ಶ್ರಾವಣ ಮಾಸ: ಬಿಲ್ವಪತ್ರಿ ಸಸಿ ನೆಡುವ ಕಾರ್ಯಕ್ರಮ
Shravana Month: Bilva Leaf Sapling Planting Program
ಲೋಕದರ್ಶನ ವರದಿ,
ಜಮಖಂಡಿ 02: ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಶ್ರಾವಣ ಮಾಸದಲ್ಲಿ ಬಿಲ್ವಪತ್ರಿ ಸಸಿ ನೆಡುವ ಮಹತ್ತರ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಲಯನ್ಸ್ ಸಂಸ್ಥೆ ಮುಖ್ಯಸ್ಥ ಅಭಿಯಂತರ ವಿಜಯ ಕಟಗಿ ಹೇಳಿದರು.
ದೇವತೆಗಳಿಗೆ ಅತೀ ಪ್ರೀಯವಾದ ಬಿಲ್ವಪತ್ರಿ ಅರೆ್ಣ ಮನಹಿತ ಎನಿಸುತ್ತದೆ. ಒಂದು ಬಿಲ್ವಪತ್ರಿ ಸಸಿ ನೆಟ್ಟರೆ ಅದಕ್ಕಿಂತ ದೊಡ್ಡ ಪುಣ್ಯ ಇನ್ನೊಂದಿಲ್ಲ. ಶಿವನಿಗೆ ಅತ್ಯಂತ ಪ್ರೀಯವಾದ ಬಿಲ್ವಪತ್ರಿ ಇದಕ್ಕೆ ಬಿಲ್ವಾರ್ಚನೆ ಎನ್ನಲಾಗುತ್ತದೆ.
ಒಂದು ಬಿಲ್ವಪತ್ರೆಯಿಂದ ಶಿವ ತೃಪ್ತನಾಗುತ್ತಾನೆ. ಕೋಟಿ ಹೂವಿನ ಪೂಜೆಯ ಫಲ ಸಿಗುತ್ತೆ ಅಂತ ಪುರಾಣದಲ್ಲಿ ಉಲ್ಲೇಖಗೊಂಡಿದೆ. ಅದಕ್ಕಾಗಿ ಎಲ್ಲರಿಗೂ ಬಿಲ್ವಪತ್ರಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಸಂಗಮೇಶ ಕೌಜಲಗಿ, ಚಿನ್ಮಯ ಜಿರಲಿ, ರಾಜು ಅಕ್ಕಿ, ರೋಟರಿ ಸಂಸ್ಥೆ ಶ್ರೀಧರ ಕಾಖಂಡಕಿ, ಚಿದಾನಂದ ಚಟ್ಟರ ಪ್ರದೀಪ ಮೆಟ್ಟಗುಡ, ಮಲ್ಲು ಗಣಾಚಾರಿ, ನಿಲೇಶ ಹಜಾರೆ, ಚಂದ್ರಕಾಿತ ಮೋದಿ, ನಂದಕಿಶೋರ ಅಸುಗಡೆ, ಆನಂದ ಚೌಗುಲೆ, ಡಾ. ಮಾಲಘಾಣ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 