ವಾಷಿಂಗ್ಟನ್, ಅ. 10: ವಿಶ್ವದ ಮಂದಗತಿಯ ಆರ್ಥಿಕತೆ ಭಾರತದಂತಹ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಐಎಂಎಫ್ನ ಹೊಸ ಆಡಳಿತ ನಿರ್ದೇಶಕಿ ಕ್ರಿಸ್ತಾಲಿನಾ ಜಾರ್ಜ್ವಾ ಅಭಿಪ್ರಯಪಟ್ಟಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷ 2019-2020ರಲ್ಲಿ ಅಭಿವೃದ್ಧಿ ದರ ಈ ದಶಕದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಎಂಬ ಆತಂಕಕಾರಿ ಮಾಹಿತಿ ಹೊರಹಾಕಿದ್ದಾರೆ. ಜಗತ್ತಿನ ಶೇ 90ರಷ್ಟು ದೇಶಗಳು ನಿಧಾನಗತಿಯಲ್ಲಿ ಪ್ರಗತಿ ಹೊಂದಲಿದೆ ಎಂದು ಐಎಂಎಫ್ ಆಡಳಿತ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ನಂತರದ ತಮ್ಮ ಪ್ರಥಮ ಭಾಷಣದಲ್ಲಿ ಅವರು ಹೇಳಿದ್ದರು. ಅಮೆರಿಕಾ ಹಾಗೂ ಜರ್ಮನಿಯಲ್ಲಿ ನಿರುದ್ಯೋಗ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಅವರು ಹೇಳಿದ್ದಾರೆ.