ಅರಣ್ಯವಾಸಿಗಳ ಸಮಾವೇಶದ ಮೂಲಕ ಸರ್ಕಾರದ ಎದುರು ಆರು ಬೇಡಿಕೆ : ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ನಿರ್ಣಯಕ್ಕೆ ಆಗ್ರಹ

ಅರಣ್ಯವಾಸಿಗಳ ಸಮಾವೇಶದ ಮೂಲಕ ಸರ್ಕಾರದ ಎದುರು  ಆರು ಬೇಡಿಕೆ : ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ನಿರ್ಣಯಕ್ಕೆ ಆಗ್ರಹ  Six demands from the government through the forest dwellers' conference: Demand for an appropriate r

                    ಕಾರವಾರ 28: ರಾಜ್ಯದಲ್ಲಿ ಅರಣ್ಯ ಅತಿಕ್ರಮದಾರರಿಗೆ  ಕಾನೂನು ಜಾಗೃತಿ ಜಾಥ ಹಾಗೂ ಕಾರವಾರ ಚಲೋ ಕಾರ್ಯಕ್ರಮವನ್ನ ಡಿಸೆಂಬರ್ 6.ರಂದು ಆಯೋಜಿಲಾಗಿದೆ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿದ ಅವರು  ಕಳೆದ 34 ವರ್ಷ ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ  ಕರ್ನಾಟಕದ 16 ಜಿಲ್ಲೆಯಲ್ಲಿ ಭೂಮಿ ಹಕ್ಕಿಗಾಗಿ ಹೋರಾಟ ಮಾಡಲಾಗುತ್ತಿದೆ. ಈ ಸಮಸ್ಯೆಯ ಕಾನೂನಿನ ತೊಡಕಿನ ಬಗ್ಗೆ  ಅರಣ್ಯ ಅಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಗೊಂದಲವಿದೆ. 

                          ಹಾಗಾಗಿ ನಾವು ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಅರಣ್ಯ ಅತಿಕ್ರಮಣ ಭೂಮಿ ಹಕ್ಕು ಪಡೆಯಲು ಇರುವ  ಕಾನೂನು   ಅರಿವು ಮೂಡಿಸಲು ಜಾಗೃತಿ ಜಾಥವನ್ನ ಹಮ್ಮಿಕೊಳ್ಳಲಾಗಿದೆ ಎಂದರು.ಅರಣ್ಯ ಹಕ್ಕು ಕೊಡಿಸಲು ಜನಪ್ರತಿನಿಧಿಗಳ ,ಸರ್ಕಾರದ ಇಚ್ಛಾಶಕ್ತಿಯ ಕೊರತೆ ಇದೆ. ಈ ಹಿಂದೆ ಕಾಗೂಡು ತಿಮ್ಮಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ, ಗದಗ ಜಿಲ್ಲೆಯಲ್ಲಿ ಎಚ್ .ಕೆ.ಪಾಟೀಲರು , ಉತ್ತರ ಕನ್ನಡದಲ್ಲಿ  ದೇಶಪಾಂಡೆಯವರು ಅರಣ್ಯ ಅತಿಕ್ರಮಣ  ಭೂಮಿಗೆ  ಕೆಲವರಿಗೆ  ಪಟ್ಟ ನೀಡಿದ್ದರು. ಈ ಸಂಖ್ಯೆ 2000 ದಾಟಿಲ್ಲ. ನಮ್ಮ ಜಿಲ್ಲೆಯ 69000 ಅತಿಕ್ರಮಣದಾರರ ಅರ್ಜಿಗಳು ತಿರಸ್ಕತವಾಗಿವೆ. ಕೋರ್ಟನಲ್ಲಿ ಯಾವುದೇ ಅತಿಕ್ರಮಣದಾರರ ಅರ್ಜಿ ತಿರಸ್ಕರಿಸಬಾರದು ಎಂಬ ನಿಯಮ ಇದೆ.  ಮೂರು ತಲೆಮಾರಿನ ದಾಖಲೆ ನೀಡಿದರೆ ಮಾತ್ರ ಪಟ್ಟಾ ನೀಡಲಾಗುವುದು ಎನ್ನುತ್ತಿದ್ದಾರೆ.  

                      ಈ ಹಿಂದೆ ಇದ್ದ ಕಾನೂನಿನ ಮೇಲೆಯೇ ಹಕ್ಕುಪತ್ರ ನೀಡುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದು ಹೋರಾಟಗಾರರ ಮುಖಂಡ ರವೀಂದ್ರ ನಾಯ್ಕ ಹೇಳಿದರು. 1998ರಲ್ಲಿ ಜಿಲ್ಲೆಯ 35 ಸಾವಿರ ಅತಿಕ್ರಮಣದಾರರ ಮೇಲೆ ದೂರು ದಾಖಲು ಮಾಡಿ ವಿಚಾರಣೆ ನಡೆಸಲಾಗಿತ್ತು. ಆಗ ಹಾಕಿದ್ದ ದೂರಿನ ವಿಚಾರಣೆಯನ್ನು ಈಗ ಮಾಡಲಾಗುತ್ತಿದೆ ಎಂದು ರವೀಂದ್ರ ಅವರು ಹೇಳಿದರು. ಅರಣ್ಯ ಅತಿಕ್ರಮಣದಾರರ ಸಮಸ್ಯೆ ಹಾಗೂ ಹಕ್ಕು ಪತ್ರ ನೀಡಿವ ಸಂಬಂಧ ಬರುವ ಡಿಸೆಂಬರ್ 8 ರಿಂದ ಪ್ರಾರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು,  ಜಿಲ್ಲೆಯ ಅರಣ್ಯವಾಸಿಗಳ ಪರ ಧ್ವನಿ ಎತ್ತಬೇಕು ಎಂದು ನಾವು ಆಗ್ರಹಿಸುತ್ತೇವೆ.

                  ಉತ್ತರ ಕನ್ನಡ  ಜಿಲ್ಲೆಯಲ್ಲಿ ಇರುವ 14 ಲಕ್ಷ ಜನರಲ್ಲಿ,  ಸುಮಾರು 4 ರಿಂದ 5 ಲಕ್ಷ ಅರಣ್ಯವಾಸಿಗಳೇ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದರು. ಇನ್ನಾದರೂ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ.  ಅಧಿಕಾರಿಗಳು ಮೂರು ತಲೆ ಮಾರಿನ ದಾಖಲೆ ಕೇಳುವುದನ್ನು ಕೈ ಬಿಡಲಿ, ಅತಿಕ್ರಮಣದಾರರ ಮೇಲೆ ಪ್ರಕರಣ ದಾಖಲಿಸುವ ಕ್ರಿಯೆ ನಿಲ್ಲಲಿ ಎಂದರು.  ಪತ್ರಿಕಾ ಗೋಷ್ಠಯಲ್ಲಿ ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಜಿಲ್ಲಾ ಸಂಚಾಲಕ ರಾಜೇಶ್ ಮಿತ್ರ ನಾಯ್ಕ ಅಂಕೋಲ, ತಾಲೂಕಾಧ್ಯಕ್ಷ ರಮಾನಂದ ನಾಯಕ ಅಚವೆ, ಅರವಿಂದ ಗೌಡ ಸಂಚಾಲಕ, ಅಮೋಜ್, ಪಂಚಲೇಯ, ಯೋಗೇಶ್ ಗೌಡ ಸಂತೆಗುಳಿ ಮುಂತಾದವರು  ಉಪಸ್ಥಿತರಿದ್ದರು.