156 ನೇ ಶ್ರೇಣಿ ಪಡೆದು ಪಿ ಎಸ್ ಐ ಹುದ್ದೆಗೆ ಆಯ್ಕೆಯಾದ ಸಿದ್ದು ಜಿಡ್ಡಿಮನಿ
Siddu Jiddimani, who secured rank 156, was selected for the post of PSI.
ಲೋಕದರ್ಶನ ವರದಿ
156 ನೇ ಶ್ರೇಣಿ ಪಡೆದು ಪಿ ಎಸ್ ಐ ಹುದ್ದೆಗೆ ಆಯ್ಕೆಯಾದ ಸಿದ್ದು ಜಿಡ್ಡಿಮನಿ
ಮಹಾಲಿಂಗಪುರ, 18 : ಅಪ್ಪಟ ಗ್ರಾಮೀಣ ಪ್ರತಿಭೆ ಕಡು ಬಡತನದಲ್ಲಿ ಹುಟ್ಟಿ ಮೇರು ಸಾಧನೆ ಮಾಡಿದ ಬನಹಟ್ಟಿಯ ಸಿದ್ದು ಪರ್ಪ ಜಿಡ್ಡಿಮನಿ. ಇತೀಚೆಗೆ ನಡೆದ ರಾಜ್ಯ ಪಿ ಎಸ್ ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 156 ನೇ ಶ್ರೇಣಿ (ಖಂಓಏ)ಪಡೆದು ನಗರಕ್ಕೆ ಕೀರ್ತಿ ತಂದಿದ್ದಾನೆ. ಆತನ ಸಾಧನೆಗೆ ಅಭಿನಂದನೆಗಳ ಮಹಾಪುರಾವೆ ಹರಿದು ಬಂದಿದೆ.
ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಶ್ರೀ ಕನಕದಾಸ ಪತ್ತಿನ ಸಹಕಾರಿ ಸಂಘದಲ್ಲಿ ಅಭಿಮಾನದಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಹಾಲಿಂಗಪ್ಪ ಜಕ್ಕಣ್ಣವರ, ಉಪಾಧ್ಯಕ್ಷರಾದ ಶ್ರೀಶೈಲ ಕಳ್ಯಾಗೋಳ, ನಿರ್ದೇಶಕರಾದ ಗಣಪತಿ ಮಡ್ದೆನ್ನವರ ಸಿಬ್ಬಂದಿಗಳಾದ ಪ್ರಧಾನ ವ್ಯವಸ್ಥಾಪಕರಾದ ಪ್ರಭು ಹುಬ್ಬಳ್ಳಿ, ಮಹಾಲಿಂಗ ಹುಬ್ಬಳ್ಳಿ, ಚಂದ್ರು ಸಂಶಿ, ಉಪ ಸಿಬ್ಬಂದಿಗಳಾದ ಶ್ರೀಶೈಲ್ ಅವಟಿ, ಮಹಾಲಿಂಗ ಮಾಳಿ, ದಾನೇಶ ಹೂಗಾರ, ಆನಂದ ಪೂಜಾರಿ, ಪ್ರಶಾಂತ್ ಬಂಡಿ, ಸುನಿಲ್ ಮೇಟಿ, ಶಂಕರ ಮೇಟಿ ಮುಖಂಡರಾದ ಪರ್ಪ ಜಿಡ್ಡಿಮನಿ,ಬೀರ್ಪ ಹಳಮನಿ,ಮಹೇಶ ಇಟಕನವರ, ಲಕ್ಷ್ಮಣ ಕಿಶೋರ ಸೇರಿ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 