ಒಗ್ಗಟ್ಟು, ವಿಶ್ವಾಸದಿಂದ ಬೀಳಗಿ ಪಟ್ಟಣ ಸಹಕಾರಿ ಸಂಸ್ಥೆ ಅಭಿವೃದ್ಧಿ: ಸಚಿವ ತಿಮ್ಮಾಪುರ್

ಒಗ್ಗಟ್ಟು, ವಿಶ್ವಾಸದಿಂದ ಬೀಳಗಿ ಪಟ್ಟಣ ಸಹಕಾರಿ ಸಂಸ್ಥೆ ಅಭಿವೃದ್ಧಿ: ಸಚಿವ ತಿಮ್ಮಾಪುರ್ Silver Jubilee of Belagi Town Cooperative Society

ಅದ್ದೂರಿಯಾಗಿ ಬೀಳಗಿ ಪಟ್ಟಣ ಸಹಕಾರಿ ಸಂಸ್ಥೆಯ ರಜತ ಮಹೋತ್ಸವ   

ಬೀಳಗಿ 27: ತಮಗೆ ಜನ್ಮ ನೀಡಿದ ಹುಟ್ಟೂರಲ್ಲಿ ಮಾಜಿ ಸಚಿವ ಎಸ್ ಆರ್ ಪಾಟೀಲರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ, ಸಹಕಾರಿ ಸಂಸ್ಥೆಗಳು ಕಾರ್ಖಾನೆ ಸ್ಥಾಪನೆ ಮಾಡುವ ಮೂಲಕ ಈ ಭಾಗದ ಸಾವಿರಾರು ಜನರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡುವುದರ ಮೂಲಕ ಋಣ ತೀರಿಸುವಂತಹ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್ ಹೇಳಿದರು.  

ತಾಲೂಕಿನ ಬಾಡಗಂಡಿಯಲ್ಲಿ ಎಸ್‌. ಆರ್‌. ಪಾಟೀಲ ಸಮೂಹ ಸಂಸ್ಥೆಗಳಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ, ಬ್ಯಾಂಕಿನ ನವೀಕೃತ ಕಟ್ಟಡ, ಶಾಖಾ ನೂತನ ಕಟ್ಟಡ ಮತ್ತು ಎಸ್‌. ಆರ್‌. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಹಾಗೂ ಜಾಜಿ ಮಲ್ಲಿಗೆ ಕವಿ ಡಾ.ಸತ್ಯಾನಂದ ಪಾತ್ರೋಟರವರು ಸಂಪಾದಿಸಿದ "ಪರಿಶ್ರಮ" ನೆನಪಿನ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಕೇಂದ್ರದಲ್ಲಿ ಇರಬೇಕಾದವುಗಳನ್ನು ಬಾಡಗಂಡಿ ಎನ್ನುವ ಪುಟ್ಟ ಗ್ರಾಮದಲ್ಲಿ ಸ್ಥಾಪನೆಮಾಡಿದ್ದು ಸಾಮಾನ್ಯ ಅಲ್ಲ, ಒಂದು ಸರಕಾರ ಮಾಡುವಂತಹ ಕೆಲಸವನ್ನು ಎಸ್ ಆರ್ ಪಾಟೀಲ ಮಾಡಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕ್ ವ್ಯವಹಾರ ಸಾವಿರ ಕೋಟಿ ದಾಟಿದೆ. ಒಳ್ಳೆಯ ತಂಡ ಹಾಗೂ ಬ್ಯಾಂಕ್‌ನಲ್ಲಿ ಠೇವಣಿದಾರರ ನಂಬಿಕೆ ಉಳಿಸಿಕೊಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  

