ಸರ್.ಎಂ. ವಿಶ್ವೇಶ್ವರಯ್ಯನವರ ಸ್ಮರಣೆ, ಇಂಜನೀಯರರ ದಿನಾಚರಣೆ
Sir .M. Vishweshwarayya's Memorial, Engineers' Day
ಸರ್.ಎಂ. ವಿಶ್ವೇಶ್ವರಯ್ಯನವರ ಸ್ಮರಣೆ, ಇಂಜನೀಯರರ ದಿನಾಚರಣೆ
ಧಾರವಾಡ, 16 : ದಿ. ಎಸ್. ಜಿ. ಬಾಳೇಕುಂದ್ರಿ ಈ ನಾಡು ಕಂಡ ಒಬ್ಬ ಸರ್ವಶ್ರೇಷ್ಠ ನೀರಾವರಿ ತಜ್ಞರು. ಅವರ ಬುದ್ಧಿಶಕ್ತಿ, ಪರಿಶ್ರಮ, ಪ್ರಾಮಾಣಿಕತೆಯ ಸೇವೆಯಿಂದಾಗಿ ಎರಡನೇ ವಿಶ್ವೇಶ್ವರಯ್ಯ ಎಂದೇ ಕರೆಯಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ. ಸಿ. ತಲ್ಲೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕೀರ್ತಿಶೇಷ ಎಸ್. ಜಿ. ಬಾಳೇಕುಂದ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸರ್. ಎಂ. ವಿಶ್ವೇಶ್ವರಯ್ಯನವರ ಸ್ಮರಣೆ ಹಾಗೂ ಇಂಜನೀಯರರ ದಿನಾಚರಣೆ ನಿಮಿತ್ತ ಶ್ರೀನಿವಾಸ ಕೃ ದೇಸಾಯಿ ಅವರ ‘ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ.ವಿ’ (ಒಂದು ಸತ್ಯನೋಟ) ಹಾಗೂ ಕವಿ ನರಸಿಂಹ ಪರಾಂಜಪೆ ಅವರ ಕವನ ಸಂಕಲನ ‘ಸದಾ ಎನ್ನ ಹೃದಯದಲ್ಲಿ (ಕವಿಯ ಕಂಗಳಲ್ಲಿ ವಿಶಿಷ್ಟ ಸಾಧಕರು) ಪುಸ್ತಕ ಲೋಕಾರೆ್ಣ ಮಾಡಿ ಮಾತನಾಡುತ್ತಿದ್ದರು. .
ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರ ಸಂಸ್ಥಾನದ ದಿವಾಣರಾಗಿ ಸಲ್ಲಿಸಿದ ಸೇವೆ ಚಿರಕಾಲ ಉಳಿಯುವಂತಹದು. ನಾಲ್ವಡಿ ಕೃಷ್ಣರಾಜ ಒಡೆಯರ ಉದಾರತೆಯ ಫಲವಾಗಿ ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾಗಲು ವಿಶ್ವೇಶ್ವರಯ್ಯನವರು ಕಾರಣರಾದರು. ಜೊತೆಗೆ ವಿಶ್ವೇಶ್ವರಯ್ಯನವರಲ್ಲಿದ್ದ ದೂರದೃಷ್ಟಿ, ಬದ್ಧತೆ, ಪರಿಶ್ರಮದಿಂದಾಗಿ ಓದ್ಯೋಗಿಕವಾಗಿ, ಶೈಕ್ಷಣಿಕವಾಗಿ ಮೈಸೂರು ರಾಜ್ಯ ಮಾದರಿಯ ರಾಜ್ಯವಾಯಿತು. ಹೈದ್ರಾಬಾದ, ಮೈಸೂರ ಸಮೃದ್ಧಿ ಕಂಡವು ಎಂದರು.
ನಿವೃತ್ತ ಅಭಿಯಂತರರಾದ ನರಸಿಂಹ ಪರಾಂಜಪೆ ಮಾತನಾಡಿ, ದಿ. ಎಸ್. ಜಿ. ಬಾಳೇಕುಂದ್ರಿ ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಇಬ್ಬರೂ ಮರೆಯಲಾರದ ಮಹಾನುಭಾವರು. ವಿದ್ಯಾರ್ಥಿ ದೆಸೆಯಿಂದಲೇ ನನಗೆ ಕಾವ್ಯ ಕೃಷಿ ಮಾಡುವ ಹವ್ಯಾಸ ಚಿಗುರೊಡೆದಿತ್ತು. ‘ಸದಾ ಎನ್ನ ಹೃದಯದಲ್ಲಿ’ ಎಂಬ ನನ್ನ ಈ ಕವನ ಸಂಕಲನದಲ್ಲಿ ಕನ್ನಡ ನಾಡಿನ 30 ವಿಶಿಷ್ಟ ಸಾಧಕರ ವ್ಯಕ್ತಿ ಚಿತ್ರಣಗಳಿವೆ ಎಂದು ಹೇಳಿ, ಪಂ. ಚಂದ್ರಶೇಖರ ಪುರಾಣಿಕಮಠ ಹಾಗೂ ಶೃಂಗೇರಿ ಶಾರದಾ ಪೀಠದ ಪೂಜ್ಯ ಭಾರತೀ ತೀರ್ಥರ ಕುರಿತು ಬರೆದ ಕವನ ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಈ ಕಾರ್ಯಕ್ರಮ ವಿಜ್ಞಾನ ಹಾಗೂ ಸಾಹಿತ್ಯ ಸಮ್ಮಿಳಿತ ಅಪರೂಪದ ಕಾರ್ಯಕ್ರಮವಾಗಿದೆ. ನರಸಿಂಹ ಪರಾಂಜಪೆ ಇಂತಹ ಇಳಿ ವಯಸ್ಸಿನಲ್ಲೂ ಸಾಹಿತ್ಯ ಕೃಷಿ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ವೇದಿಕೆಯಲ್ಲಿ ದತ್ತಿದಾನಿ ಶ್ರೀನಿವಾಸ ಕೆ. ದೇಸಾಯಿ ಅವರ ಪರವಾಗಿ ಅಶೋಕ ಮಜ್ಜಿಗುಡ್ಡ ಉಪಸ್ಥಿತರಿದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಎಸ್.ಜಿ. ಪಾಟೀಲ, ಎಂ. ಎಂ. ಚಿಕ್ಕಮಠ, ಆನಂದ ಕುಲಕರ್ಣಿ, ನಾರಾಯಣ ಪತ್ತಾರ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 