ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ; ಮನಗೂಳಿ

ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ; ಮನಗೂಳಿ Sincere efforts for the development of the constituency: Managuli

ಲೋಕದರ್ಶನ ವರದಿ 

ಸಿಂದಗಿ 02: ಮೋರಟಗಿ ಗ್ರಾಮದ ಜನ-ಜಾನುವಾರುಗಳಿಗೆ ಶಾಶ್ವತ ನೀರಿನ ಭವಣೆ ನಿಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ವಿರೋಧ ಪಕ್ಷಗಳು ಮಾಡುವ ಟೀಕೆ ಟಿಪ್ಪಣೆಗಳನ್ನು ಸವಾಲಾಗಿ ಸ್ವೀಕರಿಸಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂ ಅಭಿವೃದ್ಧಿ ಪಡಿಸುವ ಪ್ರಮಾಣಿಕ ಪ್ರಯತ್ನ ಮಾಡುತಿದ್ದೇನೆ ಆದರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಮೋರಟಗಿ ಗ್ರಾಮದ 14 ಎಕರೆ ವಿಶಾಲವಾದ ಕೆರೆಗೆ ಬಾಗಿನ ಅರ​‍್ಿಸಿ ಅವರು ಮಾತನಾಡಿ, ವಿವಿಧ ಕಾರ್ಯಕ್ರಮಗಳಿಗೆ ಬಂದಾಗ ಗ್ರಾಮದ ಹಿರಿಯರು ನಮ್ಮ ಪಕ್ಷದ ಮುಖಂಡರು ಸಮಯಕ್ಕೆ ಸರಿಯಾಗಿ ಮಳೆ ಇಲ್ಲದ ಕಾರಣ ಕೆರೆ 14 ಎಕರೆ ಕೆರೆ ಬತ್ತಿ ಹೋಗುತ್ತಿದೆ.

ಬೋರವೆಲಗಳಲ್ಲಿ ನೀರು ನಿಂತು ಹೋಗಿವೆ ಕೆರೆಯನ್ನು ಇದನ್ನು ಅಗಲೀಕರಣ ಮಾಡಿ ನೀರು ತುಂಬಿಸುವ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದ್ದರು ಒಂದು ಕೋಟಿ ಅನುದಾನದಲ್ಲಿ ಪುನಶ್ಚೇತನೆ ಜೊತೆಗೆ ಗುತ್ತಿ ಬಸವಣ್ಣ ಏತ ನೀರವರಿಯಿಂದ ಐವತ್ತು ಲಕ್ಷ ವೆಚ್ಚದಲ್ಲಿ ಪ್ರತ್ತೇಕ ಕಾಲುವೆ ನಿರ್ಮಿಸಿ ನೇರವಾಗಿ ಕೆರೆಗೆ ನೀರು ಬರುವ ವ್ಯವಸ್ಥೆ ಮಾಡಿದ್ದೇನೆ ಆಲಮೇಲದಲ್ಲಿ ನೆನೆಗುದಿಗೆ ಬಿದ್ದಿರುವ 54 ಎಕರೆ ಕೆರೆ ಕಾಮಗಾರ ನಾಲ್ಕು ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ಅನುದಾನ ತಂದು ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ ಹಂದಿಗನೂರು ಮತ್ತು ಸಿಂದಗಿ ಕೆರೆ ಅಭಿವೃದ್ಧಿಪಡಿಸಿದ್ದೆನೆ ರಾಂಪುರ ಕೆರೆ ಅಭಿವೃದ್ಧಿಗೆ ಕೈಗೆತ್ತಿಕೊಂಡಿದ್ದೇನೆ ಕೂಡಲೇ ಅದನ್ನು ಕೂಡ ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಲ್ಲಾ ಕಾಮಗಾರಿಗಳಿಗೆ ಅನುದಾನ ಕೊಟ್ಟು ಸಹಕರಿಸಿದ ನಮ್ಮ ಸರ್ಕಾರಕ್ಕೆ ಧನ್ಯವಾದಗಳು ಹೇಳುತ್ತೇನೆ ಇನ್ನುಳಿದ ಎರಡು ವರ್ಷದ ಅವಧಿಯಲ್ಲಿ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.