ಹಂಪಿ ಉತ್ಸವದಲ್ಲಿ ಸುಗಮ ಸಂಗೀತ
Smooth music at Hampi Festival
ಕೊಪ್ಪಳ 16: ಕರ್ನಾಟಕ ಸರಕಾರ, ವಿಜಯನಗರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಮೂರು ದಿನಗಳ ಅದ್ಧೂರಿ ಹಂಪಿ ಉತ್ಸವದಲ್ಲಿ ಇಲ್ಲಿನ ಬಾಲ ಪ್ರತಿಭೆ ಅಕ್ಷರ ಮಂಜುನಾಥ ಗೊಂಡಬಾಳ ಅವರು ಸುಗಮ ಸಂಗೀತ ಪ್ರಸ್ತುತಪಡಿಸಿದರು.
ಹಂಪಿ ಉತ್ಸವದ ಪರ್ಯಾಯ ವೇದಿಕೆ ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಅಕ್ಷರ ಗೊಂಡಬಾಳ ಅವರು ಸುಗಮ ಸಂಗೀತವನ್ನು ಪ್ರಸ್ತುತ ಪಡಿಸಿದ್ದು, "ಆವ ಕುಲವೋ ರಂಗಾ ಅರಿಯಲಾರೆನು" ಎಂಬ ಸುಮಧುರ ದಾಸರ ಪದಕ್ಕೆ ಜನ ಭೇಷ್ ಎಂದರು. ಶಿಕ್ಷಕ ಶ್ರೀಶೈಲ ಬಡಿಗೇರ ಹಾರ್ಮೋನಿಯಂ, ಹರ್ಷ ಮರೇಗೌಡ ತಬಲ ಮತ್ತು ತಾಳದಲ್ಲಿ ಮಂಜುನಾಥ ಜಿ. ಗೊಂಡಬಾಳ ಸಾಥಿ ನೀಡಿದರು. ಉತ್ಸವದ ಪರವಾಗಿ ವಿವಿದ ಇಲಾಖೆಯ ಅಧಿಕಾರಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 