‘ಶ್ರೀಮಾನ್ ಬಸಪ್ಪ ಶ. ಮುಂದಿನಮನಿ ಸ್ಮರಣೆ ದತ್ತಿ’ ಅಂಗವಾಗಿ ‘ತಿಪ್ಪೆಯನ್ನು ತುಪ್ಪ ಮಾಡುವುದು’ ಕುರಿತು ಉಪನ್ಯಾಸ ಕಾರ್ಯಕ್ರಮ

‘ಶ್ರೀಮಾನ್ ಬಸಪ್ಪ ಶ. ಮುಂದಿನಮನಿ ಸ್ಮರಣೆ ದತ್ತಿ’ ಅಂಗವಾಗಿ ‘ತಿಪ್ಪೆಯನ್ನು ತುಪ್ಪ ಮಾಡುವುದು’ ಕುರಿತು ಉಪನ್ಯಾಸ  ಕಾರ್ಯಕ್ರಮ Shriman Basappa Sh. A lecture program on 'Gheeling Tippe' as part of the 'Next Money Remembrance End

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು, ದಿನಾಂಕ: 2-12-2025 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ‘ಶ್ರೀಮಾನ್ ಬಸಪ್ಪ ಶ. ಮುಂದಿನಮನಿ ಸ್ಮರಣೆ ದತ್ತಿ’ ಅಂಗವಾಗಿ ‘ತಿಪ್ಪೆಯನ್ನು ತುಪ್ಪ ಮಾಡುವುದು’ ಕುರಿತು ಉಪನ್ಯಾಸ, ‘ಬಸವಕೃಷಿ ಪ್ರಶಸ್ತಿ’ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರಿ​‍್ಡಸಿದೆ.  

ಕುಂದಗೋಳ ತಾಲೂಕಿನ ಹಿರೇಗುಂಜಳ ಗ್ರಾಮದ ಘನಜಾಮೃತ ರೈತರಾದ ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ ಅವರಿಗೆ ‘ಬಸವಕೃಷಿ ಪ್ರಶಸ್ತಿ’ ನೀಡಲಾಗುವುದು ಹಾಗೂ ಅವರು ‘ತಿಪ್ಪೆಯನ್ನು ತುಪ್ಪ ಮಾಡುವುದು’ ಕುರಿತು ಉಪನ್ಯಾಸ ನೀಡುವರು. 

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನ್ಯಾಶನಲ್ ಡಿಫೆನ್ಸ ಅಕಾಡೆಮಿ(ಎನ್‌.ಡಿ.ಎ) 2025ರ ಪರಿಕ್ಷೇಯಲ್ಲಿ ಉತ್ತೀರ್ಣನಾದ ಗ್ರಾಮೀಣ ಪ್ರತಿಭೆ ಕುಮಾರ ರಿಷಿ ಕೃಷ್ಣಾ ಬೊಂಗಾಳೆ ಅವರಿಗೆ ಸಾಧಕರ ಸನ್ಮಾನ ಮಾಡಿ ಗೌರವಿಸಲಾಗುವುದು. 

ಧಾರವಾಡ ಕವಿವ ಸಂಘದ ಗೌರವ ಉಪಾಧ್ಯಕ್ಷರಾದ ಕೆ. ಬಿ. ನಾವಲಗಿಮಠ ಅಧ್ಯಕ್ಷತೆ ವಹಿಸುವರು. 

ವಕೀಲರು, ದತ್ತಿದಾನಿಗಳೂ ಆದ ಸದಾನಂದ ಬ. ಮುಂದಿನಮನಿ ಗೌರವ ಉಪಸ್ಥಿತರಿರುವರು. 

ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.                    

ಶ್ರೀಮಾನ ಬಸಪ್ಪ ಶಂಕರೆಪ್ಪ ಮುಂದಿನಮನಿ 

ಅಮ್ಮಿನಭಾವಿ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀಮಾನ ಬಸಪ್ಪ ಶಂಕರೆಪ್ಪ ಮುಂದಿನಮನಿ ತಮ್ಮ ಜೀವನದುದ್ದಕ್ಕೂ ಪರಂಪರಾಗತ ಪದ್ಧತಿಯೊಂದಿಗೆ ವೈಯಕ್ತಿಕ ನೆಲೆಯಲ್ಲಿ ಕೃಷಿ ಸುಧಾರಣೆ ಪ್ರಯೋಗಗಳನ್ನು ನಡೆಸಿ, ಯಶಸ್ವಿಗೊಂಡ ಸಂದರ್ಭಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ಸಹ ಇವರ ಮಾರ್ಗದರ್ಶನ ಪಡೆದ ಸಂದರ್ಭಗಳನ್ನು ಉಲ್ಲೇಖಿಸಬಹುದು. ತಮ್ಮ ಕೃಷಿ ಸಾಧನೆಯ ಜೊತೆಯಲ್ಲೇ ಗ್ರಾಮೀಣ ನೆಲೆಯಲ್ಲಿ ಅಸಂಖ್ಯ ಜನರಿಗೆ ನೆರವು ನೀಡಿದವರು.  

ಶ್ರೀಯುತರು ದಿನಾಂಕ 2-12-2015 ರಂದು ಲಿಂಗೈಕ್ಯರಾದರು. ಅವರ  ನಿರಂತರ ಸಂಸ್ಮರಣೆಗೋಸ್ಕರ ನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅವರ ಪುತ್ರರಾದ ಸದಾನಂದ ಮತ್ತು ದಯಾನಂದ ಅವರು 2017 ರಲ್ಲಿ ಈ ದತ್ತಿ ಸ್ಥಾಪಿಸಿದ್ದು, ಕೃಷಿ ಕುರಿತಾದ ಉಪನ್ಯಾಸ, ಚರ್ಚೆ, ಪ್ರಯೋಗ, ತಿಳುವಳಿಕೆ, ಸಂವಾದ ಮುಂತಾಗಿ ಸಾರ್ವಜನಿಕರ ಅರಿವಿಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುವುದು ಈ ದತ್ತಿ ಉದ್ದೇಶ. ಬನ್ನಿ ಕಾರ‌್ಯಕ್ರಮದಲ್ಲಿ ಭಾಗವಹಿಸಿ.