ವಸತಿ ಶಾಲೆಯಲ್ಲಿ ಊಟದ ಕೊರತೆ: ಹಬ್ಬದ ನೆಪದಲ್ಲಿ ಮನೆಗೆ ಕಾಲಕಿತ್ತ್‌ ವಿದ್ಯಾರ್ಥಿನಿಯರು

ವಸತಿ ಶಾಲೆಯಲ್ಲಿ ಊಟದ ಕೊರತೆ: ಹಬ್ಬದ ನೆಪದಲ್ಲಿ ಮನೆಗೆ ಕಾಲಕಿತ್ತ್‌ ವಿದ್ಯಾರ್ಥಿನಿಯರು Shortage of food at residential school: students rush home on the pretext of festival

ವಿಶೇಷ ವರದಿ- ಗೌರೀಶ್ ನಾಗಶೆಟ್ಟಿ  

ಶಿರಹಟ್ಟಿ  28: ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ವಿದ್ಯಾರ್ಥಿನಿಯರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಊಟ ಸಿಗದಿರುವುದರಿಂದ, ಸುಮಾರು 250 ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ದೂರು ನೀಡಿ, ಹಬ್ಬದ ನೆಪದಲ್ಲಿ ತಾವೆಲ್ಲರೂ ತಮ್ಮ ತಮ್ಮ ಊರಿಗೆ ಮರಳಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. 

ಪಟ್ಟಣದ ಹೊರವಲಯದಲ್ಲಿರುವ ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಕಳೆದ 15 ದಿನಗಳಿಂದ ಸರಿಯಾದ ಆಹಾರವಿಲ್ಲದೆ ಅತೀವ ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ಪ್ರಕಾರ, ಊಟದ ಗತಿಯೇ ಇಲ್ಲದಂತೆ ಏನು ಬೇಕಾದರೂ ಅದನ್ನೆಲ್ಲವೂ ಅರ್ಧಕ್ಕೆ ಬಿಟ್ಟು ಕೊಡಲಾಗುತ್ತಿದೆ. ದಿನವೂ ಕಾಫಿ, ಟೀ, ಸ್ನ್ಯಾಕ್, ಮೊಟ್ಟೆ, ಚಿಕನ್ ಎಲ್ಲವೂ ಕೈಕಳೆದುಕೊಂಡಿರುವುದನ್ನು ಅವರು ತಮ್ಮ ಪಾಲಕರಿಗೆ ತಿಳಿಸಿ, ತಾತ್ಕಾಲಿಕವಾಗಿ ಮನೆಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ. 

ಅರೋಗ್ಯವಿಲ್ಲದ ಆಹಾರ ವ್ಯವಸ್ಥೆ: ವಿದ್ಯಾರ್ಥಿಗಳ ಅಳಲು 

ಹೆಚ್ಚು ವಿದ್ಯಾರ್ಥಿನಿಯರ ಆರೋಪ ಪ್ರಕಾರ, ಶಾಲೆಯಲ್ಲಿ ನೀಡಲಾಗುತ್ತಿರುವ ಊಟವು ಮಾನದಂಡಕ್ಕೆ ತಲಪುತ್ತಿಲ್ಲ. ಒಂದು ಮೊಟ್ಟೆಯನ್ನು ಇಬ್ಬರಿಗೆ ಭಾಗವಹಿಸಿ ನೀಡಲಾಗುತ್ತಿದೆ, ದಿನಸಿ ಪದಾರ್ಥಗಳ ಕೊರತೆಯಿಂದ ದಿನದ ಊಟದಲ್ಲಿ ಕೇವಲ ಒಂದು ಚಪಾತಿ ಅಥವಾ ಸಾಂಬಾರ್ ಮಿಶ್ರಿತ ಅನ್ನ, ಇಲ್ಲದಿದ್ದರೆ ಕೇವಲ ಉಪ್ಪಿನಕಾಯಿಯೊಂದಿಗೆ ಊಟ ನೀಡಲಾಗುತ್ತಿದೆ. ತಡವಾಗಿ ಊಟಕ್ಕೆ ಬರುವ ವಿದ್ಯಾರ್ಥಿಗಳಿಗೆ ಊಟವೇ ಇಲ್ಲದ ಸ್ಥಿತಿಯೂ ಕಂಡುಬಂದಿದೆ. 

ಮಕ್ಕಳ ಕೈಯಿಂದ ಅಡುಗೆ ಮತ್ತು ಸೇವನೆ 

ಅದು ಮಾತ್ರವಲ್ಲದೆ, ಅಡುಗೆ ಮಾಡುವ ಸಿಬ್ಬಂದಿಯ ಕೊರತೆಯ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರ ಕೈಯಿಂದಲೇ ಚಪಾತಿ ತಯಾರಿ ಹಾಗೂ ಅಡುಗೆ ಕಾರ್ಯ ಮಾಡಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕಾರಣದಿಂದಾಗಿ ಅವರ 

ವಿದ್ಯಾಭ್ಯಾಸ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಾಲಕರ ಕಿಡಿಕಾರಿಕೆ ಹಾಗೂ ಪ್ರಾಂಶುಪಾಲರ ಸ್ಪಷ್ಟನೆ 

ಶನಿವಾರದಂದು ಶಾಲೆಗೆ ಬಂದ ಕೆಲ ಪಾಲಕರು ಹಿ ಜಗದೀಶ ವಾಲ್ಮೀಕಿ, ಗುರುಪಾದಪ್ಪ ದೊಡ್ಡನ್ನವರ, ವಿಠೋಬಾ ಅಂಬಣ್ಣವರ ಸೇರಿದಂತೆ ಹಲವರು ಹಿ ತಮ್ಮ ಮಕ್ಕಳ ತೊಂದರೆ ಕಂಡು ಬೇಸರ ವ್ಯಕ್ತಪಡಿಸಿದರು. "ಸರ್ಕಾರ ವಿದ್ಯಾರ್ಥಿಗಳಿಗೆ ಭವಿಷ್ಯ ನೀಡುತ್ತದೆ ಎನ್ನುತ್ತದೆ, ಆದರೆ ಇಲ್ಲಿ ಹಸಿವಿನಿಂದ ಮಕ್ಕಳ ಭವಿಷ್ಯವೇ ನಾಶವಾಗುತ್ತಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರಿ ವಸತಿ ಶಾಲೆಗಳಲ್ಲಿ ‘ಭಾಗ್ಯ’ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆಯಾದರೂ, ಶಿರಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ಆಹಾರದ ಭಾಗ್ಯ ತಪ್ಪಿದಂತಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಪೋಷಕರ ವಿಶ್ವಾಸದ ಮೇರೆಗೆ ಶಾಲೆಗೆ ಹೋದ ವಿದ್ಯಾರ್ಥಿಗಳ ಹಕ್ಕುಗಳ ಮೇಲೆ ಸಂಶಯ ಉಂಟಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಸ್ಪಂದಿಸಿ ಪರಿಪೂರ್ಣ ಪರಿಹಾರ ನೀಡುವುದು ಅನಿವಾರ್ಯವಾಗಿದೆ.