ಶಿಕ್ಷಕ ಜಗದೀಶ ಸಾತಿಹಾಳಗೆ ಸಿದ್ದೇಶ್ವರ ಪ್ರಶಸ್ತಿ ಪ್ರದಾನ
Siddheshwara Award presented to teacher Jagadeesha Satihala
ದೇವರಹಿಪ್ಪರಗಿ 03 : ತಾಲೂಕಿನ ತಿಳಗೂಳ ಗ್ರಾಮದ ಶಿಕ್ಷಕ ಜಗದೀಶ ಸಾತಿಹಾಳ ಅವರಿಗೆ ಸಿದ್ಧೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗೇವಾಡಿ ಪಟ್ಟಣದಲ್ಲಿ ನಡೆದ ಗಾನಯೋಗಿ ಡಾ. ಪಂಚಾಕ್ಷರಿ ಪುಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಕೊಡಮಾಡುವ ಸಿದ್ದೇಶ್ವರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಗದೀಶ ಸಾತಿಹಾಳ ಅವರಿಗೆ ಗ್ರಾಮದ ಬಸವ ಸೇವಾ ಯುವಕ ಸಮಿತಿಯ ಉಪಾಧ್ಯಕ್ಷರು, ಹಾಗೂ ಉಪನ್ಯಾಸಕರು ಸಂಗನಬಸವ ಪಿಯು ಕಾಲೇಜ ಹಾಗೂ ಎಸ್.ಸಿ. ಉಪ್ಪಿನ್ ಡಿಗ್ರಿ ಕಾಲೇಜ ವಿಜಯಪುರ ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಾಘವೇಂದ್ರ ಉಮ್ಮರಗಿ, ಶಿವಪುತ್ರ ಸಾತಿಹಾಳ, ಮುದಕ್ಕಪ್ಪ ಯಾಳವಾರ, ಬಸಲಿಂಗ ಯಡ್ರಾಮಿ, ಮುತ್ತುರಾಜ ಸಾತಿಹಾಳ, ಶರಣಮ್ಮ ಬಂಡೋಳಿ, ಜಗದೇವಿ ಸಾಹುಕಾರ, ಚೈತ್ರಾ ಸಾತಿಹಾಳ, ಅಕ್ಕಮಹಾದೇವಿ ಬಡೋಳಿ, ಬಸವಶ್ರೀ ಸಾತಿಹಾಳ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಸಮಿತಿಯ ಎಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿ ಮಿತ್ರ, ಸ್ನೇಹಿತ ಬಳಗದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 