ಹುಣಶ್ಯಾಳ ಪಿಜಿ ಕೈವಲ್ಯಾಶ್ರಮದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆ
Siddalingeshwara fair at Hunashyala PG Kaivalya Ashram
ಘಟಪ್ರಭಾ 22: ಸಮೀಪದ ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಾದ ನಿಜವರಿದ ಸಂತ, ಸದು ಹೃದಯವಂತ, ಸಾಹಿತ್ಯ ಶ್ರೀಮಂತ ಪರಮ ಪೂಜ್ಯ ನಿಜಗುಣ ದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ 27ನೇ ಸತ್ಸಂಗ ಸಂಭ್ರಮ ಮತ್ತು ಅಪ್ಪನ ಜಾತ್ರೆ ಕಾರ್ಯಕ್ರಮವು 2026 ಜನೇವರಿ 1 ರಿಂದ 3ರವರೆಗೆ ವಿಜೃಂಭನೆಯಿಂದ ಜರುಗಲಿದ್ದು ನಾಡಿನ ಜಗದ್ಗುರುಗಳು, ಮಹಾತ್ಮರು, ಗಣ್ಯರು ಆಗಮಿಸಲಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು. ಅವರು ಸೋಮವಾರದಂದು ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ದಿ.1ರಂದು ಸಿದ್ಧಲಿಂಗ ಯತಿರಾಜರ, ಶಾಂಭವಿಮಾತೆಯ, ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ನಂತರ ‘ಸ್ವಾಂಸ್ಕೃತಿಕ ಸಿರಿ’ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರನ್ನು ಶೃಂಗಾರ ರಥದಲ್ಲಿ ಸಹಸ್ರ ಪೂರ್ಣ ಕುಂಭದೊಂದಿಗೆ ಮಹಾತ್ಮರ ಭವ್ಯ ಸ್ವಾಗತ ಮೆರವಣಿಗೆ ಹಾಗೂ ಸಿದ್ಧಲಿಂಗ ಯತಿರಾಜರ ತೊಟ್ಟಿಲೋತ್ಸವ ಜರುಗಲಿದ್ದು, ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ನಂತರ ಸನ್ಮಾನ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದೆ.
ದಿ.2ರಂದು ತತ್ವಾಮೃತ ಕಾರ್ಯಕ್ರಮದಲ್ಲಿ ಮಹಾತ್ಮರ ಪ್ರವಚನ ಸುಧೆ,ಪೂಜ್ಯರ ತುಲಾಭಾರ ಸೇವೆ ನಂತರ “ಕನ್ನಡ ಕೋಗಿಲೆ” ಖ್ಯಾತಿಯ ಕುಮಾರಿ ಮಹನ್ಯಾ ಗುರು ಪಾಟೀಲ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಸಂಜೆ 6 ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ ಪೂಜ್ಯ ನಿಜಗುಣ ದೇವ ಮಹಾಸ್ವಾಮಿಜಿಯವರ ತೂಗುಯ್ಯಾಲೆ ಶೃಂಗಾರ ಕೀರೀಟ ಮಹಾಪೂಜೆ ಜರುಗಲಿದೆ. ದಿ.3ರಂದು ಮುಂಜಾನೆ 10 ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ ಪೂಜ್ಯ ನಿಜಗುಣ ದೇವ ಮಹಾಸ್ವಾಮಿಜಿಯವರಿಗೆ ಕೀರೀಟ ಧಾರಣೆ ಮತ್ತು ತುಲಾಭಾರ ಸೇವೆ ಜರುಗಲಿದೆ. ಸಂಜೆ 4 ಗಂಟೆಗೆ ಸಿದ್ಧಲಿಂಗೇಶ್ವರ ಭವ್ಯ ರಥೋತ್ಸವ ರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಠದ ಪೂಜ್ಯ ನಿಜಗುಣ ದೇವ ಮಹಾಸ್ವಾಮಿಗಳು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರಿನ ಗಣೇಶ ಮಹಾರಾಜರು ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 