ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಬದಲಾದ ಮೆಕ್ಸಿಕೋ ಜನರ ಜೀವನಶೈಲಿ

ಮೆಕ್ಸಿಕೊ ನಗರ, ಜನವರಿ 30,ಏಕ-ಬಳಕೆಯ ಪ್ಲಾಸ್ಟಿಕ್  ಚೀಲ ಬಳಕೆ ನಿಷೇಧಿಸುವ ನಗರ ಸುಗ್ರೀವಾಜ್ಞೆ  ಕಳೆದ 1 ರಿಂದ ಜಾರಿಗೆ ಬಂದ ನಂತರ  ಮೆಕ್ಸಿಕೊ ರಾತ್ರೋರಾತ್ರಿ ನಗರದ ಜನತೆಯ ಜೀವನ ಶೈಲಿಯೇ ಬದಲಾಗಿ ಹೋಗಿದೆ ದಿನಸಿ, ಇತರೆ  ಅಗತ್ಯ ವಸ್ತುಗಳ  ಖರೀದಿಗಾಗಿ  ಹೊಸ  ಕೈಚೀಲ ಹಿಡಿದು ಪರಿಸರ ಕಾಳಜಿ ಮೆರೆದಿದ್ದಾರೆ. ಏಕ-ಬಳಕೆಯ ಪ್ಲಾಸ್ಟಿಕ್ ಚೀಲ ನಿಷೇಧಿಸುವ ನಗರ ಸುಗ್ರೀವಾಜ್ಞೆ ಜನವರಿ 1 ರಿಂದ ಜಾರಿಗೆ ಬಂದಿದೆ. ಇದಕ್ಕೆ ಜನರು  ಗೌರವ ಕೊಟ್ಟಿದ್ದಾರೆ, ಕಾನೂನು ಪಾಲನೆ ಮಾಡಿದ್ದಾರೆ, ಹೊಸ ಬದಲಾವಣೆಗೆ ಒಗ್ಗಿಕೊಂಡು  ಪರಿಸರ ಜಾಗೃತಿಯ ಕಡೆಗೆ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. 

ಸುಮಾರು 20 ದಶಲಕ್ಷ ಜನಸಂಖ್ಯೆವಿರುವ   ನಗರದಲ್ಲಿ, 8,000 ಡಾಲರ್ ದಂಡದ ಎಚ್ಚರಿಕೆ  ಜನರ ಮನಸ್ಸಿನ ಮೇಲೆ  ಬಹಳ ಪರಿಣಾಮ  ಬೀರಿ ಜನರು ಬದಲಾಗಿದ್ದಾರೆ ಎಲ್ಲರ   ಕೈಯಲ್ಲೂ  ಹೊಸ ಬಗೆಯ ಚೀಲಗಳು ಕಾಣಿಸುತ್ತಿವೆ . ಹೊಸ ಜೀವನಶೈಲಿಯೇ ಆರಂಭವಾಗಿದೆ ಈ  ಮೂಲಕ, ಮೆಕ್ಸಿಕೊ ನಗರವು ಪರಿಸರ ಗುಣಮಟ್ಟಸುಧಾರಿಸಲು ಮತ್ತು ಪ್ರಮುಖ ಜಾಗತಿಕ ಸಮುದಾಯದ ಕರೆಗೆ  ಸಹಕರಿಸುತ್ತಿದೆ ಎಂದೂ   ನಗರದ ಪರಿಸರ ಇಲಾಖೆಯ  ಮುಖ್ಯಸ್ಥ ಆಂಡ್ರೀ ಲಿಲಿಯನ್ ಗೈಗ್ ಹೇಳಿದ್ದಾರೆ 

ಜನವರಿ 2021 ರಿಂದ ಚೀಲಗಳು ಹೊರಗುಳಿಯುವುದರೊಂದಿಗೆ, ವ್ಯವಹಾರಗಳು ಪ್ಲಾಸ್ಟಿಕ್ ಸ್ಟ್ರಾ ಇತರೆ ಉತ್ಪನ್ನ ನೀಡುವುದಕ್ಕೆ ಪೂರ್ಣ ವಿರಾಮ ಹಾಕಲಾಗುತ್ತದೆ. ವಿಶ್ವವ್ಯಾಪಿ ಚೀನಾ ಪ್ಲಾಸ್ಟಿಕ್‌ಗಳನ್ನು ನಿಯಂತ್ರಿಸುವ ಮೂಲಕ ಉತ್ತಮ ಆದರ್ಶ ಪಾಲನೆಗೆ ಮುಂದಾಗಿದೆ,  ಮೆಕ್ಸಿಕೊ ನಗರದ ಅಧಿಕಾರಿಗಳು ತಮ್ಮ ಚೀನಾದ ಸಹವರ್ತಿಗಳನ್ನು ಈ ಕ್ಷೇತ್ರದಲ್ಲಿ "ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲೂ  ಸಂಪರ್ಕಿಸಲು ಯೋಜಿಸಿದ್ದಾರೆ.

ವಿಶ್ವದ ಅತಿದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಕೇಂದ್ರಗಳಲ್ಲಿ ಒಂದಾದ ಮೆಕ್ಸಿಕೊ ನಗರವು ದಿನಕ್ಕೆ ಸುಮಾರು 13,ಸಾವರ  ಟನ್ ಕಸ ಉತ್ಪಾದಿಸುತ್ತಿದೆ , ಅದರಲ್ಲಿ ಕೇವಲ 4,100 ಮಾತ್ರ ಮರುಬಳಕೆ ಮಾಡಲಾಗುತ್ತಿದೆ  ಎಂದೂ  ಅಧಿಕಾರಿಗಳು ತಿಳಿಸಿದ್ದಾರೆ.ಪ್ಲಾಸ್ಟಿಕ್ ಬ್ಯಾಗ್ ಅಭ್ಯಾಸ ಕೊನೆಗಣಿಸುವುದು  ಪರಿಸರ, ನಗರ ಸ್ವಚ್ಚಗೊಳಿಸುವ ಮೊದಲ ಉತ್ತಮ ಹೆಜ್ಜೆಯಾಗಿದೆ. ಇದು ನಾಗರಿಕರ ಬದ್ಧತೆಯಾಗಿದೆ, ಇದನ್ನು ಶೇಕಡ  85 ಜನರು ಪಾಲನೆ ಮಾಡುತ್ತಿದ್ದಾರೆ ಇದು ನಿಜಕಕ್ಊ ಒಳ್ಳೆಯ ಬೆಳವಣಿಗೆ ಎಂದು ಹೇಳಲು  ಸಂತೋಷವಾಗುತ್ತಿದೆ ಎಂದೂ  ಗೈಗು ಹೇಳಿದರು. 

ರಾಜಧಾನಿ ಜೊತೆಗೆ, 16 ಮೆಕ್ಸಿಕನ್ ರಾಜ್ಯಗಳು ಸಹ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳ ವಿತರಣೆಯನ್ನು ನಿಷೇಧಿಸುವ ಕಾನೂನು  ಅಂಗೀಕರಿಸಿದೆ.ಒಟ್ಟಾರೆ ಮೆಕ್ಸಿಕೋ ಪರಿಸರ ಕಾಳಜಿಗೆ, ಏಕಬಳಕೆಯ ಪ್ಲಾಸ್ಟಿಕ್ ಹಾವಳಿ ಮುಕ್ತಿಗೆ  ಆದರ್ಶ ಪ್ರಾಯದ ಉತ್ತಮ ಹೆಜ್ಜೆ ಇಟ್ಟಿರುವುದು ಬಹಳ ಮೆಚ್ಚುಗೆ ಪಾತ್ರವಾಗಿದೆ ಎಂಬದು ಕಟು ಸತ್ಯ.ಮೇಲಾಗಿ ಎಲ್ಲರೂ  ಒಪ್ಪುವ ಬೆಳವಣಿಗೆಯೂ ಹೌದು.