ಶಿಲ್ಲಾಂಗ್, ಏಪ್ರಿಲ್ 15,ಮೇಘಾಲಯದಲ್ಲಿ ಕೊರೊನವೈರಸ್‍ನಿಂದ ಮೃತಪಟ್ಟ ವ್ಯಕ್ತಿಯ ಆರು ಸಂಬಂಧಿಕರಿಗೆ ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಬುಧವಾರ ತಿಳಿಸಿದ್ದಾರೆ. ಮೇಘಾಲಯದ ಮೊದಲ ಕೊವಿದ್-19 ಸೋಂಕಿತ ಡಾ. ಜಾನ್ ಎಲ್ ಸೈಲೊ ರಿಂಥಾಥಿಯಾಂಗ್ ಬುಧವಾರ ಮುಂಜಾನೆ ಇಲ್ಲಿನ ಬೆಥನಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ನಂತರ ಹೊಸ ಪ್ರಕರಣಗಳು ದೃಢಪಟ್ಟಪಟ್ಟಿವೆ ಎಂದು ಸಂಗ್ಮಾ ಟ್ವೀಟ್ ಮಾಡಿದ್ದಾರೆ.
‘ಇಲ್ಲಿಯವರೆಗೆ ಪರೀಕ್ಷಿಸಲಾದ 68 ಜನರ ಪೈಕಿ 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲ ಮೃತ ಸೋಂಕಿತ ವ್ಯಕ್ತಿಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಾಗಿದ್ದಾರೆ.’ ಎಂದು ಅವರು ಹೇಳಿದ್ದಾರೆ.ಬೆಥನಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಜಾನ್ ಎಲ್ ಸೈಲೊ ರಿಂಥಾಥಿಯಾಂಗ್ ಅವರ ಪಾರ್ಥಿವ ಶರೀರದ ಅಂತಿಮ ವಿಧಿ-ವಿಧಾನಗಳ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎ.ಎಲ್.ಹೆಕ್ ಎಂದು ಹೇಳಿದ್ದಾರೆ. ಆದರೂ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ 69 ವರ್ಷದ ಮೃತ ವೈದ್ಯರಿಗೆ ಪ್ರಯಾಣದ ಇತಿಹಾಸವಿಲ್ಲ. ಆದರೆ ಅವರ ಸೊಸೆ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಚ್ 15ರಂದುನ್ಯೂಯಾರ್ಕ್‍ನಿಂದ ವಾಪಸ್ಸಾಗಿದ್ದರು. ಮಾರ್ಚ್ 17ರಂದು ದೆಹಲಿಯಿಂದ ಇಂಫಾಲ್‍ಗೆ ಪ್ರಯಾಣ ಬೆಳೆಸಿದ್ದರು. ಮಾರ್ಚ್ 20ರಂದು ಇಂಫಾಲ್‍ನಿಂದ ದೆಹಲಿಗೆ ಪ್ರಯಾಣಿಸಿದ್ದ ಅವರು ಮಾರ್ಚ್ 24ರಂದು ದೆಹಲಿಯಿಂದ ಶಿಲ್ಲಾಂಗ್ ಗೆ ವಾಪಸ್ಸಾಗಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಂಪತ್ ಕುಮಾರ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.