ಆರೋಹಿ ಸದಾಶಿವ ಐಹೊಳಿ ಅವರಿಗೆ ಬೆಳ್ಳಿ ಪದಕ
Silver medal for Aarohi Sadashiva Aiholi
ಥೈಲ್ಯಾಂಡ್‌ನ ಪಟ್ಟಾಯಾ; 15ನೇ ಸಾಂಸ್ಕೃತಿಕ ಪ್ರದರ್ಶಕ ಕಲೆಗಳ, ಒಲಿಂಪಿಯಾಡ್
ಧಾರವಾಡ, ನ.04: ಯುನೆಸ್ಕೋ ಅಧಿಕೃತ ಪಾಲುದಾರ ಸಂಸ್ಥೆ, ಎ.ಬಿ.ಎಸ್.ಎಸ್. ಗ್ಲೋಬಲ್ ಕೌನ್ಸಿಲ್ ಆಫ್ ಆರ್ಟ್ ಆಂಡ್ ಕಲ್ಚರ್, ಥೈಲ್ಯಾಂಡ್‌ನ ಪಟ್ಟಾಯಾದಲ್ಲಿ, ಬುರಾಫಾ ವಿಶ್ವವಿದ್ಯಾಲಯ ಇತ್ತೀಚೆಗೆ (ಅಕ್ಟೋಬರ್ 26-27), ಆಯೋಜಿಸಿದ್ದ, ಪ್ರದರ್ಶಕ ಕಲೆಗಳ, 15ನೇ ಸಾಂಸ್ಕೃತಿಕ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದ, ಕು.ಆರೋಹಿ ಸದಾಶಿವ ಐಹೊಳಿ, ಕಥಕ್ ನೃತ್ಯ ಪ್ರದರ್ಶನದಲ್ಲಿ, ಬೆಳ್ಳಿ ಪದಕದೊಂದಿಗೆ, ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕರ್ನಾಟಕದಿಂದ, ಭಾರತವನ್ನು ಪ್ರತಿನಿಧಿಸಿದ ಏಕೈಕ ಸಾಂಸ್ಕೃತಿಕ ಪ್ರತಿನಿಧಿ ಆರೋಹಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ, ಕಥಕ್ ನೃತ್ಯ ಪ್ರದರ್ಶಿಸಿ, ಪ್ರತಿಷ್ಟಿತ ಪುರಸ್ಕಾರಕ್ಕೆ ಭಾಜನವಾಗಿದ್ದಾರೆ.
ಇಲ್ಲಿನ ಶ್ರೀ ಸತ್ಯಸಾಯಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ, ಪಿ.ಯೂ.ಸಿ. ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಿರತರಾಗಿದ್ದಾರೆ.
ಶಾಂತಲಾ ನೃತ್ಯಾಲಯದ, ವಿದುಷಿ ವಿಜೇತಾ ವೇರ್ಣೇಕರ ಅವರಲ್ಲಿ, ಭರತನಾಟ್ಯ ಹಾಗೂ ಕಥಕ್ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ.
ಧಾರವಾಡ ಆಕಾಶವಾಣಿಯ, ಉನ್ನತ ಶ್ರೇಣಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಹಾಗೂ ನಿಲಯದ ಕಲಾವಿದ, ಪಂಡಿತ ಸದಾಶಿವ ಐಹೊಳಿ ಅವರ ಕಿರಿಯ ಪುತ್ರಿ.
ಶ್ರೀ ಸತ್ಯಸಾಯಿ ಪದವಿಪೂರ್ವ ಮಹಾವಿದ್ಯಾಲಯದ, ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ವರ್ಗ ಹಾಗೂ ಆಕಾಶವಾಣಿಯ ಅಧಿಕಾರಿ ವರ್ಗ, ಆರೋಹಿ ಅವರನ್ನು ಅಭಿನಂದಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 