ಜೈನ ಸಮಾಜದೊಂದಿಗೆ ಹಿಂದೂ, ಮುಸ್ಲಿಂ ಸಮಾಜದ ಬಾಂಧವರಿಂದ ಮೌನ ಪ್ರತಿಭಟನೆ

ಜೈನ ಸಮಾಜದೊಂದಿಗೆ ಹಿಂದೂ, ಮುಸ್ಲಿಂ ಸಮಾಜದ ಬಾಂಧವರಿಂದ ಮೌನ ಪ್ರತಿಭಟನೆ Silent protest by Hindu and Muslim community members along with Jain community

ಜೈನ ಸಮಾಜದೊಂದಿಗೆ ಹಿಂದೂ, ಮುಸ್ಲಿಂ ಸಮಾಜದ ಬಾಂಧವರಿಂದ ಮೌನ ಪ್ರತಿಭಟನೆ 

ಕಾಗವಾಡ 07: ಗುಜರಾತ ರಾಜ್ಯದ ವನತಾರ ಅಭಯಾರಣ್ಯದಲ್ಲಿ ನಾಂದನಿ ಜೈನ್ ಮಠದ ಮಾಧುರಿ ಆನೆ ಮರಳಿ ನಮಗೆ ನೀಡಿರಿ ಎಂದು ಒತ್ತಾಯಿಸಿ ತಾಲೂಕಿನ  ಶೇಡಬಾಳ ಪಟ್ಟಣದಲ್ಲಿ ಜೈನ ಸಮಾಜ ಬಾಂಧವರಿಗೆ ಬೆಂಬಲಿಸಿ ಹಿಂದೂ ಹಾಗೂ ಮುಸ್ಲಿಂ ಸಮಾಜದ ಬಾಂಧವರು ಒಂದುಗೂಡಿ ಮೌನ ಪ್ರತಿಭಟನೆ ಕೈಗೊಂಡರು.  

ಗುರುವಾರ ದಿ. 07 ರಂದು ಸಂಜೆ ಶೇಡಬಾಳ ಪಟ್ಟಣದ ಶಾಂತಿಸಾಗರ್ ಜೈನ್ ಆಶ್ರಮದಿಂದ ಮೌನ ಮೆರವಣಿಗೆ ಪ್ರಾರಂಭಗೊಂಡಿತು. ಪಟ್ಟಣದ ಪ್ರಮುಖ ಮಾರ್ಗಗಳಿಂದ ಮೌನ ಮೆರವಣಿಗೆ ಸಂಚರಿಸಿ, ನಮ್ಮ ಆನೆ ನಮ್ಮ ಹಕ್ಕು, ಬೇಗನೆ ಮಾಧುರಿ ಮರುಳು ಬಾ ಎಂಬ ಘೋಷಣೆ ಕೂಗುತ್ತಾ  ಬಸವಣ್ಣ ದೇವಸ್ಥಾನದ ಮುಂಭಾಗದಲ್ಲಿ ಸಭೆ ಸೇರಿ ಉಪ ತಹಸಿಲ್ದಾರ್ ಅನ್ನಸಾಬ್ ಕೂರಿ ಅಣ್ಣಾಸಾಹೇಬ್ ಕೋರೆ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ ಇವರಿಗೆ ಮನವಿ ಅರ​‍್ಿಸಲಾಯಿತು.  

ಮೌನ ಮೆರವಣಿಗೆಯಲ್ಲಿ ಪಟ್ಟಣದ ಹಿರಿಯರು, ವೃದ್ಧರು, ಮಹಿಳೆಯರು, ಬಾಲಕರು, ಹಾಗೂ ಹಿಂದೂ ಸಮಾಜದೊಂದಿಗೆ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದು, ಮಾಧುರಿ ಆನೆ ಮೇಲೆ ಇರುವ ಅವರ ಪ್ರೀತಿ- ಶ್ರದ್ಧೆ ಎದ್ದು ಕಾಣುತ್ತಿತ್ತು.   

ಮುಸ್ಲಿಂ ಸಮಾಜದ ಶಬ್ಬೀರ್ ಮನಿಯರ, ಬಾಬಾಸಾಹೇಬ್ ಮೇಸ್ತ್ರಿ ಇವರು ಮಾತನಾಡಿ, ನಾಂದನಿ ಜೈನ ಮಠ ಪುರಾತನ ಮಠ ವಾಗಿದ್ದು, ಅಲ್ಲಿಗೆ ಹಲವಾರು ವರ್ಷಗಳ ಹಿಂದಿನಿಂದ  ಆನೆ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ ಉದ್ದಿಮೆ ಅಂಬಾನಿ ಒಡೆತನದಲ್ಲಿರುವ ಅರಣ್ಯ ವಿಭಾಗದವರು ಆನೆ ಕರೆದುಕೊಂಡು ಹೋಗಿದ್ದಾರೆ. ನಾವೆಲ್ಲರೂ  ಅದರ ಮೇಲೆ ಪ್ರೀತಿ, ವಿಶ್ವಾಸ, ಶ್ರದ್ಧೆ ಹೊಂದಿದ್ದೇವೆ. ಎಲ್ಲರೂ ಒಂದುಗೂಡಿ ಮಾಧುರಿ ಆನೆಯನ್ನು ಮರಳಿ ನಾಂದನಿ ಜೈನ್ ಮಠಕ್ಕೆ ತರಲು ಪ್ರಯತ್ನಿಸೋಣ ಎಂದರು.    

ಶಾಂತಿಸಾಗರ್ ಜೈನ್ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ ಮಾತನಾಡಿ, ನಾದನಿ ಜೈನಮಠದ ಆನೆ ವನತಾರಾ ಅರಣ್ಯದಲ್ಲಿ ವರ್ಗಾಯಿಸಿದ್ದು, ಅಲ್ಲಿಯ ಸರ್ಕಾರ ಆನೆಯನ್ನು ಜೈನಮಠಕ್ಕೆ ಮರಳಿಸಲು ಪ್ರಯತ್ನಿಸುವ  ಭರವಸೆ ನೀಡಿದ್ದಾರೆ. ಆದರೆ ಬೇಗನೆ ಆನೆ ಮರಳಿ ನೀಡಲಿ ಎಂಬ ಕಾರಣಕ್ಕಾಗಿ ಎಲ್ಲ ಸಮಾಜ ಬಾಂಧವರು ಒಂದುಗೂಡಿ ಮೌನ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.   

ನ್ಯಾಯವಾದಿ ಪ್ರವೀಣ ಕೆಂಪವಾಡೆ, ನಿವೃತ್ತ ಮುಖ್ಯೋಧ್ಯಾಪಕ ಎಂ. ಎಂ. ಗಣಿ  ರಾಜ್ಯಪಾಲರಿಗೆ ನೀಡುವ ಮನವಿಯನ್ನು ಓದಿದರು.  ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ನ್ಯಾಯವಾದಿ ಬಿ.ಎಂ. ಗಣಿ, ಅಜಿತ್ ನರಸಗೌಡರ. ಬಾಬಾಸಾಹೇಬ್ ಸೌಂದತ್ತಿ , ಸುನಿಲ್ ಪಾಟೀಲ, ಅಶ್ವತ್ ಪಾಟೀಲ, ಕಿರಣ್ ಯಂದಗೌಡರ, ನಜೀರ್ ಮುಲ್ಲಾ, ತಾನಾಜಿ ಗಾವಡೆ, ಸಂಭಾ ನಿಕಂ,  ಭರತ ನಾಂದ್ರೆ, ಅಜಿತ್ ರಾಜನಿ, ಪಲ್ಲವಿ ನರಸಗೌಡರ್, ಪಂಕಜ ಪಾಯಗೌಡರ, ಉಜ್ವಲಾ ನರಸಗೌಡರ್, ಶೇಡಬಾಳ ಸ್ಟೇಷನ್ ಪದ್ಮಾವತಿ ಮಹಿಳಾ ಮಂಡಳ, ಕಲ್ಲಾಳದ ಮಹಿಳಾ ಮಂಡಳದ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.