17ರಂದು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ

 17ರಂದು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ

ಲೋಕದರ್ಶನ ವರದಿ

ಅಥಣಿ: ಕನ್ನಡ ಸಾಹಿತ್ಯ ಪರಿಷತ್ತನ ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಶನಿವಾರ ದಿ. 17 ರಂದು ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದು. ಎಲ್ಲ ಕನ್ನಡ ಮನಸ್ಸುಗಳು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಘಟಕದ ಅಧ್ಯಕ್ಷ ಡಾ. ಮಹಾಂತೇಶ ಉಕ್ಕಲಿ ಹೇಳಿದರು. 

ಇಲ್ಲಿಯ ಎಸ್.ಎಸ್.ಎಂ ಎಸ್ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ಬಾರಿ ಸವರ್ಾಧ್ಯಕ್ಷರನ್ನಾಗಿ ರಂಗಕಮರ್ಿ ಕನ್ನಡ ವಕೀಲರಾದ ಕೆ.ಎಲ್ ಕುಂದರಗಿ ಅವರನ್ನು ಆಯ್ಕೆಮಾಡಲಾಗಿದೆ. ಸಂಕೋನಟ್ಟಿ ಗ್ರಾಮದಲ್ಲಿ ಈಗಾಗಲೇ ಸಭೆಗಳನ್ನು ನಡೆಯಿಸಿ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯ ಭರದಲ್ಲಿ ಸಾಗಿದ್ದು.ಸಭಾ ಮಂಟಪ ಹಾಗೂ ವಿವಿಧ ದ್ವಾರ, ಪುಸ್ತಕ ಮಳಿಗೆಗಳಿಗೆ ಸ್ವಾತಂತ್ರ್ಯ ಯೋಧ ಎಸ್.ಬಿ.ದಳವಾಯಿ, ಸಾಹಿತಿ ಲಕ್ಷ್ಮ ಬಳ್ಳೋಳ್ಳಿ, ವೀರಯೋಧ ಭರತೇಶ ಪಡನಾಡ, ಕಲಾವಿದೆ ಲಕ್ಷ್ಮೀಬಾಯಿ ದೊಡವಾಡ, ಶಿವಲಿಂಗಪ್ಪ ಕಂಪನ್ನವರ ಇವರುಗಳ ನಾಮಕರಣ ಮಾಡುವ ಮೂಲಕ ಅವರ ಸ್ಮರಣೆ ಮಾಡಲಾಗಿದೆ ಎಂದರು.

ದಿ.17 ರಂದು ಬೆಳಿಗ್ಗೆ 8 ಗಂಟೆಗೆ ಅಥಣಿ ತಹಶೀಲ್ದಾರ ಬಳಿಗಾರ ಸರ ಧ್ವಹಾರೋಹಣ, ಕಸಾಪ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಕನ್ನಡ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಮಹಾಂತೇಶ ಉಕ್ಕಲಿ ನೇರವೇರಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಕನ್ನಡ ಭುವನೇಶ್ವರಿ ರಥಯಾತ್ರೆ ನಡೆಯಲಿದ್ದು ಸಂಕೋನಟ್ಟಿ ಗ್ರಾ.ಪಂ ಅಧ್ಯಕ್ಷ ಅರುಣ ಬಾಸಿಂಗಿ ನೇರವೇರಿಸುವರು .ಈ ಸಮಯದಲ್ಲಿ ದೀಪಾ ನಾಯಿಕ, ಎಚ್ ಶೇಖರಪ್ಪ, ಉಸ್ಮಾನ ಅವಟಿ, ಸುಭಾಷ ಹುಬ್ಬಳ್ಳಿ ಭಾಗವಹಿಸಲಿದ್ದಾರೆ. 

10 ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದ್ದು ವಿಮೋಚನಾ ಅಧ್ಯಕ್ಷ ಬಿ.ಎಲ್ ಪಾಟೀಲ ನೇರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕರಾದ ಮಹೇಶ ಕುಮಠಳ್ಳಿ , ಸಾನಿಧ್ಯವನ್ನು ಶಿವಬಸವ ಸ್ವಾಮಿಗಳು, ಪ್ರಭುಚನ್ನಬಸವ ಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಂಸದರು, ವಿಧಾನ ಪರಿಷತ್ತು ಸದಸ್ಯರು, ಜಿ.ಪಂ ,ಗ್ರಾ. ಪಂ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ವಿವಿಧ ಗ್ರಂಥಗಳ ಬಿಡುಗಡೆ ನಡೆಯಲಿದೆ. ಸವರ್ಾಧ್ಯಕ್ಷರಾದ ಕೆ.ಎಲ್ ಕುಂದರಗಿ ಅವರಿಂದ ಸವರ್ಾಧ್ಯಕ್ಷರ ಭಾಷಣ ಜರುಗುವುದು. 

ಸಂಸ್ಕೃತಿ ಸೌರಭದಲ್ಲಿ ಕುಮಾರಿ ಸಂಪದಾ ಸಂತೋಷ ಸಾವಡಕರ ಇವಳಿಂದ ನಿತ್ಯೋತ್ಸವ ನೃತ್ಯ, ಬಿ.ಎಸ್ ಮಠಪತಿ ಅವರಿಂದ ಕುಂಚಕಾವ್ಯ, ಅಶೋಕ ಕಾಂಬಳೆ ಇವರಿಂದ ಗೀತ ಸಂಗೀತ ನಡೆಯಲಿದೆ. ಅಥಣಿ ಅಭಿವೃದ್ಧಿ ಹಾಗೂ ಗಡಿ ನುಡಿ ಸಂಸ್ಕೃತಿ ಚಿಂತನ ನಡೆಯಲಿದ್ದು ಡಾ. ಅರ್ಚನಾ ಅಥಣಿ ಆಶಯ ನುಡಿಗಳನ್ನಾಡಲಿದ್ದು. ಡಾ. ಪಿ.ಜಿ.ಕೆಂಪಣ್ಣನವರ ಭುಜೇಂದ್ರ ಮಹಿಷವಾಡಗಿ ಜೀವನ ಸಾಧನೆ ಕುರಿತು, ಜಿಲಾನಿ ಮೊಕಾಶಿ ಇವರಿಂದ ಕೃಷಿ ಪದ್ಧರಿ ಕುರಿತು, ಅಥಣಿ ತಾಲೂಕಿನ ಸ್ಥಳನಾಮಗಳ ನಿಷ್ಪತ್ತಿ ಕುರಿತು ವಾಮನ ಕುಲಕಣರ್ಿ ಅವರು ಮಾತನಾಡಲಿದ್ದು ಸಾಹಿತಿ ಡಾ. ಅಶೋಕ ನರೋಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 4 ಕ್ಕೆ ಕವಿಗೋಷ್ಠಿ ನಡೆಯಲಿದ್ದು ಸಾಹಿತಿ ರೋಹಿಣಿ ಯಾದವಾಡ ಆಶಯ ನುಡಿಗಳನ್ನಾಡಿದ್ದು, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಕ್ಕೆ ಸಮಾರೋಪ ನಡೆಯಲಿದ್ದು ಶೆಟ್ಟರಮಠದ ಮರುಳಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು. ಅತಿಥಿಗಳಾಗಿ ಡಾ. ಬಾಳಾಸಾಹೇಬ ಲೋಕಾಪೂರ. ಡಾ. ಜೆ.ಪಿ ದೊಡಮನಿ ಆಗಮಿಸಲಿದ್ದು ಸಾಹಿತಿ ಡಾ. ವಿ.ಎಸ್ ಮಾಳಿ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಇದೇ ಸಮಯದಲ್ಲಿ ಗಡಿನಾಡಿನ ಕನ್ನಡ ಸೇವಕರಿಗೆ ಸನ್ಮಾನ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಥಣಿ ಕಸಾಪ ಘಟಕದ ಗೌರವ ಅಧ್ಯಕ್ಷರಾದ ಡಾ. ಮಲ್ಲಿಕಾಜರ್ುನ ಹಂಜಿ, ಕಾರ್ಯದಶರ್ಿ ರೋಹಿಣಿ ಯಾದವಾಡ, ಕೋಶಾಧ್ಯಕ್ಷರಾದ ಅರುಣ ಯಲಗುದ್ರಿ, ಸಂಕೋನಟ್ಟಿಯ ಅನಂತ ಬಸರಿಕೊಡಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಇಂಚಲ ಉಪಸ್ಥಿತರಿದ್ದರು.