ಅ.20 ರಂದು ಶಿವಯೋಗೆಪ್ಪ ಬಸವನಾಳ ದತ್ತಿ ಸಮಾರಂಭ
Shivayogeppa Basavanala donation ceremony on October 20th
ಅ.20 ರಂದು ಶಿವಯೋಗೆಪ್ಪ ಬಸವನಾಳ ದತ್ತಿ ಸಮಾರಂಭ
ಧಾರವಾಡ 19: ಕರ್ನಾಟಕ ವಿದ್ಯಾವರ್ಧಕ ಸಂಘವು, ವಿರೂಪಾಕ್ಷಪ್ಪ ಶಿವಯೋಗೆಪ್ಪ ಬಸವನಾಳ ದತ್ತಿ ಅಂಗವಾಗಿ ದಿನಾಂಕ 20-10-2025ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲಿ ್ಲ‘ಸಹಕಾರ ಸೇವೆಯಲ್ಲಿ ಬಸವನಾಳರ ಪಾತ್ರ’ ಕುರಿತು ಉಪನ್ಯಾಸ ಮತ್ತು ಕೆ.ಸಿ.ಸಿ ಬ್ಯಾಂಕ ವಿಶ್ರಾಂತ ಸಿಬ್ಬಂದಿಗಳಿಗೆ ಸತ್ಯಶುದ್ಧಕಾಯಕ ಪ್ರಶಸ್ತಿ ಪ್ರದಾನ ಏರಿ್ಡಸಿದೆ. ಅತಿಥಿ ಉಪನ್ಯಾಸಕರಾಗಿ ಕರ್ನಾಟಕ ಸರಕಾರದ ಸಹಕಾರ ಇಲಾಖೆ ವಿಶ್ರಾಂತ ಸಹಕಾರ ಸಂಘಗಳ ಅಪರ ನಿಬಂಧಕರಾದ ಬಿ. ಹೆಚ್. ಮಂಜಪ್ಪ ಆಗಮಿಸುವರು. ಧಾರವಾಡ ಹು.ಧಾ.ಮ.ಪಾಲಿಕೆ ಕರಾಕರಣೆ ಹಣಕಾಸು ಸ್ಥಾಯಿ ಸಮಿತಿ ಮಾಜಿಅಧ್ಯಕ್ಷ್ಷಸಿ. ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಕೆ.ಸಿ.ಸಿ ಬ್ಯಾಂಕ ವಿಶ್ರಾಂತ ಸಿಬ್ಬಂದಿಗಳಾದ ಬಿ.ಆರ್.ಪಾಟೀಲ, ಆರ್.ಎಸ್. ಸಾವಳಗಿಮಠ, ಯು. ಬಿ. ಹೊಟಗಿ, ಎಸ್. ಜಿ. ಶೀಲವಂತ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಗುವುದು. ಧಾರವಾಡದ ರವೀಂದ್ರ ಬಸವನಾಳ ಮತ್ತು ಕೆ.ಸಿ.ಸಿ ಬ್ಯಾಂಕ ನಿವೃತ್ತಜನರಲ್ ಮ್ಯಾನೇಜರಎಸ್. ಜಿ. ಪಾಟೀಲ ಗೌರವ ಉಪಸ್ಥಿತರಿರುವರು.
ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ ವಿರೂಪಾಕ್ಷಪ್ಪ ಶಿವಯೋಗೆಪ್ಪ ಬಸವನಾಳ ವಿರೂಪಾಕ್ಷಪ್ಪನವರು ಹಾವೇರಿಯಲ್ಲಿ 20-10-1903 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹಾವೇರಿ, ಮಾಧ್ಯಮಿಕ ಶಿಕ್ಷಣ ಬೆಳಗಾವಿ, ಉಚ್ಛ ಶಿಕ್ಷಣವನ್ನು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪಡೆದರು ಇವರು ಕಾಲೇಜಿನಲ್ಲಿ ಓದುವಾಗ ‘ಹಾಕಿ’ ‘ಪುಟ್‌ಬಾಲ್’ ‘ವೇಟ್‌ಲಿಫ್ಟಿಂಗ’ ನಲ್ಲಿ ಪಾರಿತೋಷಕ ಪಡೆದುಕೊಂಡ ಕ್ರೀಡಾಪಟು ಆಗಿದ್ದರು. ಜೊತೆಗೆ ಉತ್ತಮ ಈಜುಗಾರರು, ಕೊಳಲು ವಾದಕರೂ ಆಗಿದ್ದರು. ಪುಣೆಯಲ್ಲಿ 1928ರಲ್ಲಿಕಾಯ್ದೆ ಪರೀಕ್ಷೆ ಪಾಸಾದ ಇವರು ಧಾರವಾಡದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. 1939 ರಲ್ಲಿ ಸರಕಾರಿ ವಕೀಲರೆಂದು ನೇಮಕಗೊಂಡು ಅನೇಕ ವರ್ಷಗಳ ಕಾಲ ತಮ್ಮ ವಕೀಲ ವೃತ್ತಿಯನ್ನುಕೈಕೊಂಡರು. ಆದರೆಒಂದು ದಿನ ತಮ್ಮ ಒಬ್ಬ ಕಕ್ಷಿದಾರನಿಗೆ ಅನ್ಯಾಯ ಒದಗುವ ಪ್ರಸಂಗ ಬಂದು ಸರಕಾರಿ ವಕೀಲ ಹುದ್ದೆಗೆ ರಾಜೀನಾಮೆ ನೀಡಿ, ನ್ಯಾಯದ ಪರವಾಗಿ ನಿಂತವರು. ಇವರು 1931 ರಲ್ಲಿ ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕರಾಗಿ 1932 ರಲ್ಲಿ ಆಡಳಿತ ಮಂಡಳಿ ನಿರ್ದೇಶಕರಾಗಿ ಮುಂದೆ ಅದರ ಚೇರಮನ್ನರಾಗಿ, ಅಧ್ಯಕ್ಷರಾಗಿ ಸುಮಾರು 40 ವರ್ಷ ಸೇವೆ ಸಲ್ಲಿಸಿ, ತಮ್ಮಅವಧಿಯಲ್ಲಿ ಬ್ಯಾಂಕನ್ನುದೇಶದಲ್ಲಿಯೇ ದ್ವಿತೀಯ ಸ್ಥಾನಕ್ಕೇರಿಸಿದ ಇವರು ಸಹಕಾರಿಕ್ಷೇತ್ರದ ದಿಗ್ಗಜರಲ್ಲದೇ ಸಾಹಿತ್ಯಕ್ಷೇತ್ರದಲ್ಲಿಯೂ ಕೂಡಾ ಪ್ರಭುತ್ವ ಹೊಂದಿದ್ದರು. ತಮ್ಮ ‘ದಂಡಯಾತ್ರೆ’ ಕನ್ನಡ ಕಾದಂಬರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾರಿತೋಷಕ ಪಡೆದಿದ್ದರು. ಕರ್ನಾಟಕದ ಪ್ರಮುಖ ಪತ್ರಿಕೆ ‘ಜಯಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು 6-7-1967 ರಲ್ಲಿ ಲಿಂಗೈಕ್ಯರಾದರು.ಇವರ ಸ್ಮರಣಾರ್ಥ ಸಹಕಾರಓದ್ಯೋಗಿಕ, ಸಾಮಾಜಿಕ, ಆಧ್ಯಾತ್ಮಿಕಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ, ವಿದ್ವಾಂಸರಿಂದ ಉಪನ್ಯಾಸ ಏರಿ್ಡಸುವ ಮೂಲಕ ಎಸ್. ಜಿ. ಪಾಟೀಲ, ನಿವೃತ್ತಜನರಲ್ ಮ್ಯಾನೇಜರ, ಕೆ.ಸಿ.ಸಿ.ಬ್ಯಾಂಕ್‌ಅವರ ಮಕ್ಕಳಾದ ಭಾರತಿ, ಶೋಭಾ ಹಾಗೂ ವೀರನಗೌಡ ಪಾಟೀಲ ಅವರು ಕೂಡಿಕೊಂಡು ಬಸವನಾಳರ ಹೆಸರಿನಲ್ಲಿ 2022 ರಲ್ಲಿದತ್ತಿ ಸ್ಥಾಪಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 