ರಾಜ್ಯಸಭೆಗೆ ಮಧ್ವರಾಜ ಆಯ್ಕೆ ಮಾಡಲು ಶಿವರಾಜ ಆಗ್ರಹ

ರಾಜ್ಯಸಭೆಗೆ ಮಧ್ವರಾಜ ಆಯ್ಕೆ ಮಾಡಲು ಶಿವರಾಜ ಆಗ್ರಹ Shivraj demands Madhwaraj to be elected to Rajya Sabha

ದೇವರಹಿಪ್ಪರಗಿ 26: ಮಾಜಿ ಸಚಿವರು ಬಿಜೆಪಿ ಹಿರಿಯ ನಾಯಕರಾದ ಪ್ರಮೋದ ಮಧ್ವರಾಜ ಅವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ ತಳವಾರ ಪಕ್ಷದ ಮುಖಂಡರಿಗೆ ವಿನಂತಿಸಿದ್ದಾರೆ.  ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಉಡುಪಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮತ್ತು 2023 ರಲ್ಲಿ ನೆಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶಾಸಕರ ಗೆಲುವಿಗೆ ಪ್ರಮುಖಪ್ರಾತ ವಹಿಸಿದ್ದರು,ಅದೇ ರೀತಿ 2024ರ ಪಕ್ಷದ ಲೋಕಸಭಾ ಅಭ್ಯಥಿ9 ಗೆಲುವು ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಹಾಗೂ ಜಿಲ್ಲೆಯ ನಾಯಕರು ಸಮುದಾಯದ ಮುಖಂಡರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದೆ ಆದರೆ ಬರುವಂತ ದಿನಗಳಲ್ಲಿ ಪಕ್ಷ ರಾಜ್ಯದಲ್ಲಿ ,ಜಿಲ್ಲೆಯಲ್ಲಿ ಇನ್ನೂ ಸದೃಢವಾಗಿ ಬೆಳೆಯುತ್ತದೆ ಎಂದು ಆಗ್ರಹಿಸಿದರು.