ಶ್ರಾವಣ ಮಾಸದ : ಬಜನಾ ಕಾರ್ಯಕ್ರಮ

ಶ್ರಾವಣ ಮಾಸದ : ಬಜನಾ ಕಾರ್ಯಕ್ರಮ Shravan month: Bajana program

ಯಮಕನಮರಡಿ  25: ಸಂಸ್ಕಾರ ಭರಿತ ಗ್ರಾಮ ಹಳೆ ಗೂಡಗನಟಿ ಯಮಕನಮರಡಿ ಹುಕ್ಕೇರಿ ತಾಲೂಕಿನ ಹಳೆ ಗುಡ್ಡಗನಹಟ್ಟಿ ಗ್ರಾಮದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ಅಂಗವಾಗಿ ತಾಲೂಕ ಮಟ್ಟದ ಬಜನಾ ಕಲಾವಿದರು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಶುಕ್ರವಾರ ದಿನಾಂಕ 25 ರಂದು ಪ್ರಾರಂಭವಾಗಿ ಶನಿವಾರ ಸಾಯಂಕಾಲದವರಿಗೆ ಭಜನಾ ಕಾರ್ಯಕ್ರಮ ಮಹಾಪ್ರಸಾದ ಪಲ್ಲಕ್ಕಿ ಉತ್ಸವ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ ಇದರ ಅಂಗವಾಗಿ ತಾಲೂಕ ಮಟ್ಟದ ಕಲಾವಿದರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ಕಾರ್ಯಕ್ರಮವನ್ನು ಹುಕ್ಕೇರಿ ತಾಲೂಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ್ ಅವಲಕ್ಕಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾಯಕವಾಗಿ ಮಾತನಾಡುತ್ತಾ ಹಳೆ ಗುಡಗನಹಟ್ಟಿ ಗ್ರಾಮವು ಅತಿ ಪೂರ್ವದಿಂದಲೂ ಸಂಸ್ಕಾರ ಭರಿತ ಗ್ರಾಮವಾಗಿದ್ದು ಪ್ರತಿ ವರ್ಷವೂ ಇಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತ ಬಂದಿರುವುದು ಒಂದು ಸಂಪ್ರದಾಯ ಈ ಗ್ರಾಮದಲ್ಲಿ ಜಾಗೃತವಾದ ಬ್ರಹ್ಮದೇವರ ಮಂದಿರವು ಇರುತ್ತದೆ. ಈ ಬ್ರಹ್ಮ ದೇವರಿಗೆ ಭಕ್ತಿ ಪೂರ್ವಕವಾಗಿ ನಡೆದುಕೊಂಡು ಬಂದವರಿಗೆ ಆ ಬ್ರಹ್ಮದೇವನು ವರದ ಹಸ್ತವನ್ನು ನೀಡಿ ಅವರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ತರುತ್ತಾನೆ ಈ ಗ್ರಾಮದಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಬ್ರಹ್ಮದೇವನ ಹೆಸರನ್ನು ಇಡುವುದು ಒಂದು ಸಂಪ್ರದಾಯ ಈ ಗ್ರಾಮವು ಅತಿ ಪೂರ್ವದಿಂದಲೂ ರೈತಪಿ ಗ್ರಾಮ ವಾಗಿದ್ದು ಎಲ್ಲರೂ ಶ್ರಮಜೀವಿಗಳಾದರು ಎಂದು ಹೇಳಲು ತಪ್ಪಾಗಲಾರದು ಈ ಗ್ರಾಮದಲ್ಲಿ ರುಚಿಕರವಾದ ಆಹಾರವನ್ನು ಬೆಳೆಯುತ್ತಾ ಬಂದಿದ್ದು ಗ್ರಾಮದಲ್ಲಿ ಸುಮಾರು 90 95 ವರ್ಷಗಳ ವರೆಗೆ ಬದುಕುಳಿದ ಹಿರಿಯರು ಈಗಲೂ ಇದ್ದಾರೆ ಈ ಗ್ರಾಮವು ಸುಮಾರು 40 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಲ್ಲಿ ಮುಳುಗಡೆ ಹೊಂದಿದರು ಸಹಿತ ಇವರೆಲ್ಲರೂ ಪುನರ್ವಸತಿ ಕೇಂದ್ರಗಳಿಗೆ ಹೋದರು ಅಲ್ಲಿ ಸಹಿತ ಬ್ರಹ್ಮದೇವರ ಮಂದಿರಗಳನ್ನು ನಿರ್ಮಿಸಿ ಬ್ರಹ್ಮದೇವನ ಕೃಪೆಗೆ ಪಾತ್ರರಾದದ್ದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಇಂಥ ಸಂಸ್ಕಾರ ಭರಿತ ಗ್ರಾಮದಲ್ಲಿ ಭಜನೆ ಕೀರ್ತನೆ ದೇವ ಆರಾಧನೆ ಹಾಗೂ ಅಪಾರ ಕಲಾವಿದರು ಆಗಿ ಹೋದ ಒಂದು ಗ್ರಾಮ ಈಗಲೂ ಸಹಿತ ಈ ಗ್ರಾಮದಲ್ಲಿ ಒಂದು ಭಜನಾ ಮಂಡಲವು ಇರುತ್ತದೆ ಅಲ್ಲದೆ ಬೇರೆ ಬೇರೆ ಕಡೆಯಿಂದ ಭಜನಾ ತಂಡಗಳನ್ನು ತಂದು 24 ಗಂಟೆಗಳವರೆಗೆ ನಿರಂತರ ಶಿವನಾಮಸಕ್ತ ಭಜನೆ ಕೀರ್ತನೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಸ್ಕಾರ ಬರೀತ ಗ್ರಾಮವನ್ನಾಗಿ ಉಳಿಸಿಕೊಂಡವರಲ್ಲಿ ಹಳೆ ಗುಡಗನಟ್ಟಿ ಗ್ರಾಮದ ಜನತೆ ಇಂಥ ಗ್ರಾಮದಲ್ಲಿ ಜನಿಸಿದವರು. ನಿಜಕ್ಕೂ ಪುಣ್ಯವಂತರು ಎಂದು ಮಾರ್ಮಿಕವಾಗಿ ಮಾತನಾಡಿದರು ಸದರಿಯವರಿಗೆ ಗ್ರಾಮದ ಪರವಾಗಿ ಸನ್ಮಾನ ಸಮಾರಂಭ ಜರುಗಿತು ನಂತರ ಆಕಾಶವಾಣಿ ಜಾನಪದ ಕಲಾವಿದರಾದ ಗೋಪಾಲ್ ಚ ಪ ನೀಅವರು ಬಸವಣ್ಣನವರ ವಚನವನ್ನು ಸಾದರಪಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸರ್ವ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು