30 ಕೋಟಿ ವೆಚ್ಚದಲ್ಲಿ ಶೀಥಲ ಗೃಹ ನಿರ್ಮಾಣ ಕಾಮಗಾರಿಗೆ ಶಿವಾನಂದ ಪಾಟೀಲ್ ಭೂಮಿಪೂಜೆ
Shivanand Patil performs Bhoomi Pooja for the construction of a 30 crore Shithala house
ರಾಣೇಬೆನ್ನೂರು 22: ಜಿಲ್ಲೆಯ ರೈತರು ತಾವು ಬೆಳೆದಂತಹ ಆಹಾರ ಉತ್ಪನ್ನಗಳನ್ನು ಕೆಡದಂತೆ, ಹಾಳಾಗದಂತೆ ಶೇಖರಿಸಿಡಲು ಹಾಗೂ ಅವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವ ದ್ರಷ್ಟಿಯಿಂದ 30 ಕೋಟಿ ವೆಚದಲ್ಲಿ ಶೀಥಲ ಗೃಹ ನಿರ್ಮಾಣ ಮಾಡುತ್ತಿದ್ದೇವೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ರಾಣೆಬೆನ್ನೂರ ಪಟ್ಟಣದ ಹೂಲಿಹಳ್ಳಿ- ಕೂನಬೇವು ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರವಿವಾರ 8794 ಮೆ. ಟನ್ ಸಾಮರ್ಥ್ಯದ ಮೂರು ನೂತನ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಎ.ಪಿ.ಎಂ.ಸಿ.ಯಲ್ಲಿರುವ ರೈತರು ಹಾಗೂ ಅಲ್ಲಿನ ವರ್ತಕರು ಶೀಥಲ ಗೃಹಗಳ ಸೌಲಭ್ಯದ ಕೊರತೆ ಎದುರಿಸುತ್ತಿರುವುದನ್ನು ಮನಗಂಡು ಆರ್ ಐಡಿಎಫ್-30 ಯೋಜನೆಯಡಿಯಲ್ಲಿ ಅನುಮೋದನೆಗೊಂಡ ಮೂರು ಶೀಥಲ ಗೃಹಗಳನ್ನು ನಿರ್ಮಾಣಮಾಡುತ್ತಿದ್ದೇವೆ ಈ ಮಾರುಕಟ್ಟೆ ಪ್ರಾಂಗಣವು ಆಧುನಿಕ ಮೂಲಭೂತ ಸೌಲಭ್ಯ-ಸೌಕರ್ಯಗಳನ್ನು ಒಳಗೊಂಡಿರಲಿದೆ ಜಿಲ್ಲೆಯ ರೈತರು ಹಾಗೂ ವರ್ತಕರು ತಾವು ಬೆಳೆದಂತಹ ಹಾಗೂ ಖರೀದಿಸಿದಂತಹ ಕೃಷಿ ಉತ್ಪನ್ನಗಳನ್ನು ಸಂಗ್ರಹಣೆ ಮಾಡಲು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದರು.
ಹಿರಿಯರಾದ ಕೆ.ಬಿ. ಕೋಳಿವಾಡ ಹಾಗೂ ಬಸವರಾಜ ಶಿವಣ್ಣನವರ ದೂರದೃಷ್ಟಿಯಿಂದ 220 ಕೋಟಿ ವೆಚದಲ್ಲಿ ಹೂಲಿಹಳ್ಳಿ ಎ ಪಿ ಎಂ ಸಿ ಮಾರುಕಟ್ಟೆಯನ್ನು 2023ರಲ್ಲಿ ನಿರ್ಮಾಣಮಾಡಲಾಗಿದೆ ಕಾರಣಾಂತರಗಳಿಂದ ಈ ಪ್ರಾಂಗಣವು ರೈತರಿಗೆ ಬಳಕೆಯಾಗಿರಲಿಲ್ಲ ಆದರೆ ಇಂದು 153 ಜನರಿಗೆ ಮಳಿಗೆಗಳನ್ನು ಹಂಚಿಕೆ ಮಾಡಿದ್ದೇವೆ ಆದರೆ ಅವರುಗಳು ಇನ್ನೂ ಅಂಗಡಿಗಳನ್ನು ತೆರೆದಿಲ್ಲ ಒಂದು ವೇಳೆ ಅವರುಗಳು ಇಲ್ಲಿ ಅಂಗಡಿಗಳನ್ನು ತೆರೆದಲ್ಲಿ ಇದು ರಾಜ್ಯದ ಆಧುನಿಕ ಮಾರುಕಟ್ಟೆವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಡಗಿ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ಶಿವಣ್ಣನವರ ಮಾತನಾಡಿ, ಶೀಥಲ ಗೃಹ ನಿರ್ಮಾಣದಿಂದ ರೈತರಿಗೆ ತುಂಬಾನೇ ಉಪಯೋಗವಾಗಲಿದೆ ಕಾಲ ಕಾಲಕ್ಕೆ ರೈತರು ಬೆಳೆದಂತಹ ಕೃಷಿ ಉತ್ಪನ್ನಗಳನ್ನು ಸಂಗ್ರಹಣೆ ಮಾಡಲು ಶೀಥಲ ಗೃಹದ ಕೊರತೆ ಇತ್ತು ಇಂದು ಅದು ಕೂಡ ಸಾಕರವಾಗಿದೆ. ಇದು ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಹೈಟೆಕ್ ರೇಷ್ಮೆ ಮಾರುಕಟ್ಟೆ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಅಜೀಮ್ಪೀರ ಖಾದ್ರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಗಳಾದ ಶೈಲಜಾ ಎಂ. ವಿ, ಪರಮೇಶ್ವರ ನಾಯಕ್, ಮಾಜಿ ಅಧ್ಯಕ್ಷ ಬಸವರಾಜ ಸವಣೂರು, ಏಕನಾಥ ಭಾನುವಳ್ಳಿ, ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಈ.ಹಲಗೇರಿ, ಉಪಾಧ್ಯಕ್ಷ ಲಕ್ಷ್ಮಿ ರ. ಚಟ್ನಿ, ಗುಡ್ಡದ ಅನ್ವೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಸವ್ವ ಕ.ತಳವಾರ, ಉಪಾಧ್ಯಕ್ಷ ಸೋಮಲಿಂಗಪ್ಪ ದೊಡ್ಡ ಬೂದಿಹಾಳ, ವಾರ್ತಕರ ಸಂಘದ ಅಧ್ಯಕ್ಷ ಚನ್ನಬಸವರಾಜ ಕುರುವತ್ತಿ, ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು, ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 