ಭಾರತ- ಬ್ರೆಜಿಲ್ ನಡುವೆ 25 ರಂದು ಮಹತ್ವದ ಮಾತುಕತೆ
ನವದೆಹಲಿ, ಜ 21: ಬರುವ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 71 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಧ್ಯಕ್ಷ ಬೋಲ್ಸೊನಾರೊ ಇದೆ 24 ರಿಂದ 27 ರವರೆಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಇಲ್ಲಿ ತಿಳಿಸಿದೆ.
ಭೇಟಿ ನೀಡುವ ಗಣ್ಯರೊಂದಿಗೆ ಏಳು ಮಂತ್ರಿಗಳು, ಬ್ರೆಜಿಲ್ ಸಂಸತ್ತಿನಲ್ಲಿ ಬ್ರೆಜಿಲ್-ಇಂಡಿಯಾ ಸ್ನೇಹ ಸಮೂಹದ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರಿ ನಿಯೋಗ ಬರುತ್ತಿದೆ.
2019 ರ ನವೆಂಬರ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಬ್ರೆಸಿಲಿಯಾಕ್ಕೆ ಭೇಟಿ ನೀಡಿದ್ದರು.
ಇದು ಅಧ್ಯಕ್ಷ ಬೋಲ್ಸೊನಾರೊ ಅವರ ಮೊದಲ ಭಾರತ ಭೇಟಿಯಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಧ್ಯಕ್ಷ ಬೋಲ್ಸೊನಾರೊ ಅವರು ಇದೆ 25 ರಂದು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದು, ಅವರ ಗೌರವಾರ್ಥವಾಗಿ ಔತಣಕೂಟ ಆಯೋಜಿಸಿದ್ದಾರೆ. ನಂತರ ಅವರು ಪ್ರಧಾನ ಮೋದಿ ಜೊತೆಯೂ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರನ್ನೂ ಅಧ್ಯಕ್ಷರು ಭೇಟಿ ಮಾಡಲಿದ್ದಾರೆ.
ಇದೆ 27 ರಂದು ಅಧ್ಯಕ್ಷ ಬೋಲ್ಸನಾರೊರು ಭಾರತ ಮತ್ತು ಬ್ರೆಜಿಲ್ ಉದ್ಯಮ ರಂಗದ ನಾಯಕರ ವೇದಿಕೆಯನ್ಉ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳು ಸಾಮಾನ್ಯ ಜಾಗತಿಕ ದೃಷ್ಟಿ, ಹಂಚಿಕೆಯ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎರಡೂ ದೇಶಗಳ ಆರ್ಥಿಕ ಪ್ರಗತಿಯ ಬದ್ಧತೆ ಆಧರಿಸಿದೆ.
ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ವ್ಯಾಪಾರ 2018-19ರಲ್ಲಿ 8.2 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಬ್ರೆಜಿಲ್ ನಲ್ಲಿ ಭಾರತೀಯ ಹೂಡಿಕೆಗಳು ಸುಮಾರು 6 ಬಿಲಿಯನ್ ಮತ್ತು ಭಾರತದಲ್ಲಿ ಬ್ರೆಜಿಲ್ ಹೂಡಿಕೆಗಳು 2018 ರಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಎಂದು ಅಂದಾಜು ಮಾಡಲಾಗಿದೆ.
ಭಾರತದಲ್ಲಿ ಬ್ರೆಜಿಲಿ ಹೂಡಿಕೆಗಳು ಮುಖ್ಯವಾಗಿ ಮೋಟಾರು, ವಾಹನ , ಐಟಿ, ಗಣಿಗಾರಿಕೆ, ಇಂಧನ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿದೆ ಪ್ರತಿಯಾಗಿ ಭಾರತ ಬ್ರೆಜಿಲ್‌ನ ಐಟಿ, ಔಷಧ , ಇಂಧನ, ಕೃಷಿ ವ್ಯವಹಾರ, ಗಣಿಗಾರಿಕೆ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 