ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತ
Smoking tobacco definitely causes cancer
ಬ್ಯಾಡಗಿ 29 : ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಶೋಕಿಗಾಗಿ ಸಿಗರೇಟ್, ಪಾನ್ ಪರಾಗ್ ಸೇರಿದಂತೆ ತಂಬಾಕು ಸೇವನೆ ಮಾಡುತ್ತಿದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತ. ಈ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ ಎಂದು ಡಾ.ಎಸ್ ಎನ ನಿಡಗುಂದಿ ಹೆಳಿದರ.ಪಟ್ಟಣದ ದಟ್ಟಿಹಳ್ಳಿ ರಸ್ತೆಯಲ್ಲಿರುವ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬ್ಯಾಡಗಿ ರೋಟರಿ ಕ್ಲಬ್ ಹಾಗೂ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ ನವನಗರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದವರು ಒಬ್ಬ ಮನುಷ್ಯರಿಗೆ ಒಮ್ಮೆ ಕ್ಯಾನ್ಸರ್ ಕಾಣಿಸಿಕೊಂಡರೆ ಸರಿಪಡಿಸಿಕೊಳ್ಳಲು ತುಂಬಾ ಕಷ್ಟ ಪಡಬೇಕಾದ ಅನಿವಾರ್ಯತೆಯಿದೆ.
ವಿಶೇಷವಾಗಿ ಮಹಿಳೆಯರಲ್ಲಿ ಜಾಸ್ತಿ ಕಾಣಿಸುತ್ತಿದೆ. ಮಹಿಳೆಯರಲ್ಲಿ ಗೆಡ್ಡೆ ಕಾಣಿಸಿಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.ಡಾ.ಉಮೇಶ ಹಳ್ಳಿ ಕೇರಿ ಮಾತನಾಡಿ ಕ್ಯಾನ್ಸರ್ ಬಂದವರು ಭಯಭೀತರಾಗಬಾರದು. ಆಹಾರ ಪದ್ಧತಿಯಲ್ಲಿ ಹೆಚ್ಚು ವಿಟಮಿನ್ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ರಾಸಾಯನಿಕ ಗೊಬ್ಬರ ಹಾಕುವುದರ ಮೂಲಕ ಬೆಳೆಯನ್ನು ಬೆಳೆಯುವುದನ್ನಿ ನಿಲ್ಲಿಸಿ ಸಾವಯವ ಕೃಷಿ ಪದ್ಧತಿ ಜಾರಿಗೊಳಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಉತ್ತಮ ಗುಣಮಟ್ಟದ ಆಹಾರ ನಮಗೆ ಸಿಗುತ್ತವೆ. ಮಹಿಳೆಯರು ತಮ್ಮ ದೇಹದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಮೂಲಕ ತಮ್ಮಲ್ಲಿರುವ ಗರ್ಭಕೋಶದ ಹಾಗೂ ಗರ್ಭಾಶಯದ ಮತ್ತು ಸ್ತನ್ನ ರೋಗದ ಲಕ್ಷಣಗಳು ಕಂಡು ಬಂದರೆ ಸಂಕೋಚ ಪಡದೆ ಮಾಡಿ ಮಾಹಿತಿ ಪಡೆದುಕೊಂಡು ಸಣ್ಣ ಪ್ರಮಾಣದಲ್ಲಿ ಕ್ಯಾನ್ಸರ್ನನ್ನು ಸೋಲಿಸಬಹುದಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ್ ಪಾಸ್ತಾ ವಾಕ್ಯವಾಗಿ ಮಾತನಾಡಿ ಶಿಬಿರಕ್ಕೆ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ತೆರಪಿ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಹುಬ್ಬಳ್ಳಿಯ ರೋಟರಿ ಕ್ಲಬ್ ರೋಟರಿ ಇಂಟರ್ನ್ಯಾಷನಲ್ ಫೌಂಡೇಶನ್ ಗ್ಲೋಬಲ್ ಗ್ರಾಂಡ್ ನಿಂದ ರೂಪಿಸಿದ ಆರೋಗ್ಯ ರೋಟರಿ ವಾಹಿನಿ ಸುಮಾರು ಒಂದು ಕೋಟಿ 80 ಲಕ್ಷ ರೂಪಾಯಿ ಸ್ತನ್ನ ಮತ್ತು ಗರ್ಭಕೋಶ ಗರ್ಭಾಶಯ ಹಾಗೂ ಸರ್ಜಿಕಲ್ ಕ್ಯಾನ್ಸರ್ ಪತ್ತೆಹಚ್ಚಲು ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಇದರಲ್ಲಿ ಒಟ್ಟು 60 ಜನ ಒರಲ್ ಚೆಕಪ್ ಮಾಡಿಸಿ ಕೊಂಡು ಮತ್ತು ಸುಮಾರು 16 ಮಹಿಳೆಯರು ಮೆಮೊ ಗ್ರಾಂ ಮತ್ತು ದೈಹಿಕ ತಪಾಸಣೆ ಮಾಡಿಸಿಕೊಂಡರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ.ಕುಮಾರಿ ಬಿಂದುಶ್ರೀ ಪ್ರಾರ್ಥಿಸಿದರು, ಪ್ರೊ ವಾಣಿಶ್ರೀ ಬಂಕೋಳ್ಳಿ ಸ್ವಾಗತಿಸಿದರು ಉಪನ್ಯಾಸಕಿ ನಿವೇದಿತ ವಾಲಿಶೆಟ್ಟರ ನಿರೂಪಿಸಿದರು ಉಪನ್ಯಾಸಕ ಶಿವನಗೌಡ ಪಾಟೀಲ ವಂದನಾರೆ್ಣ ಮಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಬಸವರಾಜ ಸುಂಕಾಪುರ, ಕಿರಣ ಮಾಳೇನಹಳ್ಳಿ, ಪ್ರಕಾಶ ಛತ್ರದ, ರಮೇಶ ಕಲ್ಯಾಣಿ, ಪವಾಡೆಪ್ಪ ಆಚನೂರ, ಮಹಾಂತೇಶ ಸುಂಕದ, ಇನ್ನರ್ವಿಲ್ ಸಂಸ್ಥೆಯ ಅಧ್ಯಕ್ಷ ಪ್ರತಿಭಾ ಮೇಲಗಿರಿ, ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ಕವಿತಾ ಸೊಪ್ಪಿನಮಠ, ರೂಪ ಕಡೆಕೊಪ್ಪ, ಸಂಧ್ಯಾರಾಣಿ ದೇಶಪಾಂಡೆ ಮತ್ತು ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಪ್ರಶಾಂತ ಎನ್ ಎಸ್, ಉಪನ್ಯಾಸಕರು ಪ್ರಭುಲಿಂಗ ದೊಡ್ಡಮನಿ, ನಿವೇದಿತ ವಾಲಿಶೆಟ್ಟರ, ವಾಣಿಶ್ರೀ ಬಂಕೊಳ್ಳಿ ಮತ್ತು ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರಾದ ಉಮೇಶ ಹಳ್ಳಿಕೇರಿ ಎಂ ಡಿ ಪ್ಯಾಥೋಲಾಜಿಸ್ಟ್, ಡಾ ಪ್ರಸನ್ನ, ಡಾ ಪಿಯೂಷ್ ಬಾಯಿ ತಪಾಸಣಾ ವೈದ್ಯರು, ಡಾ ಶ್ರವಣ್ ಸತೀಶ ಮತ್ತು ಗರ್ಭಕೋಶ ತಜ್ಞೆ ವೈದ್ಯ ರಾಜಶ್ರೀ ಹಾಗೂ ಸೋನೋಗ್ರಾಫಿ ಮೊಮ್ಮೋಗ್ರಾಫಿ ತಜ್ಞರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 