ಅಡ್ಡಪಲ್ಲಕ್ಕಿಯಂತ ಆಚರಣೆಗಳನ್ನು ಧಿಕ್ಕರಿಸಿದ್ದ ಬಸವಣ್ಣ: ಡಾ.ಗುಡಸಿ
Shravan Satsang Program
ಹಾರೂಗೇರಿ 28: ಬಸವಣ್ಣ ಅಡ್ಡಪಲ್ಲಕ್ಕಿಯಂತಹ ಆಚರಣೆಯ ಧರ್ಮವನ್ನು ಯಾವತ್ತೂ ಸ್ವೀಕರಿಸಲಿಲ್ಲ. ಅನಿಷ್ಠ, ದುಷ್ಟ ಆಚರಣೆಗಳ ನಿರ್ಮೂಲನೆಗಾಗಿಯೇ ವೈಜ್ಞಾನಿಕ, ಸತ್ಯ, ಸರಳ, ಪ್ರಗತಿಪರ ಬಸವಧರ್ಮವನ್ನು ನೀಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಹೇಳಿದರು.
ಪಟ್ಟಣದ ಶಾರದಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ರವಿವಾರ ಸಂಜೆ ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಘಟಕ ಏರಿ್ಡಸಿದ್ದ ಶ್ರಾವಣ ಸತ್ಸಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಚನ ಸಂಸ್ಕೃತಿಯನ್ನು ಬೆಳೆಸಲು, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಮೂಡಿಸಲು, ಎಳೆಯ ಜೀವಗಳ ಮನಸ್ಸಿನಲ್ಲಿ ಉತ್ತಮ ಸಂದೇಶಗಳನನ್ನು ಬಿತ್ತರಿಸಿ, ಯುವಸಮುದಾಯದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಬಸವಧರ್ಮವೊಂದೇ ಪರಿಹಾರ. ಭಾರತದ ಇತಿಹಾಸದಲ್ಲೇ ಬಸವಣ್ಣನವರ ಕುರಿತು ಪ್ರಕಟಗೊಂಡ ಗ್ರಂಥ ಕೃತಿಗಳು ಯಾವುದರ ಮೇಲೂ ಪ್ರಕಟಗೊಂಡಿಲ್ಲ. ಜಗತ್ತನ್ನು ಉಳಿಸಿಕೊಳ್ಳಲು ಒಂದೇ ತತ್ವ ಅದೇ ಬಸವತತ್ವ. ಬಸವ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಅದನ್ನು ಅರಿತು ಆಚರಿಸಿದರೆ ಜೀವನ ಸುಂದರವಾಗಿರುತ್ತದೆ ಎಂದರು.
ರಾಯಬಾಗ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಅನುಸೂಯಾ ಮುಳವಾಡ ಅನುಭಾವ ನೀಡುತ್ತ ವಚನಗಳು ಸಮತಾ ಭಾವ ಸಾಮರಸ್ಯದ ಸಂದೇಶಗಳು. ಜಗತ್ತಿನಲ್ಲಿ ಗುಡಿಗುಂಡಾರಗಳಿಲ್ಲದ-ಧರ್ಮವಿಲ್ಲದ ಬಸವತತ್ವದಲ್ಲಿ ಮನುಷ್ಯರೇ ಜೀವಂತ ದೇವಾಲಯಗಳು. ಬಸವ ಸಂಸ್ಕೃತಿ, ತತ್ವದಲ್ಲಿ ಕಲ್ಲುಗಳ ಪಾತ್ರವಿಲ್ಲ. ಮನುಷ್ಯರ ಪಾತ್ರವಿದೆ. ಅಣ್ಣ ಬಸವಣ್ಣನವರು ಜಾಗತಿಕ ಸ್ತರದ ಮಹಾ ಮಾನವತಾವಾದಿಯಾಗಿದ್ದು, ಅವರ ಬದುಕೇ ಮನುಕುಲಕ್ಕೆ ಒಂದು ದಿವ್ಯ ಸಂದೇಶವಾಗಿದೆ.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಬಿ.ಮಾಳಶೆಟ್ಟಿ, ಇಂಜೀನಿಯರ ಮಹಾದೇವ ನಾವಿ, ಪಿಕೆಪಿಎಸ್ ಬ್ಯಾಂಕ್ ನಿರ್ದೇಶಕ ಕೆಂಪಣ್ಣ ಸದಲಗಿ, ಗೀತಾ ಮಾಳಶೆಟ್ಟಿ, ನಾಗರಾಜ ಗುಡಸಿ, ಅಕ್ಷತಾ ಗುಡಸಿ, ಓಂಕಾರ ಬಾಡಗಿ ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 