ಸರಳವಾಗಿ ಏಳು ದಿನಗಳ ಗಣಪತಿ ವಿಸರ್ಜನೆ
Simply seven days of Ganapati Visarjan
ಸಂಬರಗಿ 03: ಗಣೇಶ್ ಗಣೇಶ್ ಮೋರಯ್ಯಾ ಜೈ ಘೋಷದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅವಳೇ ಗಣೇಶ ಉತ್ಸವ ಗೆಳೆಯರ ಬಳಗದ ಪರವಾಗಿ, ನೋ ಬ್ಯಾಂಜೋ, ನೋ ಡಾಲ್ಬಿ, ಸನೈ ಚೌಘಡ ವಾದ್ಯದೊಂದಿಗೆ ಮೆರವಣಿಗೆಯನ್ನು ಸರಳವಾಗಿ ತೆಗೆದುಕೊಂಡು ಹೋಗಿ ಗ್ರಾಮದ ಹೊರವಲಯ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಏಳು ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊನೆಯ ದಿನದಂದು, ಭಕ್ತರಿಗೆ ಮಹಾಪ್ರಸಾದವನ್ನು ಅರ್ಿಸಿ ಸನೈ ಚೌಘಡ ಹಲಿಗಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಮುಳುಗಿಸಲಾಯಿತು. ಈ ಬಾರಿ, ಗ್ರಾಮದ ಮುಖ್ಯ ರಸ್ತೆ, ಸಿದ್ಧೇಶ್ವರ ರಸ್ತೆ, ಹರಲ್ ರಸ್ತೆ, ಸಾಥೆ ನಗರ, ಸಿದ್ಧಾರ್ಥ ನಗರದಿಂದ ಮೆರವಣಿಗೆಯನ್ನು ಹೊರತರಲಾಯಿತು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ್ ಬಾಗಡಿ ಅವರ ಕೈಯಿಂದ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಪಿಕೆಎಸ್ ಅಧ್ಯಕ್ಷ ನಿಜಗುಣಿ ಮಗದುಮ್, ಅಶೋಕ್ ಪೂಜಾರಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಗೆಳೆಯರ ಬಳಗದ ಮುಖಂಡ ಅಧ್ಯಕ್ಷ ಅಪ್ಪಾಸಾಹೇಬ ಅವಳೆ, ಲಕ್ಷ್ಮಣ ಅವಳೆ, ಗೋಪಾಲ ಅವಳೆ, ಆಕಾಶ ಶಿರಹಟ್ಟಿ, ಸಿದ್ಧು ಅವಳೆ ಮತ್ತು ಅನೇಕರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 