ಉದ್ಯೋಗ ಪಡೆಯಲು ಕೌಶಲ್ಯ ತರಬೇತಿ ಶಿಬಿರಗಳು ಪೂರಕ: ಹಿರೇಮಠ

ಉದ್ಯೋಗ ಪಡೆಯಲು ಕೌಶಲ್ಯ ತರಬೇತಿ ಶಿಬಿರಗಳು ಪೂರಕ: ಹಿರೇಮಠ Skill training camps are a must for getting a job: Hiremath

ಮುದ್ದೇಬಿಹಾಳ 23: ಹಿಂದಿನ ಕಾಲದಲ್ಲಿ ಭಾರತದಲ್ಲಿ ಶಿಕ್ಷಣದ ವ್ಯವಸ್ಥೆ ಅಷ್ಟೊಂದು ಸುಧಾರಣೆ ಇರಲಿಲ್ಲ ಆದರೇ ಮಾನವಿಯ ಮೌಲ್ಯಗಳಿಂದ ಕೂಡಿದ ಸಂಸ್ಕಾರವಂತ ಪದ್ಧತಿಯಿತ್ತು. ಜತೆಗೆ ಮನೆ ಬಾಗಿಲಿಗೆ ಬಂದು ಸರಕಾರಿ ಉದ್ಯೋಗ ಪಡೆದುಕೊಳ್ಳಲು ಅವಕಾಶಗಳಿದ್ದವು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಇದೇ, ಹಲವು ಸೌಲಭ್ಯಗಳಿವೆ ಆದರೇ  ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತದೆ. ಸಂಸ್ಕಾರ ಸತ್ತುಹೋಗಿದೆ. ಇಂತಹ ಸಂದರ್ಭದಲ್ಲಿ ಕೌಶಲ್ಯ ತರಬೇತಿ ಶಿಬಿರಗಳು ಪೂರಕವಾಗಿವೆ ಎಂದು ಹಿರಿಯ ಸಾಹಿತಿ ಬಿ ಎಂ ಹಿರೇಮಠ ಹೇಳಿದರು.  

 ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಭ್ಯೂದಯ ಪಿಯು ಸಾಯನ್ಸ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕೌಶಲ್ಯ ತರಬೇತಿ ಶಿಬಿರದ ಎರಡನೇ ದಿನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕಿಗಾಗಿ ಉದ್ಯೋಗಕ್ಕಾಗಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೌಶಲ್ಯ ತರಬೇತಿಗಳು ಪೂರಕವಾಗಿವೆ ಮಾತ್ರವಲ್ಲದೇ ಗುಣಮಟ್ಟ ಶಿಕ್ಷಣ ನೀಡುವುದು ಅಷ್ಟೇ ಮುಖ್ಯವಾಗಿದೆ.  ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿಯವರು ತಮ್ಮ ಶಿಕ್ಷಣ ಸಂಸ್ಥೆಯಿಂದ ಕಳೆದ ಹಲವು ವರ್ಷಗಳಿಂದ ಬಡ ಕುಟುಂಬಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿ ಕ್ರಾಂತಿಯ ಛಾಪು ಮೂಡಿಸಿದ್ದಾರೆ. ಅದರಂತೆ ಸದ್ಯ ಪದವಿ ಸ್ನಾತಕೋತ್ತರ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ ಶಿಬಿರ ನಡೆಸುವ ಮೂಲಕ ಅವರಲ್ಲಿ ಆತ್ಮಬಲ ತುಂಬುವ ಕಾರ್ಯ ನಿಜಕ್ಕೂ ಶ್ಲಾಘನಿಯ. 

ಕಳೆದ ಎರಡು ದಿನಗಳವರೆಗೆ ನುರಿತ ತಜ್ಞರಿಂದ ಕೌಶಲ್ಯ ತರಬೇತಿಯ ಸದುಪಯೋಗ ಪಡೆಸಿಕೊಂಡ ಯುವಕ ಯುವತಿಯರು ಯಾವತ್ತಿಗೂ ಧೃತಿಗೆಡದೇ ಎಲ್ಲವನ್ನೂ ಎದುರಿಸುತ್ತೇನೆ ಎನ್ನುವ ಸ್ವಯಂ ಪ್ರೇರಿತ ಆತ್ಮ ವಿಶ್ವಾಸದೊಂದಿಗೆ ಕಠಿಣ ಪರಿಶ್ರಮದೊಂದಿಗೆ ಮುನ್ನಡೆಯರಿ ಸಾಧನೆ ಹಾದಿ ಸುಗಮವಾಗುತ್ತದೆ ಎಂದರು. 

ಅಹಿಲ್ಯಾದೇವಿ ಹೋಳ್ಕರ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಅವರು ಮಾತನಾಡಿ ನಮ್ಮ ಭಾಗದ ಯುವ ಯುವತಿಯರು ಕೌಶಲ್ಯ ತರಬೇತಿ ಪಡೆದುಕೊಳ್ಳಲು ದೂರದ ಹೋರರಾಜ್ಯಗಳಿಗೆ  ಜಿಲ್ಲೆಗಳಿಗೆ ಹೋಗಬೇಕಾದ ಸ್ಥಿತಿ ಇತ್ತು ಆದರೇ ಕೆಲವರಿಗೆ ಸಾಧ್ಯವಿತ್ತು ಕೆಲವರಿಗೆ ಸಾಧ್ಯವಾಗುತ್ತಿರಲಿಲ್ಲಿ ಇದರಿಂದ ಬಡ ಕುಟುಂಭದವರು ಸರಕಾರಿ ಉದ್ಯೋಗ ಪಡೆದುಕೊಳ್ಳಲು ಕಷ್ಟಸಾಧ್ಯವಿತ್ತು. ಇದನ್ನು ಮನಗಂಡು ಧಾರವಾಡದ ವಿಶ್ರಾಂತ ಕುಲಪತಿ ಡಾ, ಎಚ್ ಬಿ ವಾಲಕಾರ ಅವರ ಮಾರ್ಗದರ್ಶನದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿಯೇ ಕೌಶಲ್ಯ ತರಬೇತಿ ನೀಡಲು ತೀರ್ಮಾನಿಸಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದೊಂದು ಹೊಸ ಅನುಭವ ಹಾಗೂ ಕೌಶಲ್ಯ ತರಬೇತಿ ಶೀಬೀರ ಅಭೂತಪೂರ್ವ ಯಶಸ್ಸು ಕಂಡಿದ್ದು ತೃಪ್ತಿ ತಂದಿದೆ. 

ವಿದ್ಯಾರ್ಥಿಗಳು ಬರಿ ಕರ್ನಾಟಕ ಸರಕಾರದ ಉದ್ಯೋಗಕಾಂಕ್ಷೀಯಾಗಿರದೇ ಕೇಂದ್ರ ಸರಕಾರದ ಉದ್ಯೋಗಾಕಾಂಕ್ಷಿಯಾಗಿ ಅರ್ಜಿ ಸಲ್ಲಿಸುವಲ್ಲಿ ಪ್ರಯತ್ನಿಸಬೇಕು ಇದರಿಂದ ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬಹುದಾಗಿದೆ ಎಂದರು. 

ಧಾರವಾಡದ ಸ್ಪರ್ಧಾ ಜೀನಿಯಸ್ ಆಕಾಡೆಮಿಯ ಉಪನ್ಯಾಸಕ ಸಿದ್ದಣ್ಣ ದಳವಾಯಿ, ಧಾರವಾಡದ ಉಪನ್ಯಾಸಕಿ ಪ್ರೀಯಾಂಕ ಪತ್ತಾರ,  ಡಾ, ಕೆ ಅಶೋಕ, ಶೇಖಪ್ಪ ಮೇಟಿ ಸೇರಿದಂತೆ ಹಲವರು ಸಾವಿರಾರು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿದರು. 

ಧಾರವಾಡ ವಿವಿ ವಿಶ್ರಾಂತ ಕುಲಪತಿ ಡಾ, ಎಚ್ ಬಿ ವಾಲಿಕಾರ, ನ್ಯಾಯವಾದಿ, ಪಿಎಲ್ ಡಿ ಬ್ಯಾಂಕಿ ಅಧ್ಯಕ್ಷ ಬಿ ಕೆ ಬಿರಾದಾರ, ಸುರೇಶ ಹಳೆಮನಿ, ಬಸವರಾಜ ಬಿಜ್ಜುರ, ಆಡಳಿತಾಧಿಕಾರಿ ಬಿ ಜಿ ಬಿರಾದಾರ, ಪ್ರಾಂಶುಪಾಲ ಆರ್ ಎಸ್ ಜಡಗಿ, ಪ್ರಾಚಾರ್ಯ ಎಂ ಎಂ ಧನೂರ, ಅಕ್ಷರ ದಾಸೋಹದ ಸಾಹಾಯಕ ನಿರ್ಧೇಶಕ ಎಂ ಎಂ ಬೆಳಗಲ್ಲ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಬಿರಾದಾರ, ರಂಗಸ್ವಾಮಿ ಎಸ್,ಕಿರಣ ಮದರಿ, ವಿರೇಶ ಹುಲಿಕೇರಿ, ರವಿ ಛಲವಾದಿ, ಬಸವರಾಜ ಗುದಲಮನಿ, ರವಿ ಜಗಲಿ ಸೇರಿದಂತೆ ಹಲವರು ಇದ್ದರು.