನ ಸುತ್ತಲೂ ಮೆಲಾಥಿಯಾನ ಅಥವಾ ಕ್ವಿನಾಲಫಾಸ ಅಥವಾ ಫೆನವಲಲೇಟ್ ಪುಡಿ ರೂಪದ ಪೌಡರನ್ನು ದಪ್ಪನೆಯ ಪಟ್ಟಿ ಸಾಲು ಮಾಡಿ ಹಾಕಬೇಕು.

  ಈ ರೀತಿ ಹತೋಟಿ ಕ್ರಮಗಳನ್ನು  ಕೈಗೊಳ್ಳಲು ರೈತರಿಗೆ ಬೆಳಗಾವಿ ಸಹಾಯಕ ಕೃಷಿ ನಿದರ್ೇಶಕ ಗಂಗಾಧರ ಕಲ್ಯಾಣಿ ತಿಳಿಸಿದ್ದಾರೆ.