ಶಿವಪ್ಪ ಸಿದ್ದಾಪೂರ, ಉಪಾಧ್ಯಕ್ಷರಾಗಿ ಪಾಂಡಪ್ಪ ಕೊಳಚಿ ಆಯ್ಕೆ

Shivappa Siddapura, Pandappa Kolachi elected as Vice President

ರನ್ನ ಬೆಳಗಲಿ ಏ.11: ಪಟ್ಟಣದ ಗದ್ದಗಿ ಗುಡಿ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗುರುವಾರ ದಂದು ಸಾಯಂಕಾಲ ಪ್ರಥಮ ಬಾರಿಗೆ ರನ್ನ ಬೆಳಗಲಿ ಹಿರಿಯರ ಹಾಗೂ ಹಾಲಿ ಮತ್ತು ಮಾಜಿ ಸೈನಿಕರ ನೇತೃತ್ವದಲ್ಲಿ ನೂತನ ರನ್ನ ಬೆಳಗಲಿ ಮಾಜಿ ಹಾಲಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಶಿವಪ್ಪ ರಾಮಲಿಂಗಪ್ಪ ಸಿದ್ದಾಪೂರ, ಉಪಾಧ್ಯಕ್ಷರಾಗಿ ಪಾಂಡಪ್ಪ ರಾಮಪ್ಪ ಕೊಳಚಿ ಮುಖ್ಯ ಕಾರ್ಯದರ್ಶಿಯಾಗಿ ಮುರಗೇಶ ಚನ್ನಪ್ಪ ಗಾಡವಿ, ಸಹ ಕಾರ್ಯದರ್ಶಿಗಳಾಗಿ ಪ್ರಕಾಶ ಸತ್ಯಪ್ಪ ಹಿಕಡಿ, ಸಂಗಪ್ಪ ಸಾಬಪ್ಪ ಹಿಪ್ಪಲಕರ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡರು ಜೊತೆಗೆ ಸದಸ್ಯರ ಆಯ್ಕೆಯೂ ಯಶಸ್ವಿಯಾಗಿ ಜರುಗಿತು. 

ಸಿದ್ದುಗೌಡ ಪಾಟೀಲ ಪ.ಪಂ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ದೇಶವನ್ನು ಕಾಯುವ ಸೈನಿಕರಿಗೆ ಸದಾಕಾಲವು ನಮ್ಮ ಬೆಂಬಲ ಮತ್ತು ಗೌರವ ಇರುತ್ತದೆ. ತಮ್ಮ ಮನವಿಯಂತೆ ನಾವೆಲ್ಲ ಪಕ್ಷಭೇದ ಮರೆತು ಮಾಜಿ ಮತ್ತು ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಸರಕಾರದ ಅಡಿಯಲ್ಲಿ ಸೈನಿಕ ಭವನ ನಿವೇಶನಕ್ಕೆ ಸ್ಥಳಾವಕಾಶ ನೀಡಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು. ಪ.ಪಂ. ಸ್ಥಾಯಿ ಸಮಿತಿ ಚೇರ್ಮನ್ ರಾದ ಪ್ರವೀಣ ಬರಮನಿ ಮತ್ತು ಪ.ಪಂ ಸದಸ್ಯರಾದ ಪ್ರವೀಣ ಪಾಟೀಲ ಸೈನಿಕ ಕ್ಷೇಮಾಭಿವೃದ್ಧಿ ಸಂಘ ದಿಂದ ಸ್ಥಳೀಯ ಯುವಕರಿಗೆ ಸೈನಿಕ ತರಬೇತಿ ದೊರೆಯುವಂತಾಗಲಿ. ಸರ್ಕಾರಿ ಶಾಲೆಗಳು ಬಡವಾಗುತ್ತಿವೆ ತಮ್ಮ ಬಿಡುವಿನ ಅವಧಿಯಲ್ಲಿ ಹಾಗೂ ತಮ್ಮ ಸಂಘಟನೆಯ ಆರ್ಥಿಕ ನೆರವಿನಿಂದ ನಮ್ಮೂರಿನ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಮತ್ತು ಕ್ರೀಡಾಂಗದಲ್ಲಿ ಸಾಧನೆ ಗೈಯುವಂತೆ ಪ್ರೋತ್ಸಾಹ ನೀಡಿ, ಶಾಲಾ ಅಭಿವೃದ್ಧಿಗೆ ಕೈಜೋಡಿಸಿ ಉತ್ತಮ ಕಾರ್ಯದಲ್ಲಿ ಪಾಲ್ಗೊಂಡ ಸಮುದಾಯ ಸೇವೆಗೆ ಬದ್ದರಾಗಬೇಕೆಂದು ತಿಳಿಸಿದರು.  

ದ್ಯಾವಪ್ಪ ಹಾರುಗೇರಿ ಮಾಜಿ ಸೈನಿಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘಟನೆಯ ಯೋಜನೆಗಳ ಬಗ್ಗೆ ತಿಳಿಸಿ. ನಮ್ಮೂರಿನ ಎಲ್ಲಾ ರಾಜಕೀಯ,  ಮುಖಂಡರು, ಹಿರಿಯರು ಸೈನಿಕ ಭವನಕ್ಕೆ ಬೆಂಬಲ ಸೂಚಿಸಿ, ಆದಷ್ಟು ಬೇಗ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ವಿನಂತಿಸಿದರು. ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಮಾಜಿ ಮತ್ತು ಹಾಲಿ ಸೈನಿಕ ಕ್ಷೇಮಾಭಿವೃದ್ಧಿ ಸಂಘವು ಕಾರ್ಯೋನ್ಮುಮುಖವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು. 

ಮುಖಂಡರಾದ ಸಂಗಪ್ಪ ಅಮಾತಿ, ಸಿದ್ದು ಸಾಗಲೀಕರ, ಮಹಾಲಿಂಗಪ್ಪ ಪುರಾಣಿಕ, ಸಿದ್ದು ಕೊಣ್ಣೂರ,ಶಿವನಗೌಡ ಪಾಟೀಲ,ಬಸವರಾಜ ಪುರಾಣಿಕ,ಹನಮಂತ ಕುಂಬಾರ ಸೈನಿಕರಾದ ಶಿವಪ್ಪ ಹಾದಿಮನಿ, ಭುಜಬುಲೆ ಆಲಗೂರ, ಪರಸಪ್ಪ ಬೀರಾಜನವರ, ಪರಮಾನಂದ ಕೌಜಲಗಿ, ಅಲ್ಲಪ್ಪ ಹಳ್ಳೂರ, ನಿಂಗಪ್ಪ ಹಳ್ಳೂರ, ರಮೇಶ ಪೂಜಾರಿ, ಮುತ್ತಪ್ಪ ಧರ್ಮಟ್ಟಿ, ರಾಕೇಶ ಮುಗಳಖೊಡ ಉಪಸ್ಥಿತರಿದ್ದರು. ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮಕ್ಕೆ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.