 ಕೊಟ್ ್ಖನರ್ಸರಿಯಿಂದ ಪಿಜಿಯವರಿಗೆ ಸಣ್ಣ ಗ್ರಾಮದಲ್ಲಿ ಆರಂಭಿಸುವುದರ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ ಗ್ರಾಮ ಸ್ವರಾಜ್ಯ ಆಗಬೇಕು ಎನ್ನುವ ಗಾಂಧೀಜಿಯವರ ಕನಸು ಬಾಡಗಂಡಿಗೆ ಅನ್ವಯಿಸುತ್ತದೆ ಚಿಕ್ಕ ಗ್ರಾಮದಲ್ಲಿ ಕಾರ್ಖಾನೆ ಶಿಕ್ಷಣ ಸಮೂಹ ಸಹಕಾರಿ ಸಂಸ್ಥೆಗಳ ಸ್ಥಾಪನೆ ಮಾಡಿ ದಿಟ್ಟ ನಿರ್ಧಾರ ಮಾಡಿ ನಮಗೆಲ್ಲರಿಗೂ ಪ್ರೇರಣೆ, ಇದನ್ನು ನಮಗೂ ನಮ್ಮ ಗ್ರಾಮವನ್ನು ಬಾಡಗಂಡಿತರ ಯಾವಾಗ ಮಾಡಬೇಕು ಎನ್ನುವ ಭಾವ ವ್ಯಕ್ತವಾಗುತ್ತಿದೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಸಂಘರ್ಷಣೆ ಮಾಡಿ ವಿಧಾನ ಪರಿಷತ್ ಸದಸ್ಯರಾಗಿ ಈ ಭಾಗದ ಮುಳುಗಡೆಯ ಸಂತ್ರಸ್ತರ ಬಗ್ಗೆ ಪ್ರತಿ ಸಾರಿ ಧ್ವನಿ ಎತ್ತಿದ್ದಾರೆ, ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ ಬೆಂಗಳೂರಿಗೆ ಹೋಗುವ ಅವಶ್ಯಕತೆ ಇಲ್ಲ ಎಲ್ಲವು ಇಲ್ಲೆ ಮಾಡಿದ್ದಾರೆ. ಎಸ್ ಆರ್ ಪಾಟೀಲರ ದಾರಿ ಇಡೀ ದೇಶಕ್ಕೆ ಮಾದರಿಯಾಗಲಿ,ಒಟ್ಟಿನಲ್ಲಿ ಗಾಂಧಿಜಿಯವರ ಕಂಡ ಕನಸನ್ನು ಎಸ್‌ಆರ್ ಪಾಟೀಲ್ ಸಮೂಹ ಸಂಸ್ಥೆಯಿಂದ ಆಗಿದೆ. ಸಚಿವ ಸತೀಶ್ ಜಾರಕಿಹೊಳಿ  

ಎಸ್ ಆರ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ತಾಲೂಕಿನ ಅನೇಕ ಹಳ್ಳಿಗಳು ಕೃಷ್ಣಾ ಮೇಲ್ದಂಡೆ ಯೋಜನೆ ಮಡಿಲು ಸೇರಿದಾಗ ಬಹುತೇಕ ಜನ ಆಸ್ತಿ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಇದ್ದಾಗ ಸಂತ್ರಸ್ಥರ ಬದುಕಿಗೆ ಅಲ್ಪವಾದರೂ ಆರ್ಥಿಕ ನೆರವು ಬೇಕಾಗಿರುವ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಮಯೋಚಿತ ನಿರ್ಧಾರ ತೆಗೆದುಕೊಂಡವರು 1997 ರಲ್ಲಿ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕು ಉದ್ಘಾಟನೆಗೊಂಡಿದ್ದು ಈ ಭಾಗದ ಜನತೆಗೆ ಅವಿಸ್ಮರಣಿಯ ಸಂಗತಿ 11 ಜುಲೈ 1997 ರಂದು ಕೇವಲ 11 ಲಕ್ಷ 6 ನೂರು ರೂಪಾಯಿಗಳ ಶೇರು ಬಂಡವಾಳದೊಂದಿಗೆ ಪ್ರಾರಂಭವಾದ ಈ ಬ್ಯಾಂಕು ಸಂತ್ರಸ್ತರ ಬದುಕನ್ನು ಹಸನಗೊಳಿಸಲು ಪ್ರಯತ್ನಿಸುತ್ತಿದೆ, 31 ಮಾರ್ಚ್‌  2025 ಕ್ಕೆ ರೂ.757 ಕೋಟಿಯಷ್ಟು ಠೇವಣೆಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ನಿಯತ್ತಿನಿಂದ ಸಾಧನೆ ಮಾಡುತ್ತಿರುವದಲ್ಲದೇ ರೂ.474 ಕೋಟಿಯಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿ ಈ ಭಾಗದ ಜನರ ಆರ್ಥಿಕ ಸದೃಡತೆಗೆ ನಿರಂತರ ಶ್ರಮಿಸುತ್ತಿದೆ ಹಾಗೂ ರೂ.81 ಕೋಟಿ ನಿಧಿಯನ್ನು ಹೊಂದಿದೆ. ಅಲ್ಲದೆ ಈ ಭಾಗದ ರೈತರು ಸಣ್ಣಪುಟ್ಟ ವ್ಯಾಪಾರಿಗಳಿಗೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಸಹಾಯ ಸಹಕಾರ ಮಾಡಿದ್ದು ನಮ್ಮ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ತನ್ನ ಠೇವಣಿ ಮಾಡಿಕೊಳ್ಳುವುದರ ಜೋತೆಗೆ ಜಿಲ್ಲೆಯಲ್ಲಿಯೇ ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಬೆಳವಣಿಗೆ ಕಂಡ ಈ ಬ್ಯಾಂಕು ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಶ್ಚರ್ಯಕರ ರೀತಿಯಲ್ಲಿ  ರೂ.900  ಕೋಟಿ ದುಡಿಯುವ ಬಂಡವಾಳದೊಂದಿಗೆ ಬೃಹದಾಕಾರವಾಗಿ ಬೆಳೆದು ಮುನ್ನುಗುತ್ತಿದೆ ಎಂದು ತಿಳಿಸಲು ಸಂತೋಷವೆನಿಸುತ್ತಿದೆ. ನಮ್ಮ ಸಂಗಡಿಗರೆಲ್ಲ ಸೇರಿ ಮೊಟ್ಟ ಮೊದಲು ಕಟ್ಟಿದ ಸಂಸ್ಥೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಇದು ನಮ್ಮ ಮಾತೃ ಸಂಸ್ಥೆ ಈ ಒಟ್ಟು 18 ಉಪ ಶಾಖೆ ಒಟ್ಟು 10 ಸಾವಿರ ಜನರಿಗೆ ಉದ್ಯೋಗ ದೊರೆತಿದೆ, ನನಗೆ ಜನ್ಮ ಕೊಟ್ಟ ಪುಟ್ಟ ಗ್ರಾಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯ 630 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಅಸ್ತಿತ್ವಕ್ಕೆ ಮಾತೃ ಸಂಸ್ಥೆನೆ ಕಾರಣ ನಮಲ್ಲಿ ಪಕ್ಷಾತೀತ ಜಾತ್ಯಾತೀತ ಧರ್ಮ ಅತೀತವಾಗಿ ಜನ ಮುಖಿಯಾಗಿ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ ಎಂದರು.  

 ಜನ್ಮ ಕೊಟ್ಟ ತಂದೆ ತಾಯಿ, ವಿದ್ಯಾ ಗುರು ಜನ್ಮ ಕೊಟ್ಟ ಭೂಮಿ ಸಮಾಜದ ಋಣ ತೀರಿಸಬೇಕು 75 ವರ್ಷ ನನ್ನ ಹುಟ್ಟುಹಬ್ಬಕ್ಕೆ ಹಾರ ತುರಾಯಿ ಸಾಕಷ್ಟು ಹಾಕಿದ್ದೀರಿ ಸಮಾಜ ಸಾಕಷ್ಟು ಕೊಟ್ಟಿದೆ. ಇನ್ನು ಮುಂದೆ ಜನಪರ ಕಾರ್ಯಕ್ರಮದ ಮೂಲಕ ಕೊಡುಗೆ ನೀಡುತ್ತೇನೆ. ಎಂದರು. 

ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ್ ಪಾತ್ರೋಟ್ ಅವರ ಪರಿಶ್ರಮ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಯಿತು, ಎಲೆಕ್ಟ್ರಾನಿಕ್ ಬಟನ್ ಒತ್ತುವುದರ ಮೂಲಕ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ಗದಗ್ ಡಂಬಳದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರೆ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ, ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿವರೆಗಿನ ವಿವಿಧ ಕಟ್ಟಡಗಳ ಶಂಕು ಸ್ಥಾಪನೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ,ಎಸ್‌.ಆರ್‌.ಪಾಟೀಲ ಬಿ.ಎಸ್‌.ಸಿ ನರ್ಸಿಂಗ್ ಕಾಲೇಜಿನ ಉದ್ಘಾಟನೆಯನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಎಸ್‌.ಆರ್‌.ಪಾಟೀಲ ಕಾಲೇಜ ಆಪ್ ಅಲೈಡ್ ಹೆಲ್ತ್‌ ಸೈನ್ಸ ಉದ್ಘಾಟನೆಯನ್ನು ಸಂಸದ ಪಿ. ಸಿ. ಗದ್ದಿಗೌಡರ, 650 ಆಸನ ಸೌಲಭ್ಯವುಳ್ಳ ಸಭಾಂಗಣದ ಶಂಕುಸ್ಥಾಪನೆಯನ್ನು ಶಾಸಕ ಎಚ್‌.ವಾಯ್‌.ಮೇಟಿ, ಆಡಳಿತ ಕಛೇರಿಯ ಶಂಕು ಸ್ಥಾಪನೆಯನ್ನು  ಭೀಮಸೇನ ಚಿಮ್ಮನಕಟ್ಟಿ, ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯದ ಶಂಕುಸ್ಥಾಪನೆಯನ್ನು ವಿ.ಪ. ಸದಸ್ಯ ಪಿ.ಎಚ್‌.ಪೂಜಾರ, 500 ವಿದ್ಯಾರ್ಥಿಗಳ ವಸತಿ ನಿಲಯದ ಶಂಕು ಸ್ಥಾಪನೆಯನ್ನು ಎಚ್‌.ಆರಿ​‍್ನರಾಣಿ, ವಾಣಿಜ್ಯ ಸಂಕೀರ್ಣಗಳ ಶಂಕು ಸ್ಥಾಪನೆಯನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಎನ್‌.ಆರ್‌.ಐ ವಸತಿ ಗೃಹದ ಉದ್ಘಾಟನೆಯನ್ನು ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ನೆರವೇರಿಸಿದರು.  

 ಸಂಸದ ಪಿ ಸಿ ಗದ್ದಿಗೌಡರ್, ಸಚಿವ ಶಿವಾನಂದ ಪಾಟೀಲ್, ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು.  

ಅಧ್ಯಕ್ಷತೆಯನ್ನು ಆಹಾರ ಮತ್ತು ನಾಗರಿಕ ಸಚಿವ ಕೆ ಎಚ್ ಮುನಿಯಪ್ಪ ವಹಿಸಿದ್ದರು. ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಉಪಾಧ್ಯಕ್ಷ ಸತ್ಯಪ್ಪ ಮಲ್ನಾಡ, ಎಸ್‌.ಆರಿ​‍್ಪ. ಶಿಕ್ಷಣ ಪ್ರತಿಷ್ಟಾನದ ಕಾರ್ಯದರ್ಶಿ ಎಂ.ಎನ್‌.ಪಾಟೀಲ, ಪ.ಸ.ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಜಿ.ಎಸ್‌.ಬನ್ನಹಟ್ಟಿ, ಬಿ.ಎ.ಎಂ.ಎಸ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಬಿ.ಬಾಳಿಕಾಯಿ,ಪ್ರತಿಷ್ಟಾನದ ಮುಖ್ಯ ಲೆಕ್ಕಾಧಿಕಾರಿ ಅಶೋಕ ದಾದಮಿ, ಸಾಹಿತಿ ಸತ್ಯಾನಂದ ಪಾತ್ರೋಟ, ಬ್ಯಾಂಕ್ ನಿರ್ದೇಶಕರಾದ ಹೇಮಾದ್ರಿ ಕೊಪ್ಪಳ, ಎ.ಎಚ್‌.ಬೀಳಗಿ ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಟಾನದ ಎಸ್‌.ಎಸ್‌.ಹಳ್ಳೂರ ಹಾಗೂ ಬ್ಯಾಂಕಿನ ನಿರ್ದೇಶಕ ಮಂಡಳಿ, ಸಿಬ್ಬಂದಿ ವರ್ಗದವರು, ಸಮೂಹ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು ಹಾಗೂ ಗ್ರಾಹಕರು ಸಾರ್ವಜನಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.