ಸಮಾಜ ಕಲ್ಯಾಣ ಬಯಸಿದ ಅನುಭವ ಮಂಟಪ ಪ್ರಥಮ ವಿಶ್ವಸಂಸ್ಥೆ
Shravan month program: Bailhongal
ಬೈಲಹೊಂಗಲ 20: ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಕೊನೆಯ ಸೋಮವಾರ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಪ್ರೇಮಕ್ಕ ಅಂಗಡಿ ಜಾತಿ ಮತ ಪಂಥ ಭೇದ ಭಾವವಿಲ್ಲದೆ ಸರ್ವರ ಆತ್ಮ ಹಾಗೂ ಸಮಾಜ ಕಲ್ಯಾಣ ಬಯಸಿದ ಅನುಭವ ಮಂಟಪ ಪ್ರಥಮ ವಿಶ್ವಸಂಸ್ಥೆ ಎಂದು ನುಡಿದರು.
ಅಂಬಿಗರ ಚೌಡಯ್ಯ ಸುಲೋಚನಾ ದಂಪತಿಗಳು ಮಗ ಪುರವಂತ ಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಿದ ಪ್ರವಚನದ ಪ್ರಸಂಗ ವಿವರಿಸಿದರು. ವಿನಾಯಕ ಶೃತಿ ರಾಮಗುಂಡಿ ದಂಪತಿ ಕುಮಾರ್, ವೀವೇಕ ಹವಳಪ್ಪನವರವರನ್ನು ಸಾಕ್ಷಿಕರಿಸಿ ಸನ್ಮಾನಿಸಿ ಬರಮಾಡಿಕೊಂಡ ಪ್ರವಚನ ಎಲ್ಲರ ಕಣ್ಮನ ಸೆಳೆಯಿತು. ಶರಣೆ ವಿದ್ಯಾನಿಲಪ್ಪನವರ್ ವಚನ ಚಿಂತನಗೈದರು. ಅಜಗಣ್ಣ ಮುಕ್ತಾಯಕ್ಕ ಬಳಗ ನಗರದ ನೂರಾರು ಶರಣು ಶರಣೀಯರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕಿ ಮಾಧುರಿ ರಾಮಗುಂಡಿ ಅವರ ವಿದ್ಯಾರ್ಥಿನಿಯರು ವಚನ ನೃತ್ಯ ಪ್ರಸ್ತುತಪಡಿಸಿದರು. ಶೆಟ್ಟನ್ನವರ್ ಬಂಧುಗಳು ದಾಸೋಹಗೈದರು. ಗೀತಾ ಅರಳಿ ಕಟ್ಟಿ ಸ್ವಾಗತಿಸಿದರು. ಸುವರ್ಣ ಬಿಜುಗುಪ್ಪಿ ವಂದಿಸಿದರು. ರಾಜೇಶ್ವರಿ ದ್ಯಾಮನಗೌಡ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 