ಸೈಬರ್ ಅಪರಾಧಗಳ ಪ್ರಕರಣಗಳ ಇತ್ಯರ್ಥ ಪ್ರಮಾಣದಲ್ಲಿ ಗಮನಾರ್ಹ ಏರಿಕೆ
Significant increase in the settlement rate of cyber crime cases
ಬೆಳಗಾವಿ ಸುವರ್ಣ ವಿಧಾನಸೌಧ 10: ರಾಜ್ಯದಲ್ಲಿ ಸೈಬರ್ ಅಪರಾಧಗಳು ಹಾಗೂ ಡಿಜಿಟಲ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಜನರು ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. OTT,
VPN, ಮತ್ತು ಡಾರ್ಕ್‌ನೆಟ್ ಎಂಬ ವೇದಿಕೆಗಳ ದುರುಪಯೋಗ ಹೆಚ್ಚಿದ್ದು, ಬ್ಯಾಂಕ್, UPI ಹಾಗೂ ಆನ್ಲೈನ್ ಪಾವತಿ ವ್ಯವಸ್ಥೆಗಳಲ್ಲಿ ಮೋಸ ಪ್ರಕರಣಗಳು ದಾಖಲವಾಗುತ್ತಿವೆ. ಆರೋಗ್ಯ ಕ್ಷೇತ್ರದಲ್ಲೂ ನಕಲಿ ಓಷಧ, ವಿಮೆ ಮತ್ತು ವೈದ್ಯಕೀಯ ದಾಖಲೆಗಳ ವಂಚನೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯವಿದೆ. ಉದ್ಯೋಗ ಹಾಗೂ ಶಿಕ್ಷಣ ಸಂಬಂಧ ಮೋಸ ಮಾಡುವವರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾಗೃತಿ ಅಭಿಯಾನ ನಡೆಸುವ ಅಗತ್ಯವಿದೆ.
ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ನೀಡಿದ ವರದಿ ಪ್ರಕಾರ, 2023 ರಿಂದ 2025ರವರೆಗೆ ಬೆಳಗಾವಿ ನಗರ ಮತ್ತು ಜಿಲ್ಲೆಯ ಸೈಬರ್ ಅಪರಾಧ ಪ್ರಕರಣಗಳು ಹಾಗೂ ವಶಪಡಿಸಿಕೊಂಡ ಮೊತ್ತಗಳ ವಿವರ ಬಹಿರಂಗಗೊಂಡಿವೆ. 2023ರಲ್ಲಿ, ಬೆಳಗಾವಿ ನಗರದಲ್ಲಿ 85 ಸೈಬರ್ ಪ್ರಕರಣಗಳು ದಾಖಲಾಗಿದ್ದು, 14 ಪ್ರಕರಣಗಳು ಬಗೆಹರಿಸಿ, ಒಟ್ಟು ರೂ. 3,76,75,143 ಮೊತ್ತವನ್ನು ವಶಪಡಿಸಿಕೊ ಳ್ಳಲಾಗಿದೆ. ಇದೇ ವರ್ಷದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 93 ಪ್ರಕರಣಗಳು ದಾಖಲಾಗಿದ್ದು, 43 ಪ್ರಕರಣಗಳು ಪತ್ತೆಯಾಗಿದ್ದು, ರೂ.3,99,43,989 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿ, ಬೆಳಗಾವಿ ನಗರದಲ್ಲಿ 107 ಪ್ರಕರಣಗಳು ದಾಖಲಾಗಿದ್ದು, 9 ಪ್ರಕರಣಗಳು ಬಗೆಹರಿಸಿ, ರೂ. 12,15,24,022 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 72 ಪ್ರಕರಣಗಳು ದಾಖಲಾಗಿದ್ದು, 13 ಪ್ರಕರಣಗಳು ಪತ್ತೆಯಾಗಿದ್ದು, ರೂ. 9,09,08,015 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. 2025ರ ಪ್ರಸ್ತುತ ಮಾಹಿತಿಯಂತೆ, ಬೆಳಗಾವಿ ನಗರದಲ್ಲಿ 90 ಪ್ರಕರಣಗಳು ದಾಖಲಾಗಿದ್ದು, 5 ಪ್ರಕರಣಗಳು ಪತ್ತೆಯಾಗಿದ್ದು, ರೂ. 8,61,11,551 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 74 ಪ್ರಕರಣಗಳು ದಾಖಲಾಗಿ, 11 ಪ್ರಕರಣಗಳು ಬಗೆಹರಿಸಿ, ರೂ. 6,86,47,015 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಂಕಿಅಂಶಗಳು ಬೆಳಗಾವಿ ಪ್ರದೇಶದಲ್ಲಿ ಸೈಬರ್ ಅಪರಾಧಗಳು ನಿರಂತರ ಸವಾಲಾಗಿ ಉಳಿದಿರುವುದನ್ನು ಹಾಗೂ ಪ್ರಕರಣ ಪತ್ತೆ ಪ್ರಮಾಣದಲ್ಲಿ ವ್ಯತ್ಯಾಸ ಇದ್ದರೂ ಹಣ ವಶಪಡಿಸಿಕೊಳ್ಳುವ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದನ್ನು ಬೆಳಕು ಚೆಲ್ಲುತ್ತವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 