ಈಜು ಸ್ಪರ್ಧೆಯಲ್ಲಿ ಸಹೋದರಿಯರಿಗೆ ಚಿನ್ನದ ಪದಕ
Sisters win gold medal in swimming competition
ರಾಯಬಾಗ 24: ಹೈದರಾಬಾದಿನಲ್ಲಿ ನ.15 ರಿಂದ 18 ರವರೆಗೆ ನಡೆದ 25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಬೆಳಗಾವಿ ಮಾಹೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಸೋನಮ ಮಲ್ಲು ಪಾಟೀಲ ಹಾಗೂ ಸಾಕ್ಷಿ ಮಲ್ಲು ಪಾಟೀಲ ಸಹೋದರಿಯರು ಚಿನ್ನದ ಪದಕ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.
ಸೋನಮ ಪಾಟೀಲ ಇವಳು ಜೂನಿಯರ್ ವಿಭಾಗದ ಈಜು ಸ್ಪರ್ಧೆಯಲ್ಲಿ 50ಮೀ ಪ್ರೀಸ್ಟೈಲ್, 50ಮೀ ಬ್ಯಾಕ್ ಸ್ಟ್ರೋಕ್ ಮತ್ತು 100ಮೀ ಬ್ಯಾಕ್ ಸ್ಟ್ರೋಕ್, ಒಟ್ಟು 3 ಚಿನ್ನದ ಪದಕ ಪಡೆದಿದ್ದಾಳೆ. ಸಾಕ್ಷಿ ಪಾಟೀಲ ಇವಳು ಸಬ್ ಜೂನಿಯರ್ ವಿಭಾಗದ ಈಜು ಸ್ಪರ್ಧೆಯಲ್ಲಿ 100ಮೀ ಪ್ರೀಸ್ಟೈಲ್, 50ಮೀ ಪ್ರೀಸ್ಟೈಲ್ ಮತ್ತು 50ಮೀ ಬ್ಯಾಕ್ ಸ್ಟ್ರೋಕ್, ಒಟ್ಟು 3 ಚಿನ್ನದ ಪದಕ ಪಡೆದಿದ್ದಾಳೆ.ಈ ಇಬ್ಬರು ಸಹೋದರಿಯರು ಸತತ 3ನೇ ಬಾರಿ ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನಷಿಪ್ ದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ, ಈ ಹಿಂದೆ ಗ್ವಾಲಿಯರ್ ಮತ್ತು ಗೋವಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಕೂಡ ಚಿನ್ನದ ಪದಕ ಪಡೆದಿದ್ದಾರೆ. ವೈಯಕ್ತಿಕವಾಗಿ ಇಬ್ಬರು ಸಹೋದರಿಯರು ತಲಾ 9 ಚಿನ್ನದ ಪದಕ ಪಡೆದಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 