ಗಾಯಕ ಮುಖೇಶರದ್ದು ಮರೆಯಲಾರದ ಮಧುರ ಧ್ವನಿ : ಚಂದ್ರಶೇಖರ ಹಿರೇಮಠ

ಗಾಯಕ ಮುಖೇಶರದ್ದು ಮರೆಯಲಾರದ ಮಧುರ ಧ್ವನಿ : ಚಂದ್ರಶೇಖರ ಹಿರೇಮಠ  Singer Mukesh has an unforgettable melodious voice: Chandrashekar Hiremath

ಬೆಳಗಾವಿ 18- ಗಾಯಕ ಮುಖೇಶರದ್ದು ಮರೆಯಲಾರದ ಮಧುರ ಧ್ವನಿ ಆದರೆ ವಿಶಿಷ್ಟವಾದ ಧ್ವನಿ. ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು ಈಗಲೂ ಹೊಂದಿದ್ದಾರೆ. ಅವರು ಗಾಯಕ ಕೆ.ಎಲ್‌. ಸೈಗಲ್ ರ ಅಭಿಮಾನಗಳಾಗಿದ್ದರು. ಸೈಗಲ್ ಅವರ ಧ್ವನಿ ಅನುಕರಣೆ ಮಾಡುತ್ತ ಮುಖೇಶ ಚಿತ್ರರಂಗವನ್ನು ಪ್ರವೇಶಿಸಿದರು ಮುಂದೆ ತಮ್ಮದೇ ಆದ ಧ್ವನಿಯಿಂದ ಪ್ರಸಿದ್ಧರಾದರು ಸ್ವರಾಂಜಲಿ ಸಂಗೀತ ಶಾಲೆಯ ಸ್ಥಾಪಕ   

ಹಿಂದವಾಡಿಯಲ್ಲಿರುವ ಸ್ವರಾಂಜಲಿ ಕರೋಕೆ ಸಂಗೀತ ಶಾಲೆಯವರು ಖ್ಯಾತ ಹಿಂದಿ ಗಾಯಕ ಮುಖೇಶ ಅವರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮುಖೇಶ ಅವರ ಭಾವಚಿತ್ರಕ್ಕೆ ಮಾಲೆಯನ್ನು ಹಾಕಿ, ಅವರ ಚಲನಚಿತ್ರಗಳಲ್ಲಿಯ ಹಾಡುಗಳನ್ನು ಹಾಡುವುದರೊಂದಿಗೆ ತಮ್ಮ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸ್ವರಾಂಜಲಿ ಸಂಸ್ಥಾಪಕ ಚಂದ್ರಶೇಖರ ಹಿರೇಮಠ ಮುಖೇಶ ಅವರ ಕುರಿತಾದ ಹಲವಾರು ವಿಷಯಗಳನ್ನು ಹಂಚಿಕೊಂಡರು.  

ಹಾಡುಗಾರರಾದ ಕಿರಣ ಕುಲಕರ್ಣಿ, ಅಶೋಕ ಕರಪೆ, ಗಜಾನನ ರತನ, ಅನ್ವರ ಝರಿ, ತನ್ವೀರ ಜಾಗಿರದಾರ, ಮಂಜುನಾಥ ಹಿರೇಮಠ, ಪ್ರಭಾಕರ ಕೊಲ್ಹಾರ, ಸಲಿಂ ಶೈಖ, ಸಯ್ಯದ ಎನ್‌. ಆರ್, ಚಂದ್ರಕಾಂತ ಅಪ್ಪಣ್ಣವರ, ಪಾಂಡುರಂಗ ಖಂಡುಕರ್, ಹರಿ ಸುತಾರ, ಚಂದ್ರಶೇಖರ ಹಿರೇಮಠ,  ಶ್ರೀಮತಿ ಸುಕನ್ಯ ಸೂಜಿ, ಶ್ರೀಮತಿ ಅನುರಾಧಾ ಕುಲಕರ್ಣಿ, ಛಾಯಾ ಕರಪೆ, ಸುಧಾಕರ ಚೊಳಚದ  ಮುಖೇಶರ ಜನಪ್ರಿಯ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಮೇರಾ ನಾಮ ಜೋಕರ ಚಿತ್ರದ ಜೀನಾ ಯಹಾಂ ಮರನಾ ಯಹಾಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.