ಶಿವಶರಣೆ ಮಂಜುಳಾ ತಾಯಿಯವರ ಮೌನಾನುಷ್ಠಾನ ಮುಕ್ತಾಯ
Shivasharane Manjula Mata's silent meditation concludes
ಸಿಂದಗಿ 26: ನೂರಕ್ಕೆ ಪ್ರತಿಶತ 99ರಷ್ಟು ಜನ ವಿಶ್ವದಲ್ಲಿ ಮಾತನಾಡತಾ ಇರುತ್ತಾರೆ, ಆದರೆ ಮೌನವಾಗಿರುವವರು ಅರ್ಧದಷ್ಟು ಮಾತ್ರ. ಮಾತನಾಡುವವರ ಮಧ್ಯದಲ್ಲಿ ಒಂದು ಪರ್ಯಂತ ಮೌನವಾಗಿರುವವರು ಎಂದರೆ ಮಂಜುಳಾ ತಾಯಿಯಂತವರು ಮಾತ್ರ ಎಂದು ಹುಬ್ಬಳ್ಳಿ ಮೂರುಸಾವಿರಮಠ ಮಹಾಸಂಸ್ಥಾನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಸಾತವೀರೇಶ್ವರ ಸಭಾ ಭವನದಲ್ಲಿರುವ ರೊಟ್ಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾ ತಾಯಿಯವರು ಲೋಕ ಕಲ್ಯಾಣಾರ್ಥವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಮೌನಾನುಷ್ಠಾನದ ಮುಕ್ತಾಯ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದಂತದ್ದು ಈ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿ ಸಿಗದು. ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಹಕಾರಗಳು ನಮಗೆ ದಾರಿ ದೀಪವಾಗಿವೆ. ನಮ್ಮ ಧರ್ಮದ ನಡೆ ನುಡಿ ಮುಂದಿನ ಪಿಳಿಗೆಗೆ ವರ್ಗಾಹಿಸುವುದು ನಮ್ಮೆಲ್ಲರು ಕರ್ತವ್ಯವಾಗಿದೆ. ಇಂದಿನ ಯುವ ಜನಾಂಗ ಧಾಮಿಘಕ ಕಾರ್ಯಕ್ರಮಗಳು ಮರೆತ್ತಿದ್ದಾರೆ. ಅವರು ಬಿಟ್ಟು ಹೋದ ನಮ್ಮ ಸಂಸ್ಕೃತಿನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರ ಎಲ್ಲಿ ದೊರೆಯುತ್ತದೆ ಎಂದರೆ ನಮ್ಮ ಸನಾತನ ಧರ್ಮದಲ್ಲಿ ಸಿಗುತ್ತದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಸಂಸ್ಕಾರ ದೊರಕಿಸಿಕೊಟ್ಟು ಲೋಕ ಕಲ್ಯಾರ್ಥವಾಗಿ ಅನುಷ್ಠಾನಗೈದ ಮಹಾತಾಯಿಯವರಿಗೆ ಅಭಿನಂದನೆಗಳು ಎಂದರು.
ಮೌನ ಅನುಷ್ಠಾನ ಗೈದ ಮಂಜುಳಾ ತಾಯಿ ಮಾತನಾಡಿ, ಅನಾಧಿಕಾಲದಿಂದ ಮನಕುಲಕ್ಕೆ ರೋಟ್ಟಿಯ ಮಹತ್ವವನ್ನು ಅರಿವು ಕೊಟ್ಟ ರೊಟ್ಟಿ ಲಿಂಗೇಶ್ವರರಲ್ಲಿ ಒಂದು ದೊಡ್ಡ ಶಕ್ತಿಯಿದೆ. ಇಂತಹ ಮಹಾತ್ಮರ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ. ಈ ಅನುಷ್ಠಾನ ಸಿಂದಗಿ ಜನತೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಸಾನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಈ ಭೂಮಿಯಲ್ಲಿ ಬಂಗಾರದ ಬೆಳೆಯಿದೆ. ಅದನ್ನು ಬಿತ್ತಿ ಬೆಳೆದುಕೊ ಎಂದು ಚೆನ್ನವೀರ ಸ್ವಾಮಿಜಿಗಳು ಹೇಳುತ್ತಿದ್ದರು ಅದನ್ನು ಸಿದ್ಧಪಡಿಸಿದ್ದು ಶಿವಶರಣೆ ಮಂಜುಳಾ ತಾಯಿಯವರ ಈ ಮೌನಾನುಷ್ಠಾನದ ಆಧ್ಯಾತ್ಮೀಕ ಜ್ಞಾನದ ಅನುಭವದಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಕೊಟ್ಟುರು ಜಾನುಕೋಟೆಮಠದ ಡಾ. ಸಿದ್ಧಲೀಂಗ ಶಿವಾಚಾರ್ಯರು, ಶಹಾಪುರ ಸುಗೂರೇಶ್ವರ ಶಿವಾಚಾರ್ಯರು, ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಶಿವಶರಣೆ ರೇಣುಕಾದೇವಿ, ಸಹಕಾರಿ ಧುರೀಣ ಶಿವನಗೌಡ ಬಿರಾದಾರ, ಶಿವಪ್ಪಗೌಡ ಬಿರಾದಾರ, ಅಶೋಕ ವಾರದ ವೇದಿಕೆ ಮೇಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